ಮೋದಿ- ಪುಟಿನ್‌ 50 ನಿಮಿಷ ಸೀಕ್ರೇಟ್‌ ಕಾರ್‌ ಟೂರ್‌!

| N/A | Published : Sep 02 2025, 01:00 AM IST

ಸಾರಾಂಶ

  ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಚ್ಚುವರಿ ತೆರಿಗೆ ಹೇರಿದ ಬೆನ್ನಲ್ಲೇ ಇಲ್ಲಿ ನಡೆಯುತ್ತಿರುವ ಶಾಂಘೈ ಶೃಂಗದ ವೇಳೆ ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಭಾರತದ ಪ್ರಧಾನಿ ಮೋದಿ 50 ನಿಮಿಷ ಸೀಕ್ರೆಟ್‌ ಕಾರ್‌ ಟೂರ್ ನಡೆಸುವ ಮೂಲಕ ಭಾರೀ ಕುತೂಹಲ ಮೂಡಿಸಿದ್ದಾರೆ.

 ಟಿಯಾನ್‌ಜಿನ್‌: ರಷ್ಯಾ ತೈಲ ಖರೀದಿ ವಿರೋಧಿಸಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಚ್ಚುವರಿ ತೆರಿಗೆ ಹೇರಿದ ಬೆನ್ನಲ್ಲೇ ಇಲ್ಲಿ ನಡೆಯುತ್ತಿರುವ ಶಾಂಘೈ ಶೃಂಗದ ವೇಳೆ ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಭಾರತದ ಪ್ರಧಾನಿ ಮೋದಿ 50 ನಿಮಿಷ ಸೀಕ್ರೆಟ್‌ ಕಾರ್‌ ಟೂರ್ ನಡೆಸುವ ಮೂಲಕ ಭಾರೀ ಕುತೂಹಲ ಮೂಡಿಸಿದ್ದಾರೆ.

ಶೃಂಗಸಭೆಯ ಬಳಿಕ ದ್ವಿಪಕ್ಷೀಯ ಚರ್ಚೆ ನಡೆಯಬೇಕಿದ್ದ ಸ್ಥಳಕ್ಕೆ ಮೋದಿ ಮತ್ತು ಪುಟಿನ್‌ ಪ್ರತ್ಯೇಕವಾಗಿ ತೆರಳಬೇಕಿತ್ತು. ಆದರೆ ಶೃಂಗ ನಡೆವ ಸ್ಥಳದ ಹೊರಗೆ 10 ನಿಮಿಷ ಮೋದಿಗಾಗಿ ಕಾದುಕುಳಿತ ಪುಟಿನ್‌, ಬಳಿಕ ಅವರನ್ನು ತಮ್ಮ ಕಾರಿನಲ್ಲೇ ಕೂರಿಸಿಕೊಂಡು ಅಲ್ಲಿಂದ 45 ನಿಮಿಷ ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ನಡೆದ ಮಾತುಕತೆಯ ವಿವರಗಳು ಬಹಿರಂಗವಾಗಿಲ್ಲವಾದರೂ ಅಮೆರಿಕದ ತೆರಿಗೆ ಯುದ್ಧ, ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಅಮೆರಿಕದ ಆಕ್ರೋಶ, ಅಮೆರಿಕವನ್ನು ಜಂಟಿಯಾಗಿ ಮಣಿಸುವ ಕುರಿತು ಉಭಯ ನಾಯಕರು ಆಪ್ತವಾಗಿ ಸಮಾಲೋಚಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಕಾರಿನೊಳಗೆ ಮೋದಿ ಮತ್ತು ಪುಟಿನ್‌ ಒಟ್ಟಾಗಿ ಸಂಚರಿಸಿದ ಫೋಟೋ ಜಾಗತಿಕ ಮಟ್ಟದಲ್ಲೂ ವೈರಲ್ ಆಗಿದ್ದು, ಇದು ಟ್ರಂಪ್‌ಗೆ ನೇರ ಸಂದೇಶ ರವಾನಿಸುವ ಯತ್ನ ಎಂದು ಸ್ವತಃ ಅಮೆರಿಕ ಮಾದ್ಯಮಗಳೇ ಬಣ್ಣಿಸಿವೆ.

Read more Articles on