ಮಂದಿರಕ್ಕೆ ಬಾಬ್ರಿ ಬೀಗ ಆರೋಪ ಪೂರ್ಣ ಸುಳ್ಳು: ಪ್ರಿಯಾಂಕಾ

| Published : May 10 2024, 01:39 AM IST / Updated: May 10 2024, 05:03 AM IST

ಸಾರಾಂಶ

ರಾಮ ಮಂದಿರ ಕುರಿತ ಕೋರ್ಟ್‌ ತೀರ್ಪನ್ನು ಕಾಂಗ್ರೆಸ್‌ ಗೌರವಿಸುತ್ತೆ ಎಂದು ಪ್ರಿಯಾಂಕಾ ಗಾಂಧಿ ನರೇಂದ್ರ ಮೋದಿ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ರಾಯಬರೇಲಿ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಬಾಬ್ರಿ ಬೀಗ ಹಾಕಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ವೇಳೆ ಹೇಳಿದ ಮಾತಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿದ್ದು ‘ಮೋದಿ ಆರೋಪ ಪೂರ್ಣ ಸುಳ್ಳು. ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಗೌರವಿಸುತ್ತದೆ.’ ಎಂದು ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ರಾಯ್‌ಬರೇಲಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ಇದು ಸಂಪೂರ್ಣ ಸುಳ್ಳು. ನ್ಯಾಯಾಲಯದ ತೀರ್ಪನ್ನು ನಮ್ಮ ಪಕ್ಷ ಗೌರವಿಸುತ್ತದೆ. ಈ ಮಾತನ್ನು ಕಾಂಗ್ರೆಸ್ ಹಲವು ಬಾರಿ ಹೇಳಿದೆ. 

ನಾವು ಈ ಹಿಂದೆಯೂ ಅದೇ ರೀತಿ ನಡೆದುಕೊಂಡಿದ್ದೇವೆ ಮತ್ತು ಭವಿಷ್ಯದಲ್ಲಿಯೂ ಅದನ್ನು ಮುಂದುವರೆಸುತ್ತೇವೆ’ ಎಂದು ಮೋದಿಗೆ ತಿರುಗೇಟು ನೀಡಿದರು.ನರೇಂದ್ರ ಮೋದಿ ಇತ್ತೀಚಿಗಷ್ಟೇ ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ರ್‍ಯಾಲಿ ಸಂದರ್ಭದಲ್ಲಿ ‘ಕಾಂಗ್ರೆಸ್ 370 ನೇ ವಿಧಿಯನ್ನು ಮರಳಿ ತರಬಾರದು, ರಾಮ ಮಂದಿರಕ್ಕೆ ಬಾಬ್ರಿ ಬೀಗ ಬೀಳಬಾರದು ಅಂತಿದ್ದರೆ ಎನ್‌ಡಿಎ ಕೂಟ 400 ಕ್ಷೇತ್ರಗಳಲ್ಲಿ ಗೆಲುವು ಪಡೆಯಬೇಕು’ ಎಂದಿದ್ದರು.