ಬೋಗಿ ಬಿಟ್ಟು 3 ಕಿ.ಮೀ. ಚಲಿಸಿದ ರೈಲು ಎಂಜಿನ್‌!

| Published : May 06 2024, 12:31 AM IST / Updated: May 06 2024, 05:51 AM IST

ಸಾರಾಂಶ

ಪಂಜಾಬ್‌ನಲ್ಲಿ ವಿಚಿತ್ರ ಘಟನೆ ನಡೆದಿದ್ದು, ಬೋಗಿಗಳನ್ನು ಬಿಟ್ಟು ಕೇವಲ ಎಂಜಿನ್‌ ಮಾತ್ರ ಚಲಿಸಿದೆ.

ಲೂಧಿಯಾನ: ಬೋಗಿಗಳನ್ನು ಬಿಟ್ಟು ರೈಲಿನ ಎಂಜಿನ್‌ 3 ಕಿ.ಮೀನಷ್ಟು ದೂರ ಹಾಗೆಯೇ ಚಲಿಸಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಪಂಜಾಬ್‌ನಿಂದ ಜಮ್ಮುವಿಗೆ ತೆರಳುತ್ತಿದ್ದ ರೈಲು ಸರ್‌ಹಿಂದ್‌ ನಿಲ್ದಾಣದಲ್ಲಿ ನಿಂತಿತ್ತು. ಆದರೆ ಅದು ಹೇಗೋ ಅಲ್ಲಿ ಬೋಗಿಗಳು ಎಂಜಿನ್‌ನಿಂದ ಕಳಚಿಕೊಂಡಿವೆ. ಇದರ ಅರಿವಿಲ್ಲದೇ ಚಾಲಕ ಹಾಗೆಯೇ 3 ಕಿ.ಮೀ ಮುಂದೆ ಸಾಗಿದ್ದಾನೆ.

ಬಳಿಕ ದೆಹಲಿ-ಕಟ್ರಾ ರೈಲು ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಗಮನಿಸಿ ಚಾಲಕನಿಗೆ ಎಚ್ಚರಿಸಿದ್ದಾರೆ. ಕೂಡಲೇ ಎಂಜಿನ್‌ನನ್ನು ಮರಳಿ ನಿಲ್ದಾಣಕ್ಕೆ ತಂದು ಬೋಗಿ ಜೋಡಿಸಿಕೊಂಡು ರೈಲು ಮುಂದೆ ಹೋಗಿದೆ. ಘಟನೆಗೆ ಸರಿಯಾಗಿ ಬೋಗಿ ಜೋಡಣೆ ಮಾಡದೇ ಇದ್ದದ್ದು ಕಾರಣ ಎಂದು ವಿಭಾಗೀಯ ಅಧಿಕಾರಿ ನವೀನ್‌ ಕುಮಾರ್‌ ಹೇಳಿದ್ದಾರೆ.