ಸಾರಾಂಶ
2024ರ ಜನವರಿಯಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ರಾಮಮಂದಿರಕ್ಕೆ ನೇಮಿಸಿಕೊಳ್ಳಲು ಉದ್ದೇಶಿಸಲಾಗಿರುವ 20 ಅರ್ಚಕರ ಹುದ್ದೆಗೆ ದೇಶವ್ಯಾಪಿ 3000 ಜನರು ಅರ್ಜಿ ಹಾಕಿದ್ದಾರೆ.
200 ಅರ್ಹರು ಸಂದರ್ಶನಕ್ಕೆ ಆಯ್ಕೆ
6 ತಿಂಗಳ ತರಬೇತಿ ಬಳಿಕ 20 ಮಂದಿ ನೇಮಕಅಯೋಧ್ಯೆ: 2024ರ ಜನವರಿಯಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ರಾಮಮಂದಿರಕ್ಕೆ ನೇಮಿಸಿಕೊಳ್ಳಲು ಉದ್ದೇಶಿಸಲಾಗಿರುವ 20 ಅರ್ಚಕರ ಹುದ್ದೆಗೆ ದೇಶವ್ಯಾಪಿ 3000 ಜನರು ಅರ್ಜಿ ಹಾಕಿದ್ದಾರೆ. ಈ ಪೈಕಿ ಅರ್ಜಿ ಹಾಕಿದ 3000 ಜನರ ಪೈಕಿ ಅಂತಿಮವಾಗಿ 200 ಜನರನ್ನು ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಸದ್ಯ ಈ 200 ಜನರನ್ನು ಅಯೋಧ್ಯೆಯಲ್ಲಿರುವ ವಿಎಚ್‌ಪಿಯ ಕರಸೇವಕಪುರಂನಲ್ಲಿ ಸಂದರ್ಶನಕ್ಕೆ ಒಳಪಡಿಸಲಾಗಿದೆ. ಮೂವರು ಹಿರಿಯ ಧರ್ಮ ಗುರುಗಳು ಈ 200 ಜನರನ್ನು ಸಂದರ್ಶನ ಮಾಡುತ್ತಿದ್ದಾರೆ ಎಂದು ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.ಆಯ್ಕೆಯಾದವರನ್ನು 6 ತಿಂಗಳ ತರಬೇತಿ ಬಳಿಕ ಅರ್ಚಕರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ನೇಮಕ ಆಗದವರಿಗೂ ವಿವಿಧ ರೀತಿಯ ತರಬೇತಿ ನೀಡಿ ಬಳಿಕ ಪ್ರಮಾಣಪತ್ರ ನೀಡಿ ಕಳುಹಿಸಲಾಗುತ್ತದೆ. ಮುಂದೆ ಹೊಸ ನೇಮಕದ ಅಗತ್ಯ ಬಿದ್ದಲ್ಲಿ ಅವರನ್ನು ಪರಿಗಣಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ ಎಲ್ಲರಿಗೂ ಉಚಿತ ವಸತಿ, ಆಹಾರ ಮತ್ತು ತಲಾ 2000 ರು. ಸ್ಟೈಫಂಡ್ ನೀಡಲಾಗುತ್ತದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.