ಸಾರಾಂಶ
ಚೆನ್ನೈ: ಸ್ನೇಹ ರಾಣಾ ಮಾರಕ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪ್ರಾಬಲ್ಯ ಸಾಧಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ ಭಾರತ, ಪ್ರವಾಸಿ ತಂಡದ ಮೇಲೆ ಫಾಲೋ ಆನ್ ಹೇರಿದೆ.ಭಾರತದ 603 ರನ್‌ಗೆ ಉತ್ತರವಾಗಿ 2ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದ್ದ ದ.ಆಫ್ರಿಕಾ ಶನಿವಾರ ದಿಢೀರ್ ಕುಸಿತ ಕಂಡು, 266ಕ್ಕೆ ಆಲೌಟಾಯಿತು.
249ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 17 ರನ್ ಗಳಿಸುವಷ್ಟರಲ್ಲಿ ಗಂಟುಮೂಟೆ ಕಟ್ಟಿತು. ರಾಣಾ 77 ರನ್‌ಗೆ 8 ವಿಕೆಟ್ ಕಿತ್ತರು.337 ರನ್ ಹಿನ್ನಡೆಯೊಂದಿಗೆ ಫಾಲೋ ಆನ್‌ಗೆ ತುತ್ತಾದ ದ.ಆಫ್ರಿಕಾ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 232 ರನ್ ಗಳಿಸಿದ್ದು, ಇನ್ನೂ 105 ರನ್ ಹಿನ್ನಡೆಯಲ್ಲಿದೆ. ಸುನೆ ಲ್ಯೂಸ್ 109 ರನ್ ಸಿಡಿಸಿದರೆ, ನಾಯಕಿ ವೊಲ್ವಾರ್ಟ್(ಔಟಾಗದೆ 93) ಕ್ರೀಸ್‌ನಲ್ಲಿದ್ದಾರೆ.
ಸೋಮವಾರ ಪಂದ್ಯದ ಕೊನೆ ದಿನವಾಗಿದೆ.ಸ್ಕೋರ್: ಭಾರತ 603/6 ಡಿ., ದ.ಆಫ್ರಿಕಾ 266/10 (ಮಾರಿಯಾನೆ 74, ಸ್ನೇಹ 8-77, ದೀಪ್ತಿ 2-47) ಮತ್ತು 232/2(3ನೇ ದಿನದಂತ್ಯಕ್ಕೆ) (ಲ್ಯೂಸ್ 109, ವೊಲ್ವಾರ್ಟ್ 93*, ಹರ್ಮನ್‌ಪ್ರೀತ್ 1-24)
02ನೇ ಶ್ರೇಷ್ಠ
ಸ್ನೇಹ 77ಕ್ಕೆ 8 ವಿಕೆಟ್ ಕಿತ್ತರು. ಇದು ಮಹಿಳಾ ಟೆಸ್ಟ್‌ನಲ್ಲಿ ಭಾರತೀಯ ಬೌಲರ್‌ನ 2ನೇ ಶ್ರೇಷ್ಠ ಪ್ರದರ್ಶನ. 1995ರಲ್ಲಿ ನೀತು ಡೇವಿಡ್ ಇಂಗ್ಲೆಂಡ್ ವಿರುದ್ಧ 53ಕ್ಕೆ 8 ವಿಕೆಟ್ ಕಿತ್ತಿದ್ದರು.