;Resize=(412,232))
ಸಿನಿವಾರ್ತೆ : ಬಹು ನಿರೀಕ್ಷಿತ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಎಲಿಜಬೆತ್ ಪಾತ್ರದಲ್ಲಿ ಹುಮಾ ಖುರೇಷಿ ನಟಿಸುತ್ತಿದ್ದು, ರೆಟ್ರೋ ಕಾಲದ ಐಷಾರಾಮಿ ಕಾರಿನ ಎದುರಿನಲ್ಲಿ ಗ್ಲಾಮರಸ್ ಉಡುಗೆಯಲ್ಲಿ ನಿಂತಿರುವ ಹುಮಾ ಖುರೇಷಿ ಅವರ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.
ಕಂಟೆಂಟ್ ಬೇಸ್ ಚಿತ್ರಗಳು ಹಾಗೂ ವೆಬ್ ಸರಣಿಗಳಲ್ಲೇ ಹೆಚ್ಚಾಗಿ ನಟಿಸಿ ಗಮನ ಸೆಳೆದಿರುವ ಹುಮಾ ಖುರೇಷಿ ಪಾತ್ರ ‘ಟಾಕ್ಸಿಕ್’ನಲ್ಲಿ ಹೇಗಿರುತ್ತದೆ ಎನ್ನುವ ಕುತೂಹಲ ಈ ಫಸ್ಟ್ ಲುಕ್ ಕಾರಣವಾಗಿದೆ.ಮುಂದಿನ ವರ್ಷ ಮಾರ್ಚ್ 19ಕ್ಕೆ ಅದ್ದೂರಿಯಾಗಿ ತೆರೆಗೆ ಬರಲಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಿಸಿದ್ದು, ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿ ಬಹುಭಾಷೆಯ ಕಲಾವಿದರು ನಟಿಸಿದ್ದು, ಒಬೊಬ್ಬರದ್ದೇ ಪಾತ್ರದ ಲುಕ್ಕುಗಳನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದ್ದೆ. ಹೀಗಾಗಿ ನಟಿ ಕಿಯಾರಾ ಅಡ್ವಾಣಿ ನಂತರ ಮತ್ತೊಬ್ಬ ನಟಿಯ ಪಾತ್ರವು ರಿವಿಲ್ ಆಗಿದೆ. ಅಂದಹಾಗೆ ಜನವರಿ 8ಕ್ಕೆ ನಟ ಯಶ್ ಅವರ ಹುಟ್ಟುಹಬ್ಬ. ಅಂದು ಚಿತ್ರದ ನಾಯಕ ಯಶ್ ಅವರ ಪಾತ್ರದ ಸುತ್ತಾ ವಿಶೇಷತೆಗಳನ್ನು ರಿವಿಲ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಈಗಿನಿಂದಲೇ ಚಿತ್ರದ ಉಳಿದ ನಟ- ನಟಿಯರ ಪಾತ್ರಗಳ ಝಲಕ್ ಬಹಿರಂಗವಾಗುತ್ತಿದೆ.
ಇನ್ನೂ ನಯನತಾರಾ, ರುಕ್ಮಿಣಿ ವಸಂತ್, ಅಕ್ಷಯ್ ಒಬೆರಾಯ್, ತಾರಾ ಸುತಾರಿಯಾ, ಟೊವಿನೋ ಥಾಮಸ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದು, ಇವರ ಪಾತ್ರಗಳ ಲುಕ್ಕು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.