ಕರ್ನಾಟಕಕ್ಕೆ ಕೇಂದ್ರ ₹4,500 ಕೋಟಿ ತೆರಿಗೆ ಪಾಲು ಬಿಡುಗಡೆ

Published : Nov 01, 2026, 08:01 AM IST
Money

ಸಾರಾಂಶ

ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಲಾಗುವ ತೆರಿಗೆ ಪಾಲಿನಲ್ಲಿ 1,09,019 ಕೋಟಿ ರು.ಗಳನ್ನು (1.09 ಲಕ್ಷ ಕೋಟಿ ರು.) ಶನಿವಾರ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ರು. ಹಂಚಿಕೆಯಾಗಿದೆ

 ನವದೆಹಲಿ: ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಲಾಗುವ ತೆರಿಗೆ ಪಾಲಿನಲ್ಲಿ 1,09,019 ಕೋಟಿ ರು.ಗಳನ್ನು (1.09 ಲಕ್ಷ ಕೋಟಿ ರು.) ಶನಿವಾರ ಬಿಡುಗಡೆ ಮಾಡಿದೆ.

ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ರು. ಹಂಚಿಕೆ

ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ರು. ಹಂಚಿಕೆಯಾಗಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ನೀಡುತ್ತಿರುವ 2ನೇ ಹೆಚ್ಚುವರಿ ಕಂತು

ನಿಯಮಿತ ಮಾಸಿಕ ಹಂಚಿಕೆಯ ಹೊರತಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ನೀಡುತ್ತಿರುವ 2ನೇ ಹೆಚ್ಚುವರಿ ಕಂತು ಇದಾಗಿದೆ. ಕಳೆದ ಆಗಸ್ಟ್‌ನಲ್ಲಿ 1.09 ಲಕ್ಷ ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಹಬ್ಬದ ಋತುವಿನಲ್ಲಿ ರಾಜ್ಯಗಳು ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ನಿಧಿ ಕೊರತೆಯನ್ನು ನೀಗಿಸಲು ಈ ಮೊತ್ತವನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಗನ್‌ ಹಟಕ್ಕೆ ಮಣಿದ ಶರ್ಮಿಳಾ - ಯಲಹಂಕ ಪ್ಯಾಲೇಸ್‌ನಲ್ಲಿ ಇಲ್ಲ ವೈಎಸ್ಸಾರ್‌ ಮೊಮ್ಮಗಳ ಮದುವೆ
ಭಾರತದಲ್ಲಿ ಬಡತನ ಇಳಿಕೆ ವಿಶ್ವದಲ್ಲೇ ಅತ್ಯಂತ ವೇಗದ್ದು