ನೈಜ ಘಟನೆಗೆ ಪ್ರೇಮ ‘ಸ್ಪರ್ಶ’

| Published : May 04 2024, 12:31 AM IST / Updated: May 04 2024, 05:26 AM IST

ಸಾರಾಂಶ

ರಾಜೀವ್ ನಟನೆಯ ಉಸಿರೇ ಉಸಿರೇ ಸಿನಿಮಾ ವಿಮರ್ಶೆ ಇಲ್ಲಿದೆ.

ಚಿತ್ರ: ಉಸಿರೇ ಉಸಿರೇ

ನಿರ್ದೇಶನ: ಸಿ ಎಂ ವಿಜಯ್

ತಾರಾಗಣ: ರಾಜೀವ್‌, ಸುದೀಪ್‌, ತಾರಾ, ರಾಜೇಶ್‌ ನಟರಂಗ, ಸುಚೇಂದ್ರ ಪ್ರಸಾದ್‌, ಶ್ರೀಜಿತ ಘೋಶ್‌

ರೇಟಿಂಗ್: 3

ಆರ್‌.ಕೆ

ಹಳ್ಳಿಯಲ್ಲಿ ಹುಟ್ಟಿಕೊಳ್ಳುವ ಪ್ರೀತಿ, ನಗರಕ್ಕೆ ಬಂದು ಮೇಲೆ ಏನಾಗುತ್ತದೆ, ಪ್ರೀತಿಸಿ ಕೈ ಹಿಡಿದ ನಾಯಕ ಸಾವು ಬದುಕಿನ ಮಧ್ಯೆ ಇದ್ದರೆ, ಹುಡುಗಿಯೂ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಕೊನೆಗೆ ಏನಾಗುತ್ತದೆ ಎಂಬುದೇ ಚಿತ್ರದ ಕತೆ. ನೈಜ ಘಟನೆಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದು ಹೊಸದಲ್ಲ. ಅದೇ ಸಾಲಿಗೆ ಸೇರುವ ಚಿತ್ರ ‘ಉಸಿರೇ ಉಸಿರೇ’. ಆದರೆ, ಇಲ್ಲಿ ಬರುವ ನೈಜ ಘಟನೆ ಯಾವುದೆಂದು ಪ್ರೇಕ್ಷಕನಿಗೆ ಕೊನೆಯಲ್ಲಿ ಗೊತ್ತಾಗುತ್ತದೆ.

ಎರಡು ಕುಟುಂಬಗಳು. ಇದು ನಾಯಕ ಮತ್ತು ನಾಯಕಿ ಕುಟುಂಬ. ಧರ್ಮ ಬೇರೆ ಬೇರೆಯಾದರೂ ಸ್ನೇಹಕ್ಕೆ ಇದು ಅಡ್ಡಿ ಆಗಲ್ಲ. ಕೌಟುಂಬಿಕ ಸ್ನೇಹವೇ ಪ್ರೀತಿ ಹುಟ್ಟಿಕೊಳ್ಳುವುದಕ್ಕೂ ಕಾರಣವಾಗುತ್ತದೆ. ಇತ್ತ ನಾಯಕ, ನಾಯಕಿ ತಮ್ಮ ಪ್ರೀತಿಯನ್ನು ಹೆತ್ತವರ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಾಗ ಅಲ್ಲೊಂದು ಗಲಾಟೆ ನಡೆಯುತ್ತದೆ. ಈಗ ಹೆತ್ತವರ ವಿರೋಧ ಕಟ್ಟಿಕೊಂಡು ನಗರಕ್ಕೆ ಬರುವ ನಾಯಕ, ನಾಯಕಿಯ ಕತೆ ಇದು.

ಊರು ಬಿಟ್ಟು ಬಂದ ಜೋಡಿ ಮುಂದೆನಾಗುತ್ತದೆ ಎನ್ನುವ ಕುತೂಹಲಕ್ಕೆ ನಿರ್ದೇಶಕರು ನೈಜ ಘಟನೆಯನ್ನು ಲಿಂಕ್‌ ಮಾಡುತ್ತಾರೆ. ಮುಂದೇನು ಎಂಬುಕ್ಕೆ ಸಿನಿಮಾ ನೋಡಬೇಕು. ನೈಜ ಘಟನೆಗೆ ಪ್ರೇಮ ‘ಸ್ಪರ್ಶ’ ನೀಡಿದಂತೆ ಸುದೀಪ್‌ ಅವರ ಪಾತ್ರ ಕೊನೆಯಲ್ಲಿ ಬಂದು ಹೋಗುತ್ತದೆ. ಒಂದೇ ಘಟನೆ ನಂಬಿ ಇಡೀ ಕತೆ ಮಾಡಿದ್ದು ಈ ಚಿತ್ರದ ವಿಶೇಷತೆ. ದೃಶ್ಯಗಳ ಸಂಯೋಜನೆ, ನಿರೂಪಣೆಯಲ್ಲಿ ಇನ್ನೂ ಏನೋ ಬೇಕಿತ್ತು ಅನಿಸುತ್ತದೆ.