ಕುಂದಾಪುರದಲ್ಲಿ ಕಾಂತಾರ ಅಧ್ಯಾಯ 1 ಚಿತ್ರಕ್ಕೆ ಭರ್ಜರಿ ಸೆಟ್‌

| Published : May 03 2024, 01:04 AM IST / Updated: May 03 2024, 06:02 AM IST

ಕುಂದಾಪುರದಲ್ಲಿ ಕಾಂತಾರ ಅಧ್ಯಾಯ 1 ಚಿತ್ರಕ್ಕೆ ಭರ್ಜರಿ ಸೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 40,000 ಚದರ ಅಡಿಗಳಲ್ಲಿ ಕಾಂತಾರ ಪ್ರೀಕ್ವಲ್‌ಗೆ ಸೆಟ್‌ವರ್ಕ್‌ ಭರ್ಜರಿಯಾಗಿ ನಡೆಯುತ್ತಿದೆ. ದೇಶಾದ್ಯಂತದ 600 ಜನ ಬಡಗಿಗಳು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕುದುರೆ ಸವಾರರು, ಕಳರಿ ಪಯೆಟ್ಟು ಕಲಾವಿದರು ತೀವ್ರ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಅಧ್ಯಾಯ 1’ ಚಿತ್ರಕ್ಕೆ ಸೆಟ್‌ ವರ್ಕ್‌ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರು, ಮುಂಬೈ, ಹೈದರಾಬಾದ್‌ ಸೇರಿದಂತೆ ಹಲವು ಭಾಗಗಳ ಸುಮಾರು 600 ಮಂದಿ ಬಡಗಿಗಳು ಸೆಟ್‌ ನಿರ್ಮಾಣದಲ್ಲಿ ತೊಡಗಿದ್ದಾರೆ. ಕುದುರೆ ಸವಾರರು, ಕಳರಿ ಪಯಟ್ಟು ಕಲಾವಿದರೂ ಕಠಿಣ ತರಬೇತಿಯಲ್ಲಿ ನಿರತರಾಗಿದ್ದಾರೆ. ಉಳಿದಂತೆ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಭರದ ತಯಾರಿ ನಡೆದಿದೆ ಎನ್ನಲಾಗಿದೆ.

ರಾಮೋಜಿ ರಾವ್‌ ಫಿಲಂ ಸಿಟಿಯ ಸೆಟ್‌ ವರ್ಕ್‌ ಬಿಟ್ಟರೆ ಇಷ್ಟು ಅಗಾಧವಾದ ಸೆಟ್‌ ವರ್ಕ್ ನಡೆಯುತ್ತಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ. ಸರಿ ಸುಮಾರು 40,000 ಚದರಡಿ ವಿಸ್ತೀರ್ಣದಲ್ಲಿ ಈ ಬೃಹತ್‌ ಸೆಟ್‌ ನಿರ್ಮಾಣವಾಗುತ್ತಿರುವುದು ವಿಶೇಷ. ಒಮ್ಮೆ ಈ ಸೆಟ್‌ ವರ್ಕ್‌ ಕೆಲಸ ಮುಗಿದರೆ ಇಲ್ಲಿ 20 ದಿನಗಳ ಕಾಲ ನಿರಂತರ ಶೂಟಿಂಗ್‌ ನಡೆಯಲಿದೆ.