'ಎಸ್ಸೆಸ್ಸೆಲ್ಸಿ ಪಾಸಾದ ಹಲವರಿಗೆ ಓದು ಬರಹ ಬರದು: ಇನ್ನು ಮುಂದೆ ಹೀಗಿರುವುದಿಲ್ಲ'

| Published : Jul 01 2024, 01:49 AM IST / Updated: Jul 01 2024, 05:03 AM IST

'ಎಸ್ಸೆಸ್ಸೆಲ್ಸಿ ಪಾಸಾದ ಹಲವರಿಗೆ ಓದು ಬರಹ ಬರದು: ಇನ್ನು ಮುಂದೆ ಹೀಗಿರುವುದಿಲ್ಲ'
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕ್ಷೇತ್ರದ ಸಾಧನೆಗೆ ಹೆಸರುವಾಸಿಯಾಗಿರುವ ಕೇರಳದ ಸಚಿವರೊಬ್ಬರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಹಲವು ವಿದ್ಯಾರ್ಥಿಗಳಿಗೆ ಸರಿಯಾಗಿ ಓದಲು ಹಾಗೂ ಬರೆಯಲು ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಲಪ್ಪುಳ: ಶಿಕ್ಷಣ ಕ್ಷೇತ್ರದ ಸಾಧನೆಗೆ ಹೆಸರುವಾಸಿಯಾಗಿರುವ ಕೇರಳದ ಸಚಿವರೊಬ್ಬರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಹಲವು ವಿದ್ಯಾರ್ಥಿಗಳಿಗೆ ಸರಿಯಾಗಿ ಓದಲು ಹಾಗೂ ಬರೆಯಲು ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮಾತನಾಡಿದ ಸಚಿವ ಸಾಜಿ ಚೆರಿಯನ್, ‘ಮೊದಲೆಲ್ಲ ಕನಿಷ್ಠ 210 ಅಂಕಗಳನ್ನು ಪಡೆಯುವುದೇ ಕಷ್ಟವಿತ್ತು. ಆದರೆ ಈಗ ಎಲ್ಲರೂ ತೇರ್ಗಡೆಯಾಗುತ್ತಿದ್ದಾರೆ. ಆದರೆ ಪಾಸಾದ ಹಲವರಿಗೆ ಓದಲು ಹಾಗೂ ಬರೆಯಲು ಬಾರದು’ ಎಂದು ಹೇಳಿದರು.

‘ಯಾರಾದರೂ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅದರ ದೋಷವನ್ನು ಸರ್ಕಾರದ ಮೇಲೆ ಹೊರಿಸಲಾಗುತ್ತಿತ್ತು. ಹಾಗಾಗಿ ಉತ್ತರ ಪತ್ರಿಕೆಗಳನ್ನು ಉದಾರವಾಗಿ ತಿದ್ದುವ ಪರಿಪಾಠ ಆರಂಭವಾಗಿತ್ತು. ಆದರೆ ಇನ್ನು ಮುಂದೆ ಹೀಗಿರುವುದಿಲ್ಲ. ಪ್ರಸ್ತುತ ಸಾಮಾನ್ಯ ಶಿಕ್ಷಣ ಸಚಿವರಾಗಿರುವ ವಿ. ಶಿವನ್‌ಕುಟ್ಟಿ ಇದರಲ್ಲಿ ಬದಲಾವಣೆ ತರಲು ಹೊರಟಿದ್ದಾರೆ’ ಎಂದರು.