ಬಿಎಸ್ಎಫ್‌ ಯೋಧನ ಕೊಂದಿದ್ದ 2 ಲಷ್ಕರ್‌ ಉಗ್ರರ ಆಸ್ತಿ ಜಪ್ತಿ

| Published : Dec 08 2023, 01:45 AM IST

ಬಿಎಸ್ಎಫ್‌ ಯೋಧನ ಕೊಂದಿದ್ದ 2 ಲಷ್ಕರ್‌ ಉಗ್ರರ ಆಸ್ತಿ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಆ.5, 2015ರಂದು ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆ ನರಸೂ ಗ್ರಾಮದಲ್ಲಿ ಗಡಿ ಭದ್ರತಾ ಪಡೆಯ ಯೋಧನೊಬ್ಬನನ್ನು ಕೊಂದಿದ್ದ ಇಬ್ಬರು ಲಷ್ಕರ್‌-ಇ-ತೊಯ್ಬಾ ಉಗ್ರರ ಸ್ಥಿರಾಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜಪ್ತಿ ಮಾಡಿದೆ.

ಆಗಸ್ಟ್‌ 5, 2015ರಂದು ನಡೆದಿದ್ದ ಘಟನೆ

ಶ್ರೀನಗರ: ಆ.5, 2015ರಂದು ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆ ನರಸೂ ಗ್ರಾಮದಲ್ಲಿ ಗಡಿ ಭದ್ರತಾ ಪಡೆಯ ಯೋಧನೊಬ್ಬನನ್ನು ಕೊಂದಿದ್ದ ಇಬ್ಬರು ಲಷ್ಕರ್‌-ಇ-ತೊಯ್ಬಾ ಉಗ್ರರ ಸ್ಥಿರಾಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜಪ್ತಿ ಮಾಡಿದೆ.ಇಬ್ಬರು ಉಗ್ರರನ್ನು ಫಯಾಜ಼್ ಅಹ್ಮದ್ ಐಟೂ ಉರ್ರ್ಪ ಫಯಾಜ಼್ ಖಾರ್‌ ಮತ್ತು ಖುರ್ಷೀದ್‌ ಅಹ್ಮದ್‌ ಭಟ್‌ ಅಲಿಯಾಸ್‌ ಸೂರ್ಯ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ, ಸೆಕ್ಷನ್‌ 33(1)ರ ಪ್ರಕಾರ ಕುಲ್ಗಾಂ ಮತ್ತು ಆವಂತಿಪೋರಾದಲ್ಲಿದ್ದ ವಿವಿಧ ಚರಾಸ್ತಿಗಳನ್ನು ಜಪ್ತಿ ಮಾಡಿ ಆದೇಶ ಹೊರಡಿಸಿದೆ.