ಟೈಟಾನ್ಸ್‌ಗೆ 7ನೇ ಜಯ, ಸನ್‌ಗೆ 7 ಸೋಲು!

| N/A | Published : May 03 2025, 11:09 AM IST

Gujarat Titans ipl 2025

ಸಾರಾಂಶ

ಗುಜರಾತ್‌ ಟೈಟಾನ್ಸ್‌ನ ರನ್‌ ಮಳೆಯಲ್ಲಿ ಕೊಚ್ಚಿ ಹೋದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಈ ಬಾರಿ ಐಪಿಎಲ್‌ನಿಂದ ಬಹುತೇಕ ಹೊರಬಿದ್ದಿದೆ.  

ಅಹಮದಾಬಾದ್‌: ಗುಜರಾತ್‌ ಟೈಟಾನ್ಸ್‌ನ ರನ್‌ ಮಳೆಯಲ್ಲಿ ಕೊಚ್ಚಿ ಹೋದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಈ ಬಾರಿ ಐಪಿಎಲ್‌ನಿಂದ ಬಹುತೇಕ ಹೊರಬಿದ್ದಿದೆ. ಶುಕ್ರವಾರ ಸನ್‌ರೈಸರ್ಸ್‌ 00 ರನ್‌ಗಳ ಹೀನಾಯ ಸೋಲು ಕಂಡಿತು. ಇದು 10 ಪಂದ್ಯಗಳಲ್ಲಿ ಎದುರಾದ 7ನೇ ಸೋಲು. ಮತ್ತೊಂದೆಡೆ ಗುಜರಾತ್‌ 7ನೇ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವುದರ ಜೊತೆಗೆ ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌, ಸ್ಫೋಟಕ ಆಟವಾಡಿ 6 ವಿಕೆಟ್‌ಗೆ 224 ರನ್ ಕಲೆಹಾಕಿತು. ಸಾಯ್‌ ಸುದರ್ಶನ್‌ 23 ಎಸೆತಕ್ಕೆ 48 ರನ್‌ ಸಿಡಿಸಿದರೆ, ನಾಯಕ ಶುಭ್‌ಮನ್‌ ಗಿಲ್‌(38 ಎಸೆತಕ್ಕೆ 76), ಜೋಸ್‌ ಬಟ್ಲರ್‌(37 ಎಸೆತಕ್ಕೆ 64) ತಲಾ ಅರ್ಧಶತಕ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.

ದೊಡ್ಡ ಮೊತ್ತ ಬೆನ್ನತ್ತಿದ ಸನ್‌ರೈಸರ್ಸ್‌ಗೆ ಉತ್ತಮ ಆರಂಭ ಸಿಕ್ಕಿತು. ಪವರ್‌-ಪ್ಲೇನಲ್ಲಿ ತಂಡ 57 ರನ್‌ ಗಳಿಸಿತು. ಆದರೆ ಬಳಿಕ ಅಭಿಷೇಕ್‌ ಶರ್ಮಾ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್‌ಗೂ ದೊಡ್ಡ ಇನ್ನಿಂಗ್ಸ್‌ ಕಟ್ಟಲು ಸಾಧ್ಯವಾಗಲಿಲ್ಲ. ಏಕಾಂಗಿ ಹೋರಾಟ ಪ್ರದರ್ಶಿಸಿದ ಅಭಿಷೇಕ್‌ 41 ಎಸೆತಗಳಲ್ಲಿ 74 ರನ್‌ ಸಿಡಿಸಿದರು. ತಂಡ 00 ಓವರ್‌ಗಳಲ್ಲಿ 00 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸ್ಕೋರ್‌: ಗುಜರಾತ್‌ 20 ಓವರಲ್ಲಿ 224/6 (ಶುಭ್‌ಮನ್‌ 76, ಬಟ್ಲರ್‌ 64, ಸುದರ್ಶನ್‌ 48, ಉನಾದ್ಕಟ್‌ 3-35), ಸನ್‌ರೈಸರ್ಸ್‌ 00 ಓವರಲ್ಲಿ 00 (ಅಭಿಷೇಕ್‌ 74, ಪ್ರಸಿದ್ಧ್‌ 2-19, ಸಿರಾಜ್‌ 2-33)