ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: ಭಾರತದ ಡಿ.ಗುಕೇಶ್‌ಗೆ ಮೊದಲ ಸೋಲು

| Published : Apr 13 2024, 01:02 AM IST / Updated: Apr 13 2024, 04:06 AM IST

ಸಾರಾಂಶ

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ 17 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ಗೆ ಮೊದಲು ಸೋಲು. 14 ಸುತ್ತುಗಳ ಪೈಕಿ 7 ಸುತ್ತುಗಳು ಮುಕ್ತಾಯ. 2ನೇ ಸ್ಥಾನಕ್ಕೆ ಕುಸಿದಿರುವ ಗುಕೇಶ್‌ಗೆ ಪುಟಿದೇಳುವ ಗುರಿ. ಪ್ರಜ್ಞಾನಂದ ಮೇಲೂ ಹೆಚ್ಚಿನ ನಿರೀಕ್ಷೆ.

ಟೊರೊಂಟೊ: ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ 17 ವರ್ಷ ಗ್ರ್ಯಾಂಡ್‌ ಮಾಸ್ಟರ್‌ ಡಿ.ಗುಕೇಶ್‌ ಮೊದಲ ಸೋಲು ಕಂಡಿದ್ದಾರೆ. 7ನೇ ಸುತ್ತಿನಲ್ಲಿ ಅವರು ಫ್ರಾನ್ಸ್‌ನ ಫಿರೌಜಾ ಅಲಿರೇಜಾ ವಿರುದ್ಧ ಸೋಲುಂಡರು. 

ಇದರೊಂದಿಗೆ 2ನೇ ಸ್ಥಾನಕ್ಕೆ ಗುಕೇಶ್‌ ಕುಸಿದಿದ್ದಾರೆ. ಆರ್‌.ಪ್ರಜ್ಞಾನಂದ, ಫ್ಯಾಬಿಯೋ ಕರುನಾ ಜೊತೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇದೇ ವೇಳೆ 7ನೇ ಸುತ್ತಿನಲ್ಲಿ ಪ್ರಜ್ಞಾನಂದ ಅಮೆರಿಕದ ಕರುನಾ ವಿರುದ್ಧ ಡ್ರಾ ಸಾಧಿಸಿದರೆ, ವಿದಿತ್‌ ಅಜರ್‌ಬೈಜಾನ್‌ನ ನಿಜತ್‌ ಅಬಸೊವ್‌ ವಿರುದ್ಧ ಡ್ರಾ ಸಾಧಿಸಿ, ಜಂಟಿ 5ನೇ ಸ್ಥಾನಕ್ಕೇರಿದರು.

ಇನ್ನು ಮಹಿಳೆಯರ ವಿಭಾಗದಲ್ಲಿ ಆರ್‌. ವೈಶಾಲಿಗೆ 3ನೇ ಸೋಲು ಎದುರಾಗಿದೆ. ಟೂರ್ನಿಯಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ಪದೇಪದೇ ವಿಫಲರಾಗುತ್ತಿದ್ದಾರೆ. ಇದೇ ವೇಳೆ, ಕೊನೆರು ಹಂಪಿ ಮತ್ತೊಂದು ಡ್ರಾಗೆ ತೃಪ್ತಿಪಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಅರ್ಹತೆ ಪಡೆಯುವ ಈ ಇಬ್ಬರ ಕನಸು ಬಹುತೇಕ ಭಗ್ನಗೊಂಡಿದೆ.