ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮದ ನಿವಾಸಿ ಸುಧಾ ತಮ್ಮ ತೋಟಕ್ಕೆಂದು ಸಂಜೆ ವೇಳೆ ಒಬ್ಬರೇ ತೆರಳುತ್ತಿದ್ದರು. ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸುಧಾ ಅವರ ಮಾಂಗಲ್ಯ ಸರ ಕೀಳಲು ಕೈಹಾಕಿದ್ದಾರೆ. ಈ ವೇಳೆ ಸುಧಾ ಅವರ ಬಿಗಿಯಾಗಿ ಮಾಂಗಲ್ಯ ಸರವನ್ನು ಹಿಡಿದುಕೊಂಡಿದ್ದಾರೆ. ಇದರಿಂದ ಮಾಂಗಲ್ಯ ಸರ ಸ್ವಲ್ಪಕಟ್ಟಾಗಿ ಸುಧಾ ಅವರ ಬಳಿ ಸುಮಾರು 13 ಗ್ರಾಂ ನಷ್ಟು ಉಳಿದುಕೊಂಡಿದೆ. ಉಳಿದ 37 ಗ್ರಾಂ ನಷ್ಟು ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬಳಿಕ ಪತಿ ಸ್ವಾಮೀಗೌಡ ಅವರೊಂದಿಗೆ ಸುಧಾ ಅವರು ಪಾಂಡವಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಷಯ ತಿಳಿದ ಅಪರ ಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟ ಸರಗಳ್ಳತನ:
ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಬಸ್, ರೈಲ್ವೇ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಲ್ಲಿ ಸರಗಳ್ಳತನ ಹೆಚ್ಚುತ್ತಿರುವುದರಿಂದ ಒಂಟಿಯಾಗಿ ಓಡಾಡುವ ಮಹಿಳೆಯರು ತಮ್ಮ ಚಿನ್ನಾಭರಣಗಳ ಬಗ್ಗೆ ಜಾಗೃತಿವಹಿಸಬೇಕೆಂದು ಸಬ್ ಇನ್ಸ್‌ಪೆಕ್ಟರ್ ಉಮೇಶ್ ಮನವಿ ಮಾಡಿದ್ದಾರೆ.