ಸಾರಾಂಶ
ಆದರೆ ಈ ವಿಡಿಯೋವನ್ನು ರಿವರ್ಸ್ ಇಮೇಜ್ ತಂತ್ರಜ್ಞಾನ ಬಳಸಿ ಹುಡುಕಿದಾಗ ಇದು ತೆಲಂಗಾಣದ್ದಲ್ಲ ಎಂಬುದು ಸಾಬೀತಾಗಿದೆ
ತಮಾಷೆಗಾಗಿ ತೋರಿಸಿರುವುದಾಗಿ ಟ್ವೀಟ್ ಮಾಡಿದ ಆ್ಯಂಕರ್
ಲಂಡನ್: ಬ್ರಿಟನ್‌ನ ಪ್ರಖ್ಯಾತ ಸುದ್ದಿಸಂಸ್ಥೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಸುದ್ದಿ ನಿರೂಪಕಿ ಮರ್ಯಂ ಮೊಶ್ರಿ, ನೇರಪ್ರಸಾರದ ವೇಳೆಯೇ ಮಧ್ಯ ಬೆರಳು ತೋರಿಸಿ ವಿವಾದ ಸೃಷ್ಟಿಸಿದ್ದಾರೆ. ಮಧ್ಯಾಹ್ನದ ವಾರ್ತೆ ಪ್ರಾರಂಭಿಸುವ ಮೊದಲು ಈ ಘಟನೆ ನಡೆದಿದೆ. ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ನಾನು ತನ್ನ ಸಹೋದ್ಯೋಗಿಗಳೊಂದಿಗೆ ತಮಾಷೆಯಲ್ಲಿ ತೊಡಗಿದ್ದೆ. ಬೆರಳುಗಳಲ್ಲಿ ಎಣಿಸುವ ಸಲುವಾಗಿ ಮಧ್ಯಬೆರಳು ಎತ್ತಿದೆ. ಆಗ ನೇರಪ್ರಸಾರ ಏಕಾಏಕಿ ಆರಂಭವಾಗಿದೆ. ಅದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ. ಮಧ್ಯಬೆರಳು ತೋರಿಸುವುದು ಅಶ್ಲೀಲ ಕೃತ್ಯವೆಂದೇ ಸಮಾಜದಲ್ಲಿ ಪರಿಗಣಿತವಾಗಿದೆ.