ಸಾರಾಂಶ
ಮುಂಬೈ ವಿರುದ್ಧ 0 ರನ್ ಸೋತು ಪ್ಲೇ-ಆಫ್‌ನಿಂದ ಅಧಿಕೃತವಾಗಿ ಔಟ್ । ಸತತ 6 ಜಯ, ಮುಂಬೈ ಅಗ್ರಸ್ಥಾನಕ್ಕೆಸ್ಫೋಟಕ ಬ್ಯಾಟಿಂಗ್, ಮುಂಬೈ 2 ವಿಕೆಟ್‌ಗೆ 217 ರನ್ । ಬ್ಯಾಟಿಂಗ್ ವೈಫಲ್ಯ, ರಾಜಸ್ಥಾನ 102 ರನ್‌ಗೆ ಆಲೌಟ್
ಜೈಪುರ: ಐಪಿಎಲ್‌ನ ಚಾಂಪಿಯನ್ ರಾಜಸ್ಥಾನ ರಾಯಲ್ಸ್ 18ನೇ ಆವೃತ್ತಿ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದೆ. ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ 00 ರನ್‌ಗಳ ಹೀನಾಯ ಸೋಲು ಕಂಡ ತಂಡ ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಗುಳಿಯಿತು. ರಾಜಸ್ಥಾನ ಆಡಿದ 11 ಪಂದ್ಯಗಳಲ್ಲಿ 8ನೇ ಸೋಲುಂಡಿದ್ದು, ಇನ್ನುಳಿದ 3 ಪಂದ್ಯ ಗೆದ್ದರೂ ಉಪಯೋಗವಿಲ್ಲ. ಮತ್ತೊಂದೆಡೆ 5 ಬಾರಿ ಚಾಂಪಿಯನ್ ಮುಂಬೈ ಸತತ 6 ಸೇರಿ ಒಟ್ಟು 7 ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಟಾಸ್ ಸೋತ ಮುಂಬೈ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟರೂ, ಸ್ಫೋಟಕ ಆರಂಭ ಪಡೆಯಿತು. ಕ್ರೀಸ್‌ಗಿಳಿದ ಎಲ್ಲಾ ಬ್ಯಾಟರ್‌ಗಳ ಅಬ್ಬರದಿಂದಾಗಿ ಮುಂಬೈ 2 ವಿಕೆಟ್‌ಗೆ 217 ರನ್ ಕಲೆಹಾಕಿತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ರಿಕೆಲ್ಟನ್ 116 ರನ್ ಸೇರಿಸಿದರು. ರೋಹಿತ್ 36 ಎಸೆತಕ್ಕೆ 53 ರನ್ ಗಳಿಸಿದರೆ, ರಿಕೆಲ್ಟನ್ 38 ಎಸೆತಕ್ಕೆ 61 ರನ್ ಸಿಡಿಸಿದರು. ಬಳಿಕ ಸೂರ್ಯಕುಮಾರ್ 23 ಎಸೆತಕ್ಕೆ ಔಟಾಗದೆ 48, ಹಾರ್ದಿಕ್ ಪಾಂಡ್ಯ 23 ಎಸೆತಕ್ಕೆ ಔಟಾಗದೆ 48 ರನ್ ಬಾರಿಸಿದರು.
ದೊಡ್ಡ ಗುರಿ ಬೆನ್ನತ್ತಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಐಪಿಎಲ್‌ನ ಅತಿ ಕಿರಿಯ ಶತಕವೀರ, 14 ವೈಭವ್ ಸೂರ್ಯವಂಶಿ ಸೊನ್ನೆಗೆ ಔಟಾದರು. ಬಳಿಕ ಯಾವ ಬ್ಯಾಟರ್‌ಗೂ ಕ್ರೀಸ್‌ನಲ್ಲಿ ನೆಲೆಯೂರಲಾಗಲಿಲ್ಲ. ಪವರ್-ಪ್ಲೇನಲ್ಲೇ 5 ವಿಕೆಟ್ ಕಳೆದುಕೊಂಡ ತಂಡ, 00 ಓವರ್‌ಗಳಲ್ಲಿ ಸರ್ವಪತನ ಕಂಡಿತು. ಟ್ರೆಂಟ್ ಬೌಲ್ಟ್, ಬೂಮ್ರಾ ತಲಾ 2 ವಿಕೆಟ್ ಕಿತ್ತರು.
ಸ್ಕೋರ್: ಮುಂಬೈ 20 ಓವರಲ್ಲಿ 217/2 (ರಿಕೆಲ್ಟನ್ 61, ರೋಹಿತ್ 53, ಸೂರ್ಯಕುಮಾರ್ 48*, ಹಾರ್ದಿಕ್ 48*, ಪರಾಗ್ 1-12), ರಾಜಸ್ಥಾನ 000 ಓವರಲ್ಲಿ 0000 (ರಿಯಾನ್ 16, ಬೂಮ್ರಾ 000, ಬೌಲ್ಟ್ 000 )
ಸತತ 11 ಬಾರಿ 25+ ರನ್: ಸೂರ್‍ಯ ದಾಖಲೆ
ಐಪಿಎಲ್‌ನಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳಲ್ಲಿ ತಲಾ 25+ ರನ್ ಕಲೆಹಾಕಿದ ಆಟಗಾರ ಎಂಬ ಖ್ಯಾತಿಗೆ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಅವರು ಈ ಬಾರಿ ಐಪಿಎಲ್‌ನ 11 ಪಂದ್ಯಗಳಲ್ಲೂ ತಲಾ 25+ ರನ್ ಗಳಿಸಿದ್ದಾರೆ. 2014ರಲ್ಲಿ ರಾಬಿನ್ ಉತ್ತಮ 10 ಬಾರಿ ಈ ಸಾಧನೆ ಮಾಡಿದ್ದರು. ಅದನ್ನು ಸೂರ್ಯ ಮುರಿದಿದ್ದಾರೆ.
ಪ್ಲೇ-ಆಫ್ ರೇಸ್‌ನಿಂದ2 ತಂಡಗಳು ಹೊರಕ್ಕೆ
ಈ ಬಾರಿ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದ 2ನೇ ತಂಡ ರಾಜಸ್ಥಾನ. ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಹೊರಬಿದ್ದಿತ್ತು. ಈ ಎರಡೂ ತಂಡಗಳು ತಲಾ 8 ಪಂದ್ಯಗಳಲ್ಲಿ ಸೋತಿವೆ.