ಮಲ್ಯ, ನೀರವ್‌, ಸಂಜಯ್‌ ಗಡೀಪಾರು ಚರ್ಚೆಗೆ ಲಂಡನ್‌ಗೆ ತನಿಖಾ ಸಂಸ್ಥೆಗಳ ತಂಡ

| Published : Jan 17 2024, 02:00 AM IST / Updated: Jan 17 2024, 09:19 AM IST

ಮಲ್ಯ, ನೀರವ್‌, ಸಂಜಯ್‌ ಗಡೀಪಾರು ಚರ್ಚೆಗೆ ಲಂಡನ್‌ಗೆ ತನಿಖಾ ಸಂಸ್ಥೆಗಳ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟ್ಯಂತರ ರುಪಾಯಿ ವಂಚನೆ ಮಾಡಿ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್‌ ಮೋದಿ ಹಾಗೂ ಸಂಜಯ್‌ ಭಂಡಾರಿ ಅವರನ್ನು ಮರಳಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರೀಯ ತನಿಖಾ ಪಡೆಗಳು ಲಂಡನ್‌ಗೆ ತೆರಳಲಿವೆ.

ನವದೆಹಲಿ: ಕೋಟ್ಯಂತರ ರುಪಾಯಿ ವಂಚನೆ ಮಾಡಿ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್‌ ಮೋದಿ ಹಾಗೂ ಸಂಜಯ್‌ ಭಂಡಾರಿ ಅವರನ್ನು ಮರಳಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರೀಯ ತನಿಖಾ ಪಡೆಗಳು ಲಂಡನ್‌ಗೆ ತೆರಳಲಿವೆ ಎಂದು ಮೂಲಗಳು ತಿಳಿಸಿವೆ. 

ಲಂಡನ್‌ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಈ ಮೂವರನ್ನು ಭಾರತದ ವಶಕ್ಕೆ ನೀಡುವಂತೆ ಮನವಿ ಮಾಡಲು ಸಿಬಿಐ, ಇ.ಡಿ.( ಜಾರಿ ನಿರ್ದೇಶನಾಲಯ) ಹಾಗೂ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ವಿಶೇಷ ತಂಡ ಲಂಡನ್‌ಗೆ ತೆರಳಲಿದೆ ಎನ್ನಲಾಗಿದೆ. 

ಈ ಮೂಲಕ ವಿದೇಶಗಳಲ್ಲಿ ಅಡಗಿರುವ ವಂಚಕರಿಗೆ ಪಾಠ ಕಲಿಸಲು ಭಾರತ ಮುಂದಾಗಿದೆ.