ಸಾರಾಂಶ
ಲಖನೌ: ಐಪಿಎಲ್‌ನ ಟಾಪ್-2 ದುಬಾರಿ ಆಟಗಾರರಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್, ಮಂಗಳವಾರ ತಮ್ಮ ತಮ್ಮ ತಂಡಗಳನ್ನು ಪರಸ್ಪರ ಜಿದ್ದಾಜಿದ್ದಿಗೆ ಕಣಕ್ಕಿಳಿಸಲಿದ್ದಾರೆ. ಪಂತ್‌ರ ಲಖನೌ ಸೂಪರ್ ಜೈಂಟ್ಸ್ ತಂಡವು ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ವೀರೋಚಿತ ಸೋಲು ಅನುಭವಿಸಿದರೆ, 2ನೇ ಪಂದ್ಯದಲ್ಲಿ ಘಟಾನುಘಟಿ ಬ್ಯಾಟರ್‌ಗಳನ್ನು ಹೊಂದಿರುವ ಸನ್‌ರೈಸರ್ಸ್ ವಿರುದ್ಧ ನಿರಾಯಾಸವಾಗಿ ಜಯಿಸಿತ್ತು. ಅದೇ ಆತ್ಮವಿಶ್ವಾಸದೊಂದಿಗೆ ಪಂಜಾಬ್ ಪಡೆಯನ್ನೂ ಹಣಿಯಲು ಕಾತರಿಸುತ್ತಿದೆ.
ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ವಿರುದ್ಧ 243 ರನ್ ಚಚ್ಚಿದ್ದ ಪಂಜಾಬ್ ಮತ್ತೊಂದು ದೊಡ್ಡ ಸ್ಕೋರ್ ದಾಖಲಿಸಿ ಜಯದ ಪತಾಕೆ ಹಾರಿಸಲು ಎದುರು ನೋಡುತ್ತಿದೆ. ಆದರೆ, ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಇಲ್ಲಿನ ಏಕನಾ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಬ್ಯಾಟರ್‌ಗಳಿಗೆ ರನ್ ಕಲೆಹಾಕಲು ಸವಾಲು ಎದುರಾಗಲಿದೆ. ಹೀಗಾಗಿ, ಎರಡೂ ತಂಡಗಳು ತಮ್ಮಲ್ಲಿರುವ ಸ್ಪಿನ್ ಅಸ್ತ್ರಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ರಣತಂತ್ರ ರೂಪಿಸಿವೆ. ಸಂಭವನೀಯ ಆಟಗಾರರ ಪಟ್ಟಿ
ಲಖನೌ: ಮಾರ್ಕ್‌ರಮ್, ಮಾರ್ಷ್, ಪೂರನ್, ರಿಷಭ್ ಪಂತ್ (ನಾಯಕ), ಬದೋನಿ, ಮಿಲ್ಲರ್, ಶಾಬಾಜ್, ಶಾರ್ದೂಲ್, ಬಿಷ್ಣೋಯ್, ಪ್ರಿನ್ಸ್ ಯಾದವ್, ಆವೇಶ್, ದಿಗ್ವೇಶ್ ರಾಠಿ
ಪಂಜಾಬ್: ಪ್ರಿಯಾನ್ಶ್, ಪ್ರಭ್‌ಸಿಮ್ರನ್, ಶ್ರೇಯಸ್ (ನಾಯಕ), ಓಮರ್‌ಝಾಯ್, ಮ್ಯಾಕ್ಸ್‌ವೆಲ್, ಸ್ಟೋಯ್ನಿಸ್, ಶಶಾಂಕ್, ಸೂರ್ಯಾನ್ಶ್, ಯಾನ್ಸನ್, ಅರ್ಶ್‌ದೀಪ್, ಚಹಲ್, ವೈಶಾಖ್/ಬ್ರಾರ್‌ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್