ಮೋದಿ-ಪುಟಿನ್‌ ಎದುರು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಮೂಕ ಪ್ರೇಕ್ಷಕ

| N/A | Published : Sep 02 2025, 01:01 AM IST

ಮೋದಿ-ಪುಟಿನ್‌ ಎದುರು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಮೂಕ ಪ್ರೇಕ್ಷಕ
Share this Article
  • FB
  • TW
  • Linkdin
  • Email

ಸಾರಾಂಶ

ಶಾಂಘೈ ಶೃಂಗದ ಫೋಟೋ ಸೆಷನ್‌ ವೇಳೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಹಾದುಹೋಗುವಾಗ ಯಾರಿಗೂ ಬೇಡವಾದ ವ್ಯಕ್ತಿಯೊಬ್ಬ ಮೂಲೆಯಲ್ಲಿ ನಿಂತು ನೋಡುವಂತೆ ನಿಂತಿದ್ದ ದೃಶ್ಯವೊಂದು ಭಾರೀ ವೈರಲ್‌ ಆಗಿದೆ.

ಟಿಯಾನ್‌ಜಿನ್‌: ಶಾಂಘೈ ಶೃಂಗದ ಫೋಟೋ ಸೆಷನ್‌ ವೇಳೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಹಾದುಹೋಗುವಾಗ ಯಾರಿಗೂ ಬೇಡವಾದ ವ್ಯಕ್ತಿಯೊಬ್ಬ ಮೂಲೆಯಲ್ಲಿ ನಿಂತು ನೋಡುವಂತೆ ನಿಂತಿದ್ದ ದೃಶ್ಯವೊಂದು ಭಾರೀ ವೈರಲ್‌ ಆಗಿದೆ.

ಫೋಟೋಗೆ ಬಂದಿದ್ದ ಶೆಹಬಾಜ್‌ರನ್ನು ಕ್ಸಿ ಸ್ವಾಗತಿಸಿದ್ದರು. ಬಳಿಕ ಮೋದಿ ಮತ್ತು ಪುಟಿನ್‌ ಒಟ್ಟಿಗೆ ಬಂದಿದ್ದಾರೆ. ಇಬ್ಬರನ್ನು ಸ್ವಾಗತಿಸಿದ ಕ್ಸಿ, ಕೆಲ ಹೊತ್ತು ನಗೆ ಚಟಾಕಿಯಲ್ಲಿ ತೊಡಗಿದ್ದರು. ಬಳಿಕ ಮೋದಿ ಮತ್ತು ಪುಟಿನ್‌ ಒಟ್ಟಿಗೆ ತಮ್ಮ ಸ್ಥಾನದ ಕಡೆಗೆ ನಗುನಗುತ್ತಲೇ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮೋದಿ ಮತ್ತು ಪುಟಿನ್‌ರನ್ನು ಪಾಕ್‌ ಪ್ರಧಾನಿ ಷರೀಫ್‌ ಕೈಲಾಗದ ವ್ಯಕ್ತಿಯಂತೆ ನೋಡುತ್ತಾ ನಿಂತಿದ್ದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಗೌರವ ಪ್ರತೀಕವಾಗಿತ್ತು ಎಂಬ ಮಾತು ಕೇಳಿಬಂದಿವೆ.

Read more Articles on