ಅಪಾಚೆ ಕಾಪ್ಟರ್ ಪೂರೈಕೆಯಲ್ಲಿ ವಿಳಂಬದ ಕುರಿತು ಚಿಂತಿತರಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ನನ್ನಲ್ಲಿ ನೇರವಾಗಿ ಪ್ರಸ್ತಾಪಿಸಿದ್ದರು. ಸರ್, ನಿಮ್ಮನ್ನು ಭೇಟಿಯಾಗಬಹುದೇ ಎಂದು ಕೇಳಿದ್ದರು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಾಷಿಂಗ್ಟನ್: ‘ಅಪಾಚೆ ಕಾಪ್ಟರ್ ಪೂರೈಕೆಯಲ್ಲಿ ವಿಳಂಬದ ಕುರಿತು ಚಿಂತಿತರಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ನನ್ನಲ್ಲಿ ನೇರವಾಗಿ ಪ್ರಸ್ತಾಪಿಸಿದ್ದರು. ಸರ್, ನಿಮ್ಮನ್ನು ಭೇಟಿಯಾಗಬಹುದೇ ಎಂದು ಕೇಳಿದ್ದರು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ ನಮಗೆ 68 ಅಪಾಚೆ ಹೆಲಿಕಾಪ್ಟರ್‌ಗಳ ಆರ್ಡರ್ ನೀಡಿತ್ತು
ದೇಶದ ರಕ್ಷಣಾ ಉತ್ಪಾದನೆ ಮತ್ತು ವಿದೇಶಗಳಿಗೆ ಶಸ್ತ್ರಾಸ್ತ್ರ ಮಾರಾಟಗಳ ಕುರಿತ ಸಭೆಯಲ್ಲಿ ಮಾತನಾಡಿದ ಟ್ರಂಪ್, ‘ಭಾರತ ನಮಗೆ 68 ಅಪಾಚೆ ಹೆಲಿಕಾಪ್ಟರ್‌ಗಳ ಆರ್ಡರ್ ನೀಡಿತ್ತು. ಈ ಬಗ್ಗೆ ಮೋದಿ ನನ್ನೊಂದಿಗೆ ನೇರವಾಗಿ ಪ್ರಸ್ತಾಪ ಮಾಡಿದ್ದರು. ನನ್ನನ್ನು ಸರ್ ಎಂದು ಸಂಬೋಧಿಸುತ್ತಾ, ನಾವು ಅಪಾಚೆ ಹೆಲಿಕಾಪ್ಟರ್‌ಗಾಗಿ 5 ವರ್ಷದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು. ಈ ವೇಳೆ ಪೂರೈಕೆಯಾಗದ ಅಪಾಚೆಗಳ ಬಗ್ಗೆ ಪ್ರತಿಕ್ರಿಯಿಸಿ, ‘ನಾವಿದನ್ನು(ವಿಳಂಬ) ಸರಿಪಡಿಸುತ್ತೇವೆ’ ಎಂದು ಭರವಸೆ ನೀಡಿದೆ’ ಎಂದು ಹೇಳಿದ್ದಾರೆ.
ಒಳ್ಳೆ ಸಂಬಂಧವಿದೆ:
ಇದೇ ವೇಳೆ, ‘ಮೋದಿ ಜೊತೆಗೆ ನನಗೆ ಒಳ್ಳೆ ಸಂಬಂಧವಿದೆ. ಆದರೆ ನಾವು ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಮೋದಿಗೆ ನನ್ನ ಬಗ್ಗೆ ಅತೃಪ್ತಿ ಇದೆ’ ಎಂದೂ ಟ್ರಂಪ್ ಹೇಳಿದರು.
- ಭಾರತ-ಅಮೆರಿಕ ನಡುವೆ ಕೆಲವು ತಿಂಗಳಿಂದ ಸುಂಕ ಸಂಘರ್ಷ
- ಇದರ ನಡುವೆ ಇತ್ತೀಚೆಗೆ ಟ್ರಂಪ್-ಮೋದಿ ಮಧ್ಯೆ ಫೋನ್ ಮಾತು
- ಅಪಾಚೆ ಹೆಲಿಕಾಪ್ಟರ್‌ಗಳ ತ್ವರಿತ ಪೂರೈಕೆಗೆ ಮೋದಿ ಮನವಿ
- ಈ ವೇಳೆಯೇ ಭೇಟಿ ಆಗಬಹುದಾ ಎಂದು ಟ್ರಂಪ್‌ಗೆ ಕೋರಿಕೆ
- ಮತ್ತೆ ಸಂಚಲನ ಮೂಡಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ

