ವೃಶ್ಚಿಕ ರಾಶಿಗೆ ಕೆಲಸ ಬದಲಾವಣೆಯ ಸಮಯ! ಮೇ 5ರಿಂದ 11ರವರೆಗಿನ ವಾರಫಲ

| Published : May 05 2024, 02:09 AM IST / Updated: May 05 2024, 05:54 AM IST

ವೃಶ್ಚಿಕ ರಾಶಿಗೆ ಕೆಲಸ ಬದಲಾವಣೆಯ ಸಮಯ! ಮೇ 5ರಿಂದ 11ರವರೆಗಿನ ವಾರಫಲ
Share this Article
  • FB
  • TW
  • Linkdin
  • Email

ಸಾರಾಂಶ

ವೃಶ್ಚಿಕ ರಾಶಿಯವರಿಗೆ ಭರ್ಜರಿ ಅವಕಾಶಗಳು, ಕಟಕಕ್ಕೂ ಉತ್ತಮ ಫಲ. ನಿಮ್ಮ ಈ ವಾರದ ರಾಶಿ ಫಲ ಹೇಗಿದೆ? ಮೇ 5 ರಿಂದ 11ರವರೆಗಿನ ರಾಶಿ ಫಲ

(5-5-24 ರಿಂದ 11-5-24)ಮೇಷರಾಶಿ:

ಅತ್ಯಂತ ಕಷ್ಟಕರವಾದ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ಸಹ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ವಾರ ನೀವು ಕೆಲವು ದೊಡ್ಡ ಅವಕಾಶಗಳನ್ನು ಸಹ ಪಡೆಯಬಹುದು. ವ್ಯಾಪಾರಿಗಳು ಹಿಂದೆ ಹೂಡಿಕೆ ಮಾಡಿದ ಹಣದಿಂದ ಲಾಭ ಪಡೆಯುತ್ತಾರೆ. ಇನ್ನು ಒಂದು ವರ್ಷ ನಿಮಗೆ ಅನೇಕ ವಿಷಯಗಳಲ್ಲಿ ಲಾಭ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನೌಕರಿಯಲ್ಲಿ ಬಡ್ತಿ ಇದೆ. ಸಾಮಾಜಿಕ ಸ್ಥಾನಮಾನ ಗೌರವ ಸಿಗುತ್ತದೆ. ಉನ್ನತ ಅಧಿಕಾರ ಪ್ರಾಪ್ತಿ‌ಇದೆ. ಕೌಟುಂಬಿಕ ಸುಖ ಶಾಂತಿ ಇದೆ.

ವೃಷಭರಾಶಿ:

ವೃತ್ತಿ ಹಾಗೂ ಕೌಟುಂಬಿಕ ಬದುಕಿನ ಒತ್ತಡ ನಿಮ್ಮನ್ನು ಹೈರಾಣಾಗಿಸಬಹುದು. ಕಷ್ಟಪಟ್ಟರೆ ನಿಮಗೆ ಅದನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ವಾರದ ಆರಂಭದಲ್ಲಿ ನಿಮ್ಮ ವೃತ್ತಿಜೀವನವನ್ನು ಸಮತೋಲನಗೊಳಿಸಲು ಮತ್ತು ಜೀವನವನ್ನು ಪ್ರೀತಿಸಲು ಪ್ರಯತ್ನಿಸುತ್ತೀರಿ. ಪ್ರೇಮಿಯೊಂದಿಗೆ ಸಮಯ ಕಳೆಯುವಿರಿ. ಹಣದ ಹರಿವು ಉತ್ತಮವಾಗಿದೆ. ಶನಿ ಹತ್ತನೇ ಮನೆಯಲ್ಲಿ ಇರುವುದು ವೃತ್ತಿಭದ್ರತೆಯನ್ನು ಕೊಡುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಇದೆ. ಪ್ರವಾಸ ಹೋಗುವ ಯೋಗವಿದೆ. ಆದರೆ ಡ್ರೈವಿಂಗ್‌ನಲ್ಲಿ ಜಾಗ್ರತೆ ವಹಿಸಿ.

ಮಿಥುನರಾಶಿ:

ಹಣ ವ್ಯವಹಾರದಲ್ಲಿ ಸಮಸ್ಯೆಯಲ್ಲಿ ಸಿಲುಕಿಕೊಂಡರೆ ಈ ವಾರ ಆ ಹಣ ಮರಳಿ ಕೈಸೇರಬಹುದು. ಕೆಲಸದ ಸ್ಥಳದಲ್ಲಿ ಉಂಟಾಗಿದ್ದ ಮನಸ್ತಾಪಗಳು ಬಗೆಹರಿಯಲಿವೆ. ತರಾತುರಿಯಲ್ಲಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಪ್ರತಿಯೊಂದು ಕಾರ್ಯದಲ್ಲೂ ಚಿಂತನಶೀಲರಾಗಿ ಮುನ್ನಡೆಯಿರಿ. ಕಚೇರಿಯಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಕೆಲವು ಹಣಕಾಸಿನ ನಷ್ಟವನ್ನು ಅನುಭವಿಸಬಹುದು. ವೃತ್ತಿಯಲ್ಲಿ ಒಂದು ಬದಲಾವಣೆ ಇದೆ. ತಾಯಿಗೆ ಒತ್ತಡವಿದೆ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುವುದಿಲ್ಲ.

ಕಟಕರಾಶಿ:

ಸಂಗಾತಿಯ ಬೆಂಬಲದಿಂದ ವೈಯುಕ್ತಿಕ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ವೃತ್ತಿಯಲ್ಲಿ ಶುಭ ಸುದ್ದಿ ಕೇಳುವಿರಿ. ಭಡ್ತಿ ಪಡೆಯುವ ಬಲವಾದ ಸಾಧ್ಯತೆಯಿದೆ. ಸಾಲ ತೀರಿಸುವ ಅವಕಾಶ ಇದೆ. ಮೂರನೇ ಮನೆಯಲ್ಲಿ ಕೇತು ಹಾಗೂ ಲಾಭದಲ್ಲಿ ಗುರು ಇಬ್ಬರೂ ನಿಮಗೆ ಹಣದ ಹರಿವನ್ನು ಉತ್ತಮ ಪಡಿಸುತ್ತಾರೆ. ಅರ್ಹರಿಗೆ ವಿವಾಹಯೋಗ ಇದೆ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ.

ಸಿಂಹರಾಶಿ:

ನಿಮ್ಮ ಹಿಂದಿನ ಹೂಡಿಕೆಗಳಿಂದ ಉತ್ತಮ ಗಳಿಕೆಯ ಸಾಧ್ಯತೆಗಳಿವೆ. ಆಹಾರದ ಮೇಲೆ ಆಸಕ್ತಿ ಹೆಚ್ಚುತ್ತದೆ. ಹಾಗೇ ವ್ಯಾಯಾಮವನ್ನು ಪ್ರಾರಂಭಿಸುತ್ತೀರಿ. ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಆದರೆ ಬದುಕಿನ ಹೊಸ ಮುಖವೊಂದು ನಿಮ್ಮನ್ನು ಗಲಿಬಿಲಿಗೆ ನೂಕಬಹುದು. ಅಂದುಕೊಂದ್ದೇ ಒಂದು ಆಗುವುದೇ ಒಂದು ಅನ್ನೋ ಥರ ಬದಲಾವಣೆಗಳಾಗಬಹುದು. ಹಣಕಾಸಿನ ಖರ್ಚು ಬಹಳ ಇರುತ್ತದೆ. ವೃತ್ತಿಯಲ್ಲಿ ದಿಢೀರನೆ ಸಮಸ್ಯೆಗಳು ಉದ್ಭವ ಆಗುತ್ತದೆ. ಕೌಟುಂಬಿಕ ವಾಗಿಯೂ ಅಶಾಂತಿ.‌

ಕನ್ಯಾರಾಶಿ:

ಕನಸುಗಳನ್ನು ಈಡೇರಿಸಿಕೊಳ್ಳುವ ವಾರವಿದು. ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ, ಇದು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬಹುದು. ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸಬಹುದು. ಪ್ರೀತಿಯ ಸಂಬಂಧಗಳು ಉತ್ತಮವಾಗಿರುತ್ತವೆ. ಪರಿಸ್ಥಿತಿ ಸಂಪೂರ್ಣವಾಗಿ ನಿಮಗೆ ಪೂರಕವಾಗಿದೆ.

ಕೆಲಸ ಬದಲಿಸಬೇಕೆಂದರೆ ಈಗ ಸಕಾಲ. ವಿವಾಹಕ್ಕೂ ಈಗ ಒಳ್ಳೆಯ ಸಮಯ. ಹಣಕಾಸಿನ ಹರಿವು ಬಹಳ ಉತ್ತಮವಾಗಿದೆ. ಅಧಿಕ ಗೌರವ ದೊರೆಯುವ ಸಮಯ.

ತುಲಾರಾಶಿ:

ಈ ವಾರ ಒತ್ತಡದಿಂದ ಕೂಡಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇದು ಭವಿಷ್ಯದಲ್ಲಿ ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆರಂಭದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ಸಣ್ಣ ಕಾರಣವೇ ನೆಪವಾಗಿ ದೊಡ್ಡ ಸಮಸ್ಯೆ ಬರಬಹುದು. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ‌ಹಣದ ಹರಿವು ಉತ್ತಮವಾಗಿದೆ. ‌ಬಂಧುಗಳಲ್ಲಿ ಮನಸ್ತಾಪ, ವೃಥಾ ಮನಸ್ಸಿಗೆ ಕಿರಿಕಿರಿ ಇರುತ್ತದೆ.

ವೃಶ್ಚಿಕ ರಾಶಿ:

ಬದುಕಿನಲ್ಲಿ ಒಳ್ಳೆಯ ಸಮಯವಿದು. ಒಳ್ಳೆಯ ಸಂಗತಿಗಳೇ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಅನಿರೀಕ್ಷಿತವಾಗಿ ನೌಕರಿಗೆ ಆಹ್ವಾನ ಸಿಗುತ್ತದೆ. ಮನೆಯಲ್ಲಿ ಸಂತೋಷ ಸಂಭ್ರಮ ಇರುತ್ತದೆ. ಬಂಧು ಬಳಗದೊಂದಿಗೆ ಭೇಟಿ ಸಂಭ್ರಮ ಎಲ್ಲವೂ ಇದೆ. ಯಾವುದೇ ಅಡ್ಡಿ ಆತಂಕ ಇಲ್ಲದೆ ಕೆಲಸ ಮುಂದೆ ಸಾಗುತ್ತದೆ. ಒಡವೆ ವಸ್ತ್ರ ಖರೀದಿ ಯೋಗ ಇದೆ. ಹೊಸ ವಾಹನ ಕೊಳ್ಳುವಿರಿ. ನೀವು ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಿ, ಆದರೆ ಸ್ವಲ್ಪ ಯೋಚಿಸಿದ ನಂತರವೇ ಹೂಡಿಕೆ ಮಾಡಿ.

ಧನಸ್ಸುರಾಶಿ: ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುವ ಸಾಧ್ಯತೆಗಳಿವೆ. ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಲಭಿಸಲಿದೆ. ಪ್ರೇಮ ಸಂಬಂಧವು ಬಲವಾಗಿರುತ್ತದೆ. ಯಾರೊಂದಿಗಾದರೂ ಸಂಬಂಧದಲ್ಲಿರುವವರು ಈ ವಾರ ತಮ್ಮ ಸಂಗಾತಿಯಿಂದ ಉಡುಗೊರೆಯನ್ನು ಪಡೆಯಬಹುದು. ವೈವಾಹಿಕ ಜೀವನವು ನೆಮ್ಮದಿಯಿಂದಿರುತ್ತದೆ. ಆದರೆ ಹತ್ತಿರದವರಿಂದಲೇ ಮುಖಭಂಗ ಆಗಬಹುದು. ಜಾಗ್ರತೆಯಿಂದ ಇರಿ. ಗುರುವನ್ನು ಪ್ರಾರ್ಥಿಸಿ. ಹಣಕಾಸಿನ ಸಮಸ್ಯೆ ಕೊಂಚ ಮಟ್ಟಿಗೆ ಕಾಡಬಹುದು. ಸುಖ ಸಂತೋಷಕ್ಕೆ ರಾಹುವಿನಿಂದ ಅಡ್ಡಿ.

ಮಕರರಾಶಿ:ಸಾಡೆಸಾತಿ ಶನಿ ಪ್ರಭಾವದಿಂದ ಕಂಗೆಟ್ಟಿದ್ದ ನಿಮಗೆ ಎಲ್ಲ ಸಂಕಷ್ಟಗಳೂ ಕಳೆದು ಈಗ ಜೀವನದಲ್ಲಿ ಹರ್ಷ ಸಂಭ್ರಮ ಹೆಚ್ಚುತ್ತದೆ. ಇದು ಅದೃಷ್ಟ, ಭಾಗ್ಯಗಳ ಬಾಗಿಲು ತೆರೆಯುವ ಸಮಯ. ಎಲ್ಲೆಲ್ಲೂ ಶುಭ ಸುದ್ದಿ ಕಿವಿಗೆ ಬೀಳುತ್ತದೆ. ಭದ್ರವಾದ ನೆಲೆ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ವಾರದ ಮಧ್ಯದಲ್ಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಇದರಿಂದ ಯಾವುದೇ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ವೃತ್ತಿ ಜೀವನದಲ್ಲಿ ಶುಭ ಸುದ್ದಿಯಿದೆ.

ಕುಂಭರಾಶಿ: ಇದ್ದಕ್ಕಿದ್ದಂತೆ ದೊಡ್ಡ ಸಮಸ್ಯೆ ಉದ್ಭವಿಸಬಹುದು. ರಹಸ್ಯ ಶತ್ರುಗಳ ಬಗ್ಗೆ ಜಾಗರೂಕರಾಗಿರಬೇಕು. ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆ ನೀಡದಿರುವುದು ಉತ್ತಮ. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಹಣವನ್ನು ಹೂಡಿಕೆ ಮಾಡಿ. ಆರ್ಥಿಕ ನಷ್ಟವಾಗುವ ಸಂಭವವಿದೆ. ಪ್ರೇಮ ಸಂಬಂಧದಲ್ಲಿ ತಪ್ಪು ತಿಳುವಳಿಕೆ ಇರಬಹುದು. ಪದವಿ ಭ್ರಷ್ಟತೆ, ಮಾನಸಿಕ ಕಿರುಕುಳ ಉಂಟಾಗಬಹುದು. ಆದರೆ ಇಂಥದ್ದನ್ನೆಲ್ಲ ಈಗಾಗಲೇ ಸಾಕಷ್ಟು ಅನುಭವಿಸಿರುವ ನಿಮಗೆ ಇದೇನು ದೊಡ್ಡ ಸವಾಲು ಎಂದೆನಿಸದು. ಬದುಕಿನ ಉತ್ಸಾಹ ಕಳೆದುಕೊಳ್ಳಬೇಡಿ.

ಮೀನರಾಶಿ:

ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ. ನೀವು ಕೆಲಸದ ಮೇಲೆ ಗಮನ ಕೇಂದ್ರೀಕರಿಸುತ್ತೀರಿ. ಸಹೋದ್ಯೋಗಿಗಳು ನಿಮ್ಮ ನಿರ್ಧಾರಗಳನ್ನು ಬೆಂಬಲಿಸುತ್ತಾರೆ. ಆದರೆ ಅನಿರೀಕ್ಷಿತ ಸಷ್ಟ, ಸಮಸ್ಯೆಗಳು ಎದುರಾಗುತ್ತದೆ. ಬಂಧುಗಳ ನಡುವೆ ಕೆಟ್ಟ ಹೆಸರು ಅವಮಾನ‌ ಮುಂತಾದವನ್ನು ಎದುರಿಸಬೇಕಾಗುತ್ತದೆ. ಹಣದ ಹರಿವು ಕ್ಷೀಣವಾಗಿದೆ. ರಾಜಕೀಯ ನಾಯಕರಿಗೆ ಪದವಿ ಕಳೆದುಕೊಳ್ಳುವ ಯೋಗ. ಎಚ್ಚರಿಕೆಯಿಂದ ಮುಂದಡಿ ಇಡಿ. ಮನಸ್ಸು ಕಹಿ ಮಾಡುಕೊಳ್ಳುವುದರಿಂದ ನಷ್ಟ ಹೆಚ್ಚಾಗುತ್ತದೆ.