ಸಾರಾಂಶ
ಲಖನೌ: ಐಪಿಎಲ್ 17ನೇ ಆವೃತ್ತಿಯಲ್ಲಿ ಕಳಪೆ ಆರಂಭ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್, ಶುಕ್ರವಾರ ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ ಸವಾಲನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಡೆಲ್ಲಿ ಈ ಪಂದ್ಯದಲ್ಲಿ ಸುಧಾರಿತ ಬೌಲಿಂಗ್ ಪ್ರದರ್ಶನ ತೋರಬೇಕಿದೆ.
ಮತ್ತೊಂದೆಡೆ ಲಖನೌ ಆರಂಭಿಕ ಸೋಲಿನ ಬಳಿಕ ಸತತ 3 ಪಂದ್ಯಗಳನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪ್ರಚಂಡ ವೇಗಿ ಮಯಾಂಕ್ ಯಾದವ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆದರೂ ಲಖನೌ ಬೌಲಿಂಗ್ ಪಡೆ ಬಲಿಷ್ಠವಾಗಿಯೇ ಇದೆ. ನಾಯಕ ಕೆ.ಎಲ್.ರಾಹುಲ್ ದೊಡ್ಡ ಇನ್ನಿಂಗ್ಸ್ ಆಡಲು ಕಾಯುತ್ತಿದ್ದು, ಅಭಿಮಾನಿಗಳೂ ಅವರ ಮೇಲೆ ಭಾರಿ ನಿರೀಕ್ಷೆ ಇರಿಸಿದ್ದಾರೆ. ರಿಷಭ್ ಪಂತ್, ಡೇವಿಡ್ ವಾರ್ನರ್ ಮೇಲೆ ಭಾರಿ ಒತ್ತಡವಿದ್ದು, ಡೆಲ್ಲಿಯ ಅದೃಷ್ಟ ಬದಲಾಗಬೇಕಿದ್ದರೆ ಈ ಇಬ್ಬರು ತಾರಾ ಆಟಗಾರರು ಮಿಂಚಲೇಬೇಕು.
ಒಟ್ಟು ಮುಖಾಮುಖಿ:
03ಲಖನೌ: 03
ಡೆಲ್ಲಿ: 00
ಸಂಭವನೀಯ ಆಟಗಾರರ ಪಟ್ಟಿಲಖನೌ: ಡಿ ಕಾಕ್, ರಾಹುಲ್ (ನಾಯಕ), ಪಡಿಕ್ಕಲ್, ಸ್ಟೋಯ್ನಿಸ್, ಪೂರನ್, ಬದೋನಿ, ಕೃನಾಲ್, ಬಿಷ್ಣೋಯ್, ನವೀನ್, ಉಶ್, ಎಂ.ಸಿದ್ಧಾರ್ಥ್, ಮೊಹ್ಸಿನ್.
ಡೆಲ್ಲಿ: ಪೃಥ್ವಿ ಶಾ, ವಾರ್ನರ್, ಪೊರೆಲ್, ಸ್ಟಬ್ಸ್, ಪಂತ್ (ನಾಯಕ), ಅಕ್ಷರ್, ಲಲಿತ್, ಕುಶಾಗ್ರ, ರಿಚರ್ಡ್‌ಸನ್, ನೋಕಿಯಾ, ಇಶಾಂತ್, ಖಲೀಲ್.ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ