ಚೆನ್ನೈ: ಕಾವೇರಿ ಕೂಗು ಅಭಿಯಾನದಲ್ಲಿ 2023-24ನೇ ಸಾಲಿನಲ್ಲಿ ಕಾವೇರಿ ಕೊಳ್ಳದಲ್ಲಿ 10.9 ಕೋಟಿ ಸಸಿಗಳನ್ನು ನೆಡುವ ಮೂಲಕ 2.13 ಲಕ್ಷ ರೈತರಿಗೆ ನೆರವಾಗಿದ್ದೇವೆ ಎಂದು ಸದ್ಗುರು ಅವರ ಈಶ ಫೌಂಡೇಶನ್ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಈಶ, ‘50 ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು 65 ಸಾವಿರ ರೈತರು ಮತ್ತು ಸಾರ್ವಜನಿಕರ ಸಹಯೋಗದಲ್ಲಿ 2.09 ಕೋಟಿ ಸಸಿಗಳನ್ನು ಕಳೆದ ಸಾಲಿನಲ್ಲಿ ನೆಡಲಾಗಿದೆ’ ಎಂದು ಮಾಹಿತಿ ನೀಡಿದೆ.
ಕಾವೇರಿ ಕೂಗು ಅಭಿಯಾನವು ಕಾವೇರಿ ನದಿ ನೀರಿನ ಹರಿವನ್ನು ಹೆಚ್ಚಿಸಲು ಅದರ ಇಕ್ಕೆಲ ತೀರಗಳಲ್ಲಿ 242 ಕೋಟಿ ಮರಗಳನ್ನು ನೆಡುವ ಗುರಿ ಹಾಕಿಕೊಂಡಿದೆ.