ಅಯೋಧ್ಯೆಯಲ್ಲಿ ಮೋದಿ ಹವಾ: ಶ್ರೀರಾಮನಿಗೆ ಆರತಿ

| Published : May 06 2024, 12:30 AM IST / Updated: May 06 2024, 06:02 AM IST

ಸಾರಾಂಶ

ಚುನಾವಣೆ ನಿಮಿತ್ತ ರಾಮನಗರಿಗೆ ಭೇಟಿ, ಭರ್ಜರಿ ರೋಡ್‌ ಶೋ ನಡೆಸಿದ ಪ್ರಧಾನಿ, ಈ ಮೂಲಕ ಪ್ರಾಣ ಪ್ರತಿಷ್ಠಾಪನೆ ಬಳಿಕ ರಾಮಜನ್ಮಸ್ಥಳಕ್ಕೆ ಮೊದಲ ಭೇಟಿ ನೀಡಿದ್ದಾರೆ.

ಅಯೋಧ್ಯೆ: ಲೋಕಸಭೆ ಚುನಾವಣೆ ನಿಮಿತ್ತ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉತ್ತರ ಪ್ರದೇಶದ ಪವಿತ್ರ ನಗರ ಅಯೋಧ್ಯೆಗೆ ಆಗಮಿಸಿದ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಜಾರ್ಖಂಡ್, ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲವು ಕಡೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ಅಲ್ಲಿಂದ ನೇರವಾಗಿ ಸಂಜೆ ಅಯೋಧ್ಯೆಗೆ ಆಗಮಿಸಿದ ರಾಮನಿಗೆ ಆರತಿ ನೆರವೇರಿಸಿದರು. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಟ್ರಸ್ಟ್ ಸದಸ್ಯರು, ಪುರೋಹಿತರು, ಭಾರಿ ಸಂಖ್ಯೆಯ ಭಕ್ತರು ಇದ್ದರು.

ಜ.22ರಂದು ‘ಪ್ರಾಣ-ಪ್ರತಿಷ್ಠಾಪನಾ’ ಸಮಾರಂಭ ನಡೆದ ನಂತರ ರಾಮಮಂದಿರಕ್ಕೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ .

ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ನಗರದಲ್ಲಿ 2 ಕಿಲೋಮೀಟರ್ ಉದ್ದದ ರೋಡ್ ಶೋ ನಡೆಸಿದರು, ಇದು ಸುಗ್ರೀವ ಕೋಟೆಯಿಂದ ಪ್ರಾರಂಭವಾಯಿತು ಮತ್ತು ಲತಾ ಚೌಕ್ ವರೆಗೆ ನಡೆಯಿತು.

ಮೇ 20ರಂದು ಅಯೋಧ್ಯೆ 5ನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ.