ಅತ್ತೆಯ ಕತ್ತುಕೊಯ್ದ ಅಳಿಯನ ಬಂಧನ

KannadaprabhaNewsNetwork |  
Published : Dec 15, 2023, 01:31 AM IST
14ಕೆಎಂಎನ್ ಡಿ32ಕಾಂತರಾಜು | Kannada Prabha

ಸಾರಾಂಶ

ಅತ್ತೆಯ ಕತ್ತುಕೊಯ್ದ ಅಳಿಯನ ಬಂಧನಸಂಸಾರದಲ್ಲಿ ಹೊಂದಾಣಿಕೆ ಇಲ್ಲದೆ ಇರಲು ಅತ್ತೆಯವರೆ ಕಾರಣ: ಆರೋಪ

ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೆ ಇರಲು ಅತ್ತೆಯವರೆ ಕಾರಣ: ಆರೋಪಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅತ್ತೆಯ ಕತ್ತುಕೊಯ್ದು ಪರಾರಿಯಾಗಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ಚೆಲುವರಾಜು ಪುತ್ರ ಕಾಂತರಾಜು (31) ಬಂಧಿತ ಆರೋಪಿ.

ಎಲೆಕೆರೆ ಗ್ರಾಮದ ಪಾರ್ವತಮ್ಮ ಕಾರ್ತಿಕ ಮಾಸದ ಪ್ರಯುಕ್ತ ಡಿ.12ರ ಮಧ್ಯ ರಾತ್ರಿ 12.30ರ ವೇಳೆ ಗ್ರಾಮದ ವಿ.ಸಿ. ನಾಲೆಯಲ್ಲಿ ಗಂಗೆ ಪೂಜೆ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ವ್ಯಕ್ತಿಯೊಬ್ಬ ಕತ್ತುಕೊಯ್ದು ಕೊಲೆ ಮಾಡಿರುವುದಾಗಿ ಪುತ್ರ ಅರುಣಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಕೊಲೆ ಆರೋಪಿ, ಪಾರ್ವತಮ್ಮನ ಅಳಿಯ ಕಾಂತರಾಜುನನ್ನು 24 ಗಂಟೆಯೊಳಗೆ ಬಂಧಿಸಿದ್ದಾರೆ. ಕಾಂತರಾಜು ನನ್ನ ಹೆಂಡತಿ ಅರ್ಪಿತಾ ನನ್ನನ್ನು ಬಿಟ್ಟು ತವರು ಮನೆಯಲ್ಲಿಯೇ ಇರಲು ಮತ್ತು ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೆ ಇರಲು ಅತ್ತೆಯವರೆ ಕಾರಣ. ಅತ್ತೆ ನನ್ನ ಹೆಂಡತಿಯನ್ನು ಕಳುಹಿಸುತ್ತಿರಲಿಲ್ಲ. ಹಾಗಾಗಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿನ ಆರೋಪಿಯಿಂದ ಕೊಲೆ ಮಾಡಲು ಬಳಸಿದ್ದ ಬಜಾಜ್ ಪಲ್ಸರ್, ಚಾಕು ವಶಕ್ಕೆ ಪಡೆದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಸ್ಪಿ ಯತೀಶ್, ಎಎಸ್ಪಿ ತಿಮ್ಮಯ್ಯ, ಡಿವೈಎಸ್‌ಪಿ ಮುರುಳಿ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಬಿ.ಜಿ ಕುಮಾರ್, ಪಿಎಸ್‌ಐ ರಕ್ಷಿತ, ಸಿಬ್ಬಂದಿ ಶ್ರೀನಿವಾಸ್‌ ಮೂರ್ತಿ, ಮುತ್ತುರಾಜ್, ರೇವಯ್ಯ, ಶಂಕರ್, ರವೀಂದ್ರ ಅವರನ್ನ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.14ಕೆಎಂಎನ್ ಡಿ32

ಕಾಂತರಾಜು

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮೈಸೂರಲ್ಲಿ ಮತ್ತೊಂದು ಹೈಟೆಕ್‌ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ
ಕುಡಿದು ಕಾರ್‌ ಓಡಿಸಿ ಅಪಘಾತ : ಮಯೂರ್ ವಿರುದ್ಧ ಕೇಸ್‌