ಸಾರಾಂಶ
ಕೋಮು ಸಂಘರ್ಷದಿಂದ ನಲುಗಿರುವ ಮಣಿಪುರದ ರಾಜಧಾನಿ ಇಂಫಾಲದ ವಿಮಾನ ನಿಲ್ದಾಣದ ಬಳಿಯ ಆಗಸದಲ್ಲಿ ಭಾನುವಾರ ನಿಗೂಢ ವಸ್ತುವಿನ ಸಂಚಾರ ಕಂಡುಬಂದಿದೆ
ಇಂಫಾಲ್: ಕೋಮು ಸಂಘರ್ಷದಿಂದ ನಲುಗಿರುವ ಮಣಿಪುರದ ರಾಜಧಾನಿ ಇಂಫಾಲದ ವಿಮಾನ ನಿಲ್ದಾಣದ ಬಳಿಯ ಆಗಸದಲ್ಲಿ ಭಾನುವಾರ ನಿಗೂಢ ವಸ್ತುವಿನ ಸಂಚಾರ ಕಂಡುಬಂದಿದೆ. ಡ್ರೋನ್ ರೀತಿಯ ಈ ವಸ್ತುವಿನ ಹಾರಾಟದ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರವನ್ನು 4 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ಕೆಲವು ವಿಮಾನಗಳ ಆಗಮನವನ್ನು ತಡೆದು, ಕೋಲ್ಕತಾಕ್ಕೆ ಕಳುಹಿಸಿಕೊಡಲಾಯಿತು. ಬಳಿಕ ಮತ್ತೆ ಯಾವುದೇ ಸಂಚಾರ ಪತ್ತೆಯಾಗದ ಹಿನ್ನೆಲೆಯಲ್ಲಿ, ಸುತ್ತಮುತ್ತ ಪ್ರದೇಶದ ತಪಾಸಣೆ ಬಳಿಕ ಮತ್ತೆ ವಿಮಾನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.