ಶಂಕಿತ ಉಗ್ರರ ಕಾಲಿಗೆ ಜಿಪಿಎಸ್‌ ಬಳೆ: ಕಾಶ್ಮೀರಪೊಲೀಸರ ಪ್ರಯೋಗ

KannadaprabhaNewsNetwork |  
Published : Nov 05, 2023, 01:18 AM IST

ಸಾರಾಂಶ

ಜಾಮೀನಿನ ಮೇಲೆ ಬಿಡುಗಡೆಯಾದ ಶಂಕಿತ ಉಗ್ರರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಅಂಥವರ ಕಾಲಿಗೆ ಜಿಪಿಎಸ್‌ ಆಧರಿತ ಬಳೆ ಅಳವಡಿಸುವ ಪ್ರಯೋಗವೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರಂಭಿಸಿದ್ದಾರೆ.

ದೇಶದಲ್ಲೇ ಮೊದಲ ಪ್ರಯತ್ನ

ಶ್ರೀನಗರ: ಜಾಮೀನಿನ ಮೇಲೆ ಬಿಡುಗಡೆಯಾದ ಶಂಕಿತ ಉಗ್ರರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಅಂಥವರ ಕಾಲಿಗೆ ಜಿಪಿಎಸ್‌ ಆಧರಿತ ಬಳೆ ಅಳವಡಿಸುವ ಪ್ರಯೋಗವೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರಂಭಿಸಿದ್ದಾರೆ. ಇಂಥ ಪ್ರಯೋಗ ದೇಶದಲ್ಲೇ ಮೊದಲು.

ಈ ಸಾಧನಗಳನ್ನು ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಬಳಸಲಾಗುತ್ತಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಘುಲಾಂ ಮೊಹಮ್ಮದ್‌ ಭಟ್‌ ಎಂಬ ವ್ಯಕ್ತಿಯ ಮಧ್ಯಂತರ ಜಾಮೀನು ಅರ್ಜಿಯನ್ನು ಆಲಿಸಿದ ಜಮ್ಮು ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯ, ಅವರಿಗೆ ಜಿಪಿಎಸ್‌ ಆಧಾರಿತ ಸಾಧನ ಅಳವಡಿಸಿ ಜಾಮೀನು ಮಂಜೂರು ಮಾಡಿತು. ಭಟ್‌ ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿತನಾಗಿದ್ದು, ಆತನಿಗೆ ಹಲವು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕವಿರುವ ಶಂಕೆಯ ಮೇಲೆ ಬಂಧಿಸಲಾಗಿತ್ತು. ಪ್ರಸ್ತುತ ಈ ಸಾಧನವನ್ನು ದೇಶದ್ರೋಹ ಪ್ರಕರಣದಡಿ ಬಂಧಿತರಾಗುವ ಆರೋಪಿಗಳಿಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ. ಈ ಸಾಧನವನ್ನು ಆರೋಪಿಗಳ ಕಾಲಿಗೆ ಅಳವಡಿಸಿ ಅವರ ಚಲನವಲನದ ಮೇಲೆ ಜಿಪಿಎಸ್‌ ಸಹಾಯದಿಂದ ಮೇಲ್ವಿಚಾರಣೆ ಮಾಡಿಬಹುದಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಳ್ಳತನ ಪ್ರಕರಣ: ೩೪ ಲಕ್ಷ ರು. ಮೌಲ್ಯದ ವಸ್ತುಗಳ ವಶ
400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ