ಫ್ಯಾಮಿಲಿ ಡ್ರಾಮಾದಲ್ಲಿ ನಾನು ಸುಳ್ಳು ಬುರುಕಿ: ಸಿಂಧೂ ಶ್ರೀನಿವಾಸ ಮೂರ್ತಿ

| Published : May 02 2024, 12:19 AM IST / Updated: May 02 2024, 05:51 AM IST

ಫ್ಯಾಮಿಲಿ ಡ್ರಾಮಾದಲ್ಲಿ ನಾನು ಸುಳ್ಳು ಬುರುಕಿ: ಸಿಂಧೂ ಶ್ರೀನಿವಾಸ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕುತೂಹಲ ಹುಟ್ಟಿಸಿರುವ ಫ್ಯಾಮಿಲಿ ಡ್ರಾಮಾ ಸಿಸಿನಿಮಾದಲ್ಲಿ ಸುಳ್ಳಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟಿ, ನಿರ್ದೇಶಕಿ ಸಿಂಧೂ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

ಪ್ರಿಯಾ ಕೆರ್ವಾಶೆ

- ಫ್ಯಾಮಿಲಿ ಡ್ರಾಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ?

ದಿವ್ಯಾ ಎಂಬ ಕೆಳ ಮಧ್ಯಮ ವರ್ಗದ ಹುಡುಗಿಯ ಪಾತ್ರ. ಇದೊಂದು ಡಾರ್ಕ್‌ ಹ್ಯೂಮರ್‌ ಸಿನಿಮಾ. ಇಲ್ಲಿ ಕೊಲೆಯ ಪ್ರಸಂಗಗಳೆಲ್ಲ ಬರುತ್ತವೆ. ಸುಳ್ಳು ಹೇಳುವ, ಮೋಸ ಮಾಡುವ ಪಾತ್ರ ನನ್ನದು. ಮಾಮೂಲಿ ಫ್ಯಾಮಿಲಿ ಡ್ರಾಮಾಕ್ಕಿಂತ ಬೇರೆ ಬಗೆಯಲ್ಲಿ, ನೀವು ಊಹೆ ಮಾಡಲೂ ಸಾಧ್ಯವಿಲ್ಲದಂಥಾ ಥಿಯೇಟರಿಕಲ್‌ ಅನುಭವ ನೀಡುವ ಸಿನಿಮಾ.- 

ಕನ್ನಡಕ್ಕೊಬ್ಬ ನಿರ್ದೇಶಕಿ ಸಿಕ್ಕರು ಅಂತ ಖುಷಿಯಲ್ಲಿರುವಾಗಲೇ ನೀವು ನಟನೆಗಿಳಿದುಬಿಟ್ಟಿರಿ?

ನಿರ್ದೇಶನ ಬಿಟ್ಟಿಲ್ಲ. ನಿತ್ಯ ಸ್ಕ್ರಿಪ್ಟ್‌ವರ್ಕ್‌ ಮಾಡುತ್ತಲೇ ಇದ್ದೇನೆ. ಅವಸರವಸರದಲ್ಲಿ ಇಷ್ಟು ಸಿನಿಮಾ ಮಾಡಿ ಮುಗಿಸಲೇಬೇಕು ಎಂಬ ಧಾವಂತ ಇಲ್ಲ. 
 

- ಪಾತ್ರಗಳ ಆಯ್ಕೆ ಹೇಗೆ ಮಾಡುತ್ತೀರಿ?

ಕಥೆಯ ಬಗ್ಗೆ ಚರ್ಚಿಸುವಾಗಲೇ ಹೊಸ ತಂಡದ ಆಸಕ್ತಿ ಹೇಗಿವೆ, ಅವರು ಈ ಕಥೆಯನ್ನು ಹೇಗೆ ವಿಶ್ಯುವಲೈಸ್‌ ಮಾಡಬಹುದು ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತೇನೆ. ನಿರ್ದೇಶಕರಿಗೆ ಅನಾವಶ್ಯಕ ಸಲಹೆ ಕೊಡುವುದು, ಮೂಗು ತೂರಿಸುವುದು ಮಾಡುವುದಿಲ್ಲ.ಬಾಕ್ಸ್‌

ಹೊಸತನದ ಮೂಲಕ ಗಮನ ಸೆಳೆದ ಚಿತ್ರತಂಡ

ಟ್ರೇಲರ್‌, ಪೋಸ್ಟರ್‌ಗಳ ಮೂಲಕವೇ ಹೊಸತನದಿಂದ ಗಮನ ಸೆಳೆಯುತ್ತಿರುವ ಸಿನಿಮಾ ‘ಫ್ಯಾಮಿಲಿ ಡ್ರಾಮಾ’. ರಿಷಬ್‌ ಶೆಟ್ಟಿ ಅವರ ‘ಕಾಂತಾರ’ ಸಿನಿಮಾ ಟೀಮ್‌ನಲ್ಲಿ ಕೆಲಸ ಮಾಡಿರುವ ಯುವ ನಿರ್ದೇಶಕ ಆಕರ್ಷ್‌ ನಿರ್ದೇಶನದ ಈ ಚಿತ್ರದಲ್ಲಿ ಅಭಯ್, ಪೂರ್ಣ ಮೈಸೂರು ಹಾಗೂ ಅನನ್ಯಾ ಅಮರ್ ಮುಖ್ಯಪಾತ್ರದಲ್ಲಿದ್ದಾರೆ. ಮುಗ್ಧ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಟಕ್ಕೆ ಸಿಲುಕುವ ಕಥಾಹಂದರ ಈ ಚಿತ್ರದ್ದು. ಚೇತನ್ ಅಮಯ್ಯ ಸಂಗೀತ ಸಂಯೋಜನೆಯಲ್ಲಿ ರೆಟ್ರೋ ಶೈಲಿಯ ಸಂಗೀತ ಚಿತ್ರಕ್ಕಿದೆ.