ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇಂದು ವೇಗಿ ಮೊಹಮದ್‌ ಶಮಿ ವಾಪಸ್‌

| Published : Nov 13 2024, 12:49 AM IST

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇಂದು ವೇಗಿ ಮೊಹಮದ್‌ ಶಮಿ ವಾಪಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಲಿರುವ ವೇಗಿ ಮೊಹಮದ್‌ ಶಮಿ. ಇಂದಿನಿಂದ ಆರಂಭಗೊಳ್ಳಲಿರುವ ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕಣಕ್ಕೆ. ಫಿಟ್ನೆಸ್‌ ಸಾಬೀತು ಪಡಿಸಿದರೆ ಆಸ್ಟ್ರೇಲಿಯಾಕ್ಕೆ ತೆರಳುವ ಅವಕಾಶ ಸಿಗುವ ಸಾಧ್ಯತೆ.

ಕೋಲ್ಕತಾ: ಹಿಮ್ಮಡಿ ಗಾಯದಿಂದಾಗಿ 2023ರ ಏಕದಿನ ವಿಶ್ವಕಪ್‌ ಫೈನಲ್‌ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತದ ತಾರಾ ವೇಗಿ ಮೊಹಮದ್‌ ಶಮಿ, ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಸಂಪೂರ್ಣ ಚೇತರಿಕೆ ಕಂಡಿದ್ದು ಬುಧವಾರದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುವ ಶಮಿ, ಬುಧವಾರದಿಂದ ಇಂದೋರ್‌ನಲ್ಲಿ ಆರಂಭಗೊಳ್ಳಲಿರುವ ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಶಮಿ ಪಾಲಿಗೆ ಇದು ಫಿಟ್ನೆಸ್‌ ಸಾಬೀತುಪಡಿಸಲು ಸಿಕ್ಕಿರುವ ಅವಕಾಶವಾಗಿದ್ದು, ಅವರ ಪ್ರದರ್ಶನದ ಮೇಲೆ ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡದ ಆಡಳಿತವೂ ಸೂಕ್ಷ್ಮ ಕಣ್ಣು ಇಡಲಿದೆ.

ಶಮಿ ತಾವು ಸಂಪೂರ್ಣ ಫಿಟ್‌ ಇರುವುದಾಗಿ ಸಾಬೀತುಪಡಿಸಿದರೆ, ಅವರನ್ನು ಭಾರತ ತಂಡ ಆಸ್ಟ್ರೇಲಿಯಾಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ತಂಡದಲ್ಲಿ ಸದ್ಯ ಜಸ್‌ಪ್ರೀತ್‌ ಬೂಮ್ರಾ ಹಾಗೂ ಮೊಹಮದ್‌ ಸಿರಾಜ್‌ ಹೊರತುಪಡಿಸಿ ಬೇರ್ಯಾವ ಹಿರಿಯ ವೇಗಿಯೂ ಇಲ್ಲದ ಕಾರಣ, ಶಮಿ ತಂಡ ಕೂಡಿಕೊಂಡರೆ ಬಲ ಹೆಚ್ಚಲಿದೆ.