ಸಾರಾಂಶ
ಕೆಲಸ, ಕೆರಿಯರ್ ಬದುಕಿನ ಬಹುಭಾಗವನ್ನು ಗುಳುಂ ಮಾಡುತ್ತಿರುವಾಗ ನಿದ್ರೆ ಅನ್ನೋದಿಲ್ಲಿ ಮರೀಚಿಕೆ. ಅದನ್ನೇ ಮುಖ್ಯವಾಗಿಟ್ಟುಕೊಂಡು ಸ್ಲೀಪ್ ಟೂರಿಸಂ ಭರ್ಜರಿ ಮೈಲೇಜ್ ಗಿಟ್ಟಿಸಿಕೊಳ್ಳುತ್ತಿದೆ. ಇಲ್ಲಿ ಸುತ್ತಾಟಕ್ಕಿಂತ ನಿದ್ರೆಗೆ, ರೆಸ್ಟ್‌ಗೆ, ಮನಸ್ಸಿನ ಫ್ರೆಶ್‌ನೆಸ್‌ಗೇ ಪ್ರಾಧಾನ್ಯತೆ.
ಕೆಲಸ, ಕೆರಿಯರ್ ಬದುಕಿನ ಬಹುಭಾಗವನ್ನು ಗುಳುಂ ಮಾಡುತ್ತಿರುವಾಗ ನಿದ್ರೆ ಅನ್ನೋದಿಲ್ಲಿ ಮರೀಚಿಕೆ. ಅದನ್ನೇ ಮುಖ್ಯವಾಗಿಟ್ಟುಕೊಂಡು ಸ್ಲೀಪ್ ಟೂರಿಸಂ ಭರ್ಜರಿ ಮೈಲೇಜ್ ಗಿಟ್ಟಿಸಿಕೊಳ್ಳುತ್ತಿದೆ. ಇಲ್ಲಿ ಸುತ್ತಾಟಕ್ಕಿಂತ ನಿದ್ರೆಗೆ, ರೆಸ್ಟ್‌ಗೆ, ಮನಸ್ಸಿನ ಫ್ರೆಶ್‌ನೆಸ್‌ಗೇ ಪ್ರಾಧಾನ್ಯತೆ.
ವಿಶಾಲ್ ಕೆಲಸ ಮುಗಿಸಿ ಮನೆಗೆ ಬರುವಾಗ ಅವನ ಸ್ಮಾರ್ಟ್‌ವಾಚ್ ಮಧ್ಯರಾತ್ರಿ ಮೀರಿದ್ದನ್ನು ತೋರಿಸಿ, ನಿನ್ನ ನಿದ್ರೆಯ ಸಮಯ ಕಡಿಮೆ ಆಗುತ್ತಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದನ್ನು ವಾರ್ನ್ ಮಾಡುತ್ತಿರುತ್ತದೆ. ಸಣ್ಣ ಟೆನ್ಶನ್‌ನಲ್ಲೇ ಹಾಸಿಗೆ ಸೇರಿದವನು ಸುಮಾರು ಹೊತ್ತು ನಿದ್ದೆ ಇಲ್ಲದೇ ಹೊರಳಾಡುತ್ತಾನೆ. ಎಷ್ಟೋ ಹೊತ್ತಿಗೋ ನಿದ್ದೆ ಆವರಿಸಿರುತ್ತದೆ, ಅದು ಗಾಢ ನಿದ್ದೆಯಾಗಿ ಬದಲಾಗುವ ಮೊದಲೇ ಅಲರಾಂ ಹೊಡೆದುಕೊಳ್ಳುತ್ತದೆ. ದೇಹ ಮಲಗು, ಮಲಗು ಅಂದರೆ ಮನಸ್ಸು ಜಿಮ್‌ಗೆ ಲೇಟಾಯ್ತು ಅಂತ ಗಲಾಟೆ ಶುರು ಮಾಡಿರುತ್ತದೆ. ಹಾಗೆ ಎದ್ದವನು ಮತ್ತೆ ಹಾಸಿಗೆ ಸೇರುವುದು ಮಧ್ಯರಾತ್ರಿ!
ಜಿ ಎಂ, ಎಂ ಡಿ ಲೆವೆಲ್‌ನಿಂದ ಸಾಮಾನ್ಯ ಉದ್ಯೋಗಿಗಳ ತನಕ ಈ ಕಾಲದ ಹೆಚ್ಚಿನವರ ಲೈಫ್‌ಸ್ಟೈಲ್ ಹೀಗೇ ಇದೆ. ನಿದ್ದೆಗೆಟ್ಟ ದೇಹ ಮನಸ್ಸಿನ ತುರ್ತು ಅಗತ್ಯ ಗಾಢ ನಿದ್ದೆ. ಈ ಅನಿವಾರ್ಯತೆ ಸೃಷ್ಟಿಸಿರುವ ಹೊಸ ಟ್ರೆಂಡ್ ‘ಸ್ಪೀಪ್ ಟೂರಿಸಂ’.
ಫುಲ್ ರೆಸ್ಟ್
ನಿತ್ಯದ ಟೆನ್ಶನ್‌ನಿಂದ ರಿಲೀಫ್ ಬೇಕೆಂದು ಜನ ಪ್ರಶಾಂತ ಜಾಗಕ್ಕೆ ನಿದ್ರೆಗಾಗಿ ತೆರಳುತ್ತಾರೆ. ಇದು ಸಾಮಾನ್ಯ ಪ್ರವಾಸಕ್ಕಿಂತ ಭಿನ್ನ. ಇಲ್ಲಿ ಸಾಹಸ, ಸುತ್ತಾಟ, ಸಾಂಸ್ಕೃತಿಕ ಅನುಭವಗಳಿಗಿಂತ ನಿದ್ರೆ ಮತ್ತು ವಿಶ್ರಾಂತಿಗೆ ಒತ್ತು ನೀಡಲಾಗುತ್ತದೆ. ಈ ಪ್ರವಾಸದ ಉದ್ದೇಶವೇ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಸುಧಾರಿಸುವುದು.
ನಿದ್ರೆಗೆಂದೇ ವಿಶೇಷ ರೆಸಾರ್ಟ್
ಶಾಂತವಾದ ಪರಿಸರದಲ್ಲಿನ ರೆಸಾರ್ಟ್‌ಗಳು, ವೆಲ್‌ನೆಸ್ ಸೆಂಟರ್‌ಗಳಲ್ಲಿ ವಿಶ್ರಾಂತಿಗೆ ತಕ್ಕಂತ ವಾತಾವರಣ ನಿರ್ಮಿಸಿರುತ್ತಾರೆ. ಸೌಂಡ್ ಪ್ರೂಫ್ ರೂಮ್‌ಗಳು, ಮಂದ ಬೆಳಕು ಮತ್ತು ಆರಾಮದಾಯಕ ವಾತಾವರಣ ಪ್ರಶಾಂತ ನಿದ್ದೆಗೆ ಅನುಕೂಲವಾಗಿರುತ್ತದೆ. ಕೆಲವು ಕಡೆ ಸ್ಲೀಪ್ ಪಾಡ್‌ಗಳು ಅಥವಾ ನಿದ್ರೆ ಕೊಠಡಿಗಳು ಇರುತ್ತವೆ.
ನಿದ್ರೆಗೆ ಸಂಬಂಧಿಸಿದ ಚಟುವಟಿಕೆಗಳು
- ಯೋಗ, ಧ್ಯಾನ, ಆರೊಮಾಥೆರಪಿ, ಮತ್ತು ಮಸಾಜ್‌ನಂಥಾ ನಿದ್ರಾ ಪೂರಕ ಚಟುವಟಿಕೆಗಳಿರುತ್ತವೆ. ಸ್ಲೀಪ್ ಕೋಚಿಂಗ್ ಅಂತ ಕೆಲವು ಎಕ್ಸ್‌ಪರ್ಟ್‌ಗಳು ಗಾಢ ನಿದ್ದೆಗೆ ಜಾರಲು ನೆರವಾಗುತ್ತಾರೆ. ಮೊಬೈಲ್ ಮತ್ತು ಇತರ ಗ್ಯಾಜೆಟ್‌ಗಳ ಬಳಕೆಯನ್ನು ಕಡಿಮೆಗೊಳಿಸುವ ಪ್ರಯತ್ನಗಳಾಗುತ್ತವೆ.
ಒಳ್ಳೆ ಊಟ
ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಆಹಾರ ಪದ್ಧತಿಗಳನ್ನೇ ಈ ಸೆಂಟರ್‌ಗಳಲ್ಲಿ ಅನುಸರಿಸುತ್ತಾರೆ. ಉದಾಹರಣೆಗೆ ಕೆಫೀನ್ ರಹಿತ ಪಾನೀಯಗಳು ಮತ್ತು ಆರೋಗ್ಯಕರ ಊಟದ ವ್ಯವಸ್ಥೆ ಇರುತ್ತದೆ.
ಪ್ರಕೃತಿಯ ಸಾಮೀಪ್ಯ
- ಕಾಡು, ಬೆಟ್ಟಗುಡ್ಡಗಳು, ಸಮುದ್ರ ತೀರ ಅಥವಾ ಗ್ರಾಮೀಣ ಪ್ರದೇಶಗಳಂತಹ ಶಾಂತ ಸ್ಥಳಗಳಲ್ಲಿ ಈ ರೀತಿಯ ಪ್ರವಾಸವನ್ನು ಆಯೋಜಿಸಲಾಗುತ್ತದೆ.
ಚೆನ್ನಾದ ನಿದ್ರೆಯಿಂದ ಮನಸ್ಸೂ ಫ್ರೆಶ್
ಶಾಂತ ವಾತಾವರಣ ಮತ್ತು ವಿಶ್ರಾಂತಿಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಗಾಢ ನಿದ್ರೆಯಿಂದ ರೋಗನಿರೋಧಕ ಶಕ್ತಿ, ಸ್ಮರಣಶಕ್ತಿ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಮನಸ್ಸು ಕ್ರಿಯೇಟಿವ್ ಆಗಿ ಯೋಚನೆ ಮಾಡುವ ಶಕ್ತಿ ಬೆಳೆಸಿಕೊಳ್ಳುತ್ತದೆ.
ಕೇರಳದ ಆಯುರ್ವೇದ ರೆಸಾರ್ಟ್‌ಗಳು, ಹಿಮಾಲಯದ ತಪ್ಪಲು, ಮತ್ತು ರಿಷಿಕೇಶದ ಯೋಗ ಆಶ್ರಮಗಳು ಸೇರಿದಂತೆ ದೇಶದ ಹಲವೆಡೆ ನಿದ್ರಾ ಪ್ರವಾಸದ ಪ್ಯಾಕೇಜ್‌ಗಳಿವೆ. ವಿದೇಶಗಳಲ್ಲಾದರೆ ಬಾಲಿ, ಸಿಟ್ಜರ್‌ಲ್ಯಾಂಡ್, ಜಪಾನ್‌ನ ಒನ್ಸೆನ್ ಬಿಸಿನೀರಿನ ಬುಗ್ಗೆಗಳಿರುವ ಜಾಗಗಳಲ್ಲಿ ಸ್ಪೀಪ್ ಟೂರಿಸಂ ವ್ಯವಸ್ಥೆ ಇದೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))