ಎಕ್ಸ್‌ಕಾನ್‌ 2025ರಲ್ಲಿ ಭಾಗವಹಿಸಿರುವ ಜೆಸಿಬಿ ಇಂಡಿಯಾ ತನ್ನ ವಿನೂತನ ಉತ್ಪನ್ನಗಳನ್ನು ಪ್ರದರ್ಶಿಸಿದೆ. ಈ ಕುರಿತ ವಿವರ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಜೆಸಿಬಿ ಇಂಡಿಯಾ ಸಂಸ್ಥೆಯು ಎಕ್ಸ್‌ಕಾನ್ 2025ರಲ್ಲಿ ತನ್ನ ಸುಧಾರಿತ ಯಂತ್ರಗಳು ಮತ್ತು ಡಿಜಿಟಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. 10 ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ವಿಶೇಷವಾಗಿ 52 ಟನ್ ತೂಕದ ಭಾರಿ ದೊಡ್ಡ ಅಗೆಯುವ ಯಂತ್ರ ಬಿಡುಗಡೆ ಮಾಡಿದೆ.

ದೇಶೀಯ ಮತ್ತು ಜಾಗತಿಕ ರಫ್ತು ಮಾರುಕಟ್ಟೆಗಳಿಗಾಗಿ ಭಾರತದಲ್ಲೇ ತಯಾರಿಸಲಾದ ಜೆಸಿಬಿಯ ಅತಿದೊಡ್ಡ ಅಗೆಯುವ ಯಂತ್ರ ಇದಾಗಿದೆ.

ಜೆಸಿಬಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಶೆಟ್ಟಿ ಅವರು ಮಾತನಾಡಿ, ‘ಇದೊಂದು ಉತ್ತಮ ವೇದಿಕೆಯಾಗಿದ್ದು, ಕಾರ್ಯತಂತ್ರದ ಸಹಯೋಗ ಮತ್ತು ದೀರ್ಘಕಾಲೀನ ವ್ಯಾವಹಾರಿಕ ಅಭಿವೃದ್ಧಿಗೆ ಉತ್ತಮ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಜೆಸಿಬಿ ಭಾರತದಿಂದ 135ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ ಮತ್ತು ಈ ವರ್ಷ ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಗ್ರಾಹಕರು ನಮ್ಮನ್ನು ಭೇಟಿ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೆಸಿಬಿ ತನ್ನ ಹೈಡ್ರೋಜನ್ ಪೋರ್ಟ್‌ಪೋಲಿಯೋವನ್ನು ಹೈಡೋಜನ್ - ಚಾಲಿತ ಜಿಲ್ಲೆಟ್ ಅನ್ನು ಬಿಡುಗಡೆ ಮಾಡುವ ಮೂಲಕ ವಿಸ್ತರಿಸಿತು.

ಜೆಸಿಬಿ ಇಂಡಿಯಾ ತನ್ನ ಬಿಡಿ ಭಾಗಗಳ ಆನ್ ಲೈನ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಿದೆ. ಈ ಡಿಜಿಟಲ್ ಪ್ಲಾಟ್ ಫಾರ್ಮ್ ಗ್ರಾಹಕರಿಗೆ ಜೆಸಿಬಿ ಬಿಡಿಭಾಗಗಳ ಸಮಗ್ರ ಕ್ಯಾಟಲಾಗ್ ಅನ್ನು ಒದಗಿಸುತ್ತದೆ. ವೇಗವಾದ ಮತ್ತು ಮಾಹಿತಿಯುಕ್ತ ಖರೀದಿಯ ಅನುಭವ ನೀಡುತ್ತದೆ. ಹೆಚ್ಚುವರಿಯಾಗಿ ಜೆಸಿಬಿ ಮುಂದಿನ ಪೀಳಿಗೆಯ ಟೆಲಿಮ್ಯಾಟಿಕ್ಸ್ ಅನ್ನು ಪ್ರದರ್ಶಿಸಿತು.

ಈ ವರ್ಷದ ಆರಂಭದಲ್ಲಿ, ಜೆಸಿಬಿ ದಕ್ಷೆ ಎಂಬ ಅತ್ಯಾಧುನಿಕ ವ್ಯಾಕ್‌ ಹೋ ಸಿಮ್ಯುಲೇಟರ್ ಅನ್ನು ಪರಿಚಯಿಸಿತು. ಈ ಸಿಮ್ಯುಲೇಟರ್ ಒಟ್ಟಾರೆ ತರಬೇತಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಜೆಸಿಬಿ ತನ್ನ ಅಗೆಯುವ ಸಿಮ್ಯುಲೇಟರ್ ಅನ್ನು 2026ರ ಆರಂಭದಲ್ಲಿ ಬಿಡುಗಡೆ ಮಾಡಲಿದೆ.

ಭಾರತದಾದ್ಯಂತ 700ಕ್ಕೂ ಹೆಚ್ಚು ಡೀಲರ್ ಕೇಂದ್ರಗಳನ್ನು ಹೊಂದಿರುವ ಜೆಸಿಬಿ ಗ್ರಾಹಕರು ತಮ್ಮ ಕಾರ್ಯಾಚರಣೆಗಳು ಎಲ್ಲೇ ಇದ್ದರೂ ಸಮಯೋಚಿತ ಸೇವೆ ಪಡೆಯುವುದನ್ನು ಖಚಿತಪಡಿಸುತ್ತದೆ. ಕಂಪನಿಯ ಬಿಡಿಭಾಗಗಳ ಮೂಲಸೌಕರ್ಯವು 40,000ಕ್ಕೂ ಹೆಚ್ಚು ಬಿಡಿಭಾಗಗಳನ್ನು ಸಂಗ್ರಹಿಸುವ ಐದು ಕಾರ್ಯತಂತ್ರದ ಸ್ಥಳದಲ್ಲಿರುವ ಬಿಡಿಭಾಗಗಳ ಗೋದಾಮುಗಳನ್ನು ಒಳಗೊಂಡಿದೆ. ಈ ನೆಟ್ವರ್ಕ್ 300ಕ್ಕೂ ಹೆಚ್ಚು ಸೇವಾ ವ್ಯಾನ್‌ ಗಳು, 183 ಬಿಡಿಭಾಗಗಳ ವ್ಯಾನ್‌ಗಳು, ಸಂಪೂರ್ಣವಾಗಿ ಸುಸಜ್ಜಿತವಾದ ವರ್ಕ್ಯಾಪ್-ಆನ್-ವೀಲ್ಸ್ ಘಟಕಗಳು ಮತ್ತು 6,000 ಕ್ಕೂ ಹೆಚ್ಚು ತರಬೇತಿ ಪಡೆದ ಸೇವಾ ಎಂಜಿನಿಯರ್‌ಗಳು ಮತ್ತು 3500ಕ್ಕೂ ಹೆಚ್ಚು ಮೊಬೈಲ್ ಸೇವಾ ಎಂಜಿನಿಯರ್‌ಗಳ ಬೆಂಬಲ ಪಡೆದಿದೆ.