ಸಾರಿಗೆ ಬಸ್ ಕಂಡಕ್ಟರ್ ಮೇಲೆ ಮಹಿಳೆಯಿಂದ ಹಲ್ಲೆಗೆ ಯತ್ನ..!

KannadaprabhaNewsNetwork |  
Published : Nov 25, 2025, 01:45 AM IST
24ಕೆಎಂಎನ್ ಡಿ24 | Kannada Prabha

ಸಾರಾಂಶ

ತುಮಕೂರಿಗೆ ಟಿಕೆಟ್ ಪಡೆದು ಶ್ರೀರಂಗಪಟ್ಟಣ ಬಸ್‌ ನಿಲ್ದಾಣದಲ್ಲಿ ಇಳಿದ ಮಹಿಳೆಯನ್ನು ಪ್ರಶ್ನೆ ಮಾಡಿದ ಕಂಡಕ್ಟರ್ ಮೇಲೆ ರಂಪಾಟ ಮಾಡಿ ಹಲ್ಲೆಗೆ ಯತ್ನಿಸಿದ ಘಟನೆ ಶ್ರೀರಂಗಪಟ್ಟಣ ಪಟ್ಟಣದಲ್ಲಿ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತುಮಕೂರಿಗೆ ಟಿಕೆಟ್ ಪಡೆದು ಶ್ರೀರಂಗಪಟ್ಟಣ ಬಸ್‌ ನಿಲ್ದಾಣದಲ್ಲಿ ಇಳಿದ ಮಹಿಳೆಯನ್ನು ಪ್ರಶ್ನೆ ಮಾಡಿದ ಕಂಡಕ್ಟರ್ ಮೇಲೆ ರಂಪಾಟ ಮಾಡಿ ಹಲ್ಲೆಗೆ ಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೈಸೂರಿನಿಂದ ತುಮಕೂರಿಗೆ ಮಹಿಳೆ ಶಕ್ತಿ ಯೋಜನೆಯಡಿ ಮೈಸೂರಿನಿಂದ ತುಮಕೂರಿಗೆ ಬಸ್ ಟಿಕೆಟ್ ಪಡೆದಿದ್ದಾಳೆ. ನಂತರ ಶ್ರೀರಂಗಪಟ್ಟಣ ಬರುತ್ತಿದ್ದಂತೆ ಮಹಿಳೆ ಪಟ್ಟಣ ಬಸ್ ನಿಲ್ದಾಣದಲ್ಲಿ ಇಳಿಯುವ ವೇಳೆ ಕಂಡಕ್ಟರ್ ತುಮಕೂರಿಗೆ ಟಿಕೆಟ್ ಪಡೆದು ಯಾಕೆ ಇಳಿಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ನಂತರ ನಿಲ್ದಾಣದಲ್ಲಿದ್ದ ಟ್ರಾಫಿಕ್ ನಿಯಂತ್ರಣಾಧಿಕಾರಿ ಬಳಿ ಕರೆದುಕೊಂಡು ಹೋಗಿದ್ದಕ್ಕೆ ಆಕೆ ಕೋಪಗೊಂಡು ನಿಲ್ದಾಣದ ನಿಯಂತ್ರಣಾಧಿಕಾರಿ ಎದುರೇ ಕಂಡಕ್ಟರ್ ಅಂಗಿಯ ಕಾಲರ್ ಪಟ್ಟಿ ಹಿಡಿದು ಎಳೆದಾಡಿ ಹಲ್ಲೆಗೆ ಮುಂದಾಗಿದ್ದಾಳೆ.

ಅಕ್ಕ ಪಕ್ಕದಲ್ಲಿದ್ದ ಬಸ್ ಚಾಲಕರು, ನಿರ್ವಾಹಕರು ಆಕೆಗೆ ಕಂಡಕ್ಟರ್ ಬಟ್ಟೆ ಬಿಡಮ್ಮ ಎಂದು ತಿಳಿಸಲು ಹೋದ ವೇಳೆ ಎಲ್ಲರ ಮೇಲೂ ಕೋಪದಿಂದ ಮಾತನಾಡಿದ್ದಾರೆ. ನಿಲ್ದಾಣದಲ್ಲಿದ್ದ ಯಾರೋ ಮೊಬೈಲ್ ತೆಗೆದು ವಿಡಿಯೋ ಮಾಡುತ್ತಿದ್ದ ವೇಳೆ ಮಹಿಳೆ ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

24ಕೆಎಂಎನ್ ಡಿ24ಸಾರಿಗೆ ಬಸ್ ನಲ್ಲಿ ಮಹಿಳೆಯನ್ನು ಪ್ರಶ್ನೆ ಮಾಡಿದ ಕಂಡಕ್ಟರ್ ನನ್ನು ಎಳೆದಾಡಿರುವುದು.

ಡಿವೈಡರ್‌ಗೆ ಗೂಡ್ಸ್‌ ಟೆಂಪೋ ಡಿಕ್ಕಿ: ಚಾಲಕ ಸಾವು

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಕನಕಪುರ ರಸ್ತೆಯ ಟೋಲ್ ಗೇಟ್ ಬಳಿ ಸೋಮವಾರ ಮಧ್ಯಾಹ್ನ ರಸ್ತೆಯ ಡಿವೈಡರ್‌ಗೆ ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ಶೇಷಗಿರಿಹಳ್ಳಿ ಗ್ರಾಮದ ಶಿವಕುಮಾರ್ (32) ಮೃತ ಚಾಲಕ. ಬೆಂಗಳೂರಿನಿಂದ ತಮಿಳುನಾಡಿನ ಅಂಗಡಿಯೊಂದಕ್ಕೆ ಟೆಂಪೋದಲ್ಲಿ ಬಟ್ಟೆಗಳ ಬಂಡಲ್ ತೆಗೆದುಕೊಂಡು ಹೋಗಿ ವಾಪಸ್ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್‌ಗೆ ಟೆಂಪೋ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗೂಡ್ಸ್ ಟೆಂಪೋ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಟೆಂಪೋದಲ್ಲಿದ್ದ ಶಿವಬಸಪ್ಪ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪರಿಚಿತ ಶವ ಪತ್ತೆ

ಕಿಕ್ಕೇರಿ: ಅಮಾನಿಕೆರೆಯ ಕಿಕ್ಕೇರಮ್ಮ ದೇವಸ್ಥಾನದ ಸೋಪಾನಕಟ್ಟೆ ಸಮೀಪ ಅಪರಿಚಿತ ಪುರುಷ ಶವ ಸೋಮವಾರ ಪತ್ತೆಯಾಗಿದೆ. ಮೃತ ವ್ಯಕ್ತಿಗೆ 45 ವರ್ಷವಾಗಿದೆ. 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಶರೀರ, ನೀಲಿ ಕಲರ್ ಟೀ-ಷರ್ಟ್, ಒಳಗೆ ಪಿಂಕ್ ಬಣ್ಣದ ಗುಲಾಬಿ ಅರ್ಧ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈತ ಧರಿಸಿದ್ದ ಕ್ಯೂಮಾಕ್ಸ್ ವಾಚ್ ಪತ್ತೆಯಾಗಿದೆ. ಅಪರಿಚಿತ ಶವವನ್ನು ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಮಾಹಿತಿಗಾಗಿ ಕಿಕ್ಕೇರಿ ಪೊಲೀಸ್ ಠಾಣೆ 9480804861 ಸಂಪರ್ಕಿಸಲು ಕೋರಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಯುಪಿಐ ಪಾವತಿ ಟಿಕೆಟ್‌ ಅಕ್ರಮ ಬಿಎಂಟಿಸಿ 3 ಕಂಡಕ್ಟರ್‌ ಸಸ್ಪೆಂಡ್‌