ಕ್ವಿಂಟಾಲ್‌ ಗೋಧಿಗೆ 150 ರು.ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ

KannadaprabhaNewsNetwork |  
Published : Oct 19, 2023, 12:45 AM IST

ಸಾರಾಂಶ

ದೆಹಲಿ, ಮೇರಠ್‌ ಮತ್ತು ಗಾಜಿಯಾಬಾದ್‌ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್‌ಆರ್‌ಟಿಎಸ್‌ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ.

ನವದೆಹಲಿ: ಪಂಚರಾಜ್ಯ ಚುನಾವಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರ 1 ಕ್ವಿಂಟಲ್‌ ಗೋಧಿಯ ಬೆಂಬಲ ಬೆಲೆಯನ್ನು 150 ರು. ಹೆಚ್ಚಳ ಮಾಡಿದೆ. ಈ ಮೂಲಕ 2024-25ರ ಮಾರುಕಟ್ಟೆ ಋತುಮಾನಕ್ಕೆ ಅನ್ವಯವಾಗುವಂತೆ ಗೋಧಿಯ ಬೆಂಬಲ ಬೆಲೆ 2,275 ರು.ಗೆ ಏರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಎಫ್‌ಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಅತಿ ಹೆಚ್ಚಿನ ಬೆಂಬಲ ಬೆಲೆ ಏರಿಕೆಯಾಗಿದೆ. ಸಂಪುಟ ಸಮಿತಿ ಸಭೆಯಲ್ಲಿ 2024-25 ಮಾರುಕಟ್ಟೆ ಋತುವಿನ ಎಲ್ಲ ಅಧಿಕೃತ ಚಳಿಗಾಲದ ಬೆಳೆಗಳಿಗೂ ಎಂಎಸ್‌ಪಿ ಹೆಚ್ಚಳ ಅನ್ವಯವಾಗಲಿದೆ ಎಂದು ಅನುರಾಗ್‌ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಿನ್ನಮತದ ವಿವಾದ, ವಿಪಕ್ಷ ಆಕ್ರೋಶದ ಬೆನ್ನಲ್ಲೇ ಚು. ತ್ರಿಮೂರ್ತಿಗಳ ಸಭೆ
ನೋಟಿಸ್‌ ಕೊಟ್ಟವರ ಮನೆಗೇ ಇನ್ನು ಅಧಿಕಾರಿಗಳ ಬರ್ತಾರೆ-ಎಸ್‌ಐಆರ್‌ ನಿಯಮ ಸಡಿಲ