ಜಾಲತಾಣದಲ್ಲಿ ನ್ಯಾಯಾಂಗ, ರಾಜಕೀಯ ವಿಡಂಬನೆ ಸುನಾಮಿ- ಭಾರತದಲ್ಲಿ ದಿಢಿರ್‌ ಜಿರಳೆ ಜನತಾ ಪಾರ್ಟಿ ಸಂಚಲನ

KannadaprabhaNewsNetwork |  
Published : May 22, 2026, 03:15 AM ISTUpdated : May 22, 2026, 04:45 AM IST
CoCkroach

ಸಾರಾಂಶ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್‌ ಅವರ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಾಗೂ ರಾಜಕೀಯ ಪಕ್ಷಗಳನ್ನುಟೀಕಿಸುವ ಉದ್ದೇಶದಿಂದ ಹುಟ್ಟುಹಾಕಲಾದ ‘ಕಾಕ್ರೋಚ್‌ ಜನತಾ ಪಾರ್ಟಿ’ (ಸಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿದೆ.

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್‌ ಅವರ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಾಗೂ ರಾಜಕೀಯ ಪಕ್ಷಗಳನ್ನುಟೀಕಿಸುವ ಉದ್ದೇಶದಿಂದ ಹುಟ್ಟುಹಾಕಲಾದ ‘ಕಾಕ್ರೋಚ್‌ ಜನತಾ ಪಾರ್ಟಿ’ (ಸಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿದೆ. ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ದೇಶದ ಜೆನ್‌ಝೀಗಳು (ಯುವಕರು) ಇದರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಆರಂಭವಾದ ಕೇವಲ ಒಂದೇ ವಾರದಲ್ಲಿ ಎಕ್ಸ್‌ ಖಾತೆಯಲ್ಲಿ ಸುಮಾರು 16,800 ಸದಸ್ಯತ್ವ ಪಡೆಯುವ ಮೂಲಕ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಭಾರತದಲ್ಲಿ ಎಕ್ಸ್‌ ಖಾತೆಯನ್ನು ನಿರ್ಬಂಧಿಸಲಾಗಿದೆ. ಆದರೆ ‘ಕಾಕ್ರೋಚ್‌ ಇಸ್‌ ಬ್ಯಾಕ್‌’ ಎಂಬ ಮತ್ತೊಂದು ಖಾತೆಯನ್ನು ಆರಂಭಿಸಲಾಗಿದೆ. ಇನ್‌ಸ್ಟಾಗ್ರಾಂನ ಲ್ಲೂ ಕಾಕ್ರೋಚ್‌ ಜನತಾ ಪಾರ್ಟಿ ಎಂಬ ಖಾತೆ ಇದ್ದು, 1.5 ಕೋಟಿಗೂ ಅಧಿಕ ಫಾಲೋವರ್‌ಗಳನ್ನು ಹೊಂದುವ ಮೂಲಕ ಈ ಆನ್‌ಲೈನ್‌ ಅಭಿಯಾನ ದೇಶಾದ್ಯಂತ ಗಮನ ಸೆಳೆದಿದೆ. ಇದು ಬಿಜೆಪಿ ಫಾಲೋವರ್‌ಗಳ ಸಂಖ್ಯೆಯಾದ 88 ಲಕ್ಷಕ್ಕಿಂತ ಬಹು ಅಧಿಕ.

ಎಕ್ಸ್‌ ಖಾತೆಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಹೇಳಿಕೆ ನೀಡಿರುವ ಸಿಜೆಪಿ ಸ್ಥಾಪಕ ಅಭಿಜಿತ್‌ ದಿಪ್ಕೆ, ‘ನಿನ್ನೆ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಗಳು ನಡೆದಿದ್ದರಿಂದ ಅದನ್ನು ನಿರ್ಬಂಧಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಇದು ಸರ್ಕಾರದ ಸ್ವಯಂ ಗುರಿಯಾಗಿದೆ. ಈಗ ಎಕ್ಸ್‌ನಲ್ಲಿ ‘ಕಾಕ್ರೋಚ್ ಈಸ್ ಬ್ಯಾಕ್’ ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿದ್ದೇನೆ. ಈ ಅಭಿಯಾನ ಬೆಳೆಯುತ್ತಿದೆ, ಪ್ರತಿನಿತ್ಯ ಸಾವಿರಾರು ಅನುಯಾಯಿಗಳನ್ನು ಪಡೆಯುತ್ತಿದೆ. ಬಹುಶಃ ಇದೇ ಸರ್ಕಾರವನ್ನು ಹೆದರಿಸಿದೆ’ ಎಂದರು.

ಹೇಗೆ ಆರಂಭವಾಯಿತು?:

ಮೇ 15ರಂದು ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್, ‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು. ಅದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕ ತಮ್ಮ ಹೇಳಿಕೆಯಲ್ಲಿ ನಿರುದ್ಯೋಗಿಗಳನ್ನು ಅವಮಾನಿಸುವ ಉದ್ದೇಶವಿರಲಿಲ್ಲ, ನಕಲಿ ಪದವಿ ಪಡೆದು ಕಾನೂನು ವೃತ್ತಿಗೆ ಬರುವವರನ್ನು ಉದ್ದೇಶಿಸಿ ಆ ಮಾತು ಹೇಳಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದರು.

ಆದರೆ ಮೇ 15ರಂದು ಸಿಜಪೈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಅಭಿಜಿತ್ ದಿಪ್ಕೆ ಎಂಬ ಯುವಕ ‘ಕಾಕ್ರೋಚ್‌ ಜನತಾ ಪಾರ್ಟಿ’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದರು. ನಿರುದ್ಯೋಗ, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವಿಷಯಗಳನ್ನು ಮೀಮ್‌ಗಳು, ಗ್ರಾಫಿಕ್ಸ್ ಮತ್ತು ಹಾಸ್ಯದ ಮೂಲಕ ವ್ಯಂಗ್ಯವಾಗಿ ಈ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತಿತ್ತು. 

ಸಿಜೆಪಿ ಪ್ರಣಾಳಿಕೆಯಲ್ಲಿ 5 ಭರವಸೆ ಘೋಷಣೆ

1.ನ್ಯಾಯಾಧೀಶರು ತಮ್ಮ ಹುದ್ದೆಯಿಂದ ನಿವೃತ್ತಿಯ ನಂತರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡದಂತೆ ನಿಷೇಧ

2. ಮತಪಟ್ಟಿಯಿಂದ 1ಅರ್ಹ ಹೆಸರನ್ನು ಅಳಿಸಿದರೂ ಮುಖ್ಯ ಚುನಾವಣಾ ಆಯುಕ್ತರನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧನ

3. ಸಂಸತ್ತಿನಲ್ಲಿ ಮಹಿಳೆಯರಿಗೆ ಇದೀಗ ಪ್ರಸ್ತಾಪಿಸಿರುವ ಶೇ.33ರ ಮೀಸಲು ಬದಲು ಶೇ.50 ಮೀಸಲು ನೀಡುವ ಭರವಸೆ

4. ಅಂಬಾನಿ, ಅದಾನಿ ಸಂಸ್ಥೆಗಳಿಗೆ ಸೇರಿದ ಎಲ್ಲಾ ಮಾಧ್ಯಮ ಸಂಸ್ಥೆಗಳ ಲೈಸೆನ್ಸ್‌ ರದ್ದು. ನಿಜವಾದ ಸ್ವತಂತ್ರ ಮಾಧ್ಯಮಕ್ಕೆ ದಾರಿ.

5. ಶಾಸಕ/ಸಂಸದ ಪಕ್ಷಾಂತರ ಮಾಡಿದರೆ 20 ವರ್ಷ ಚುನಾವಣೆಗೆ ಅನರ್ಹ. ಯಾವುದೇ ಸಾರ್ವಜನಿಕ ಹುದ್ದೆಯಿಂದ ನಿಷೇಧ.

ಯಾರು ಅಭಿಜಿತ್ ದಿಪ್ಕೆ?

‘ಕಾಕ್ರೋಚ್‌ ಜನತಾ ಪಾರ್ಟಿ’ ಸೋಶಿಯಲ್ ಮೀಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಎಂದು ಕರೆದುಕೊಂಡಿರುವ ಅಭಿಜಿತ್ ದಿಪ್ಕೆ ಪುಣೆ ಮೂಲದವರು. ಈ ಹಿಂದೆ ಅರವಿಂದ ಕೇಜ್ರಿವಾಲ್ ಅವರ ಆಮ್‌ ಆದ್ಮಿ ಪಕ್ಷದ ಸಾಮಾಜಿಕ ಮಾಧ್ಯಮಗಳನ್ನು ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ಅಮೆರಿಕದ ಬೋಸ್ಟನ್‌ನಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

ಅಭಿಯಾನ ಆರಂಭ ಹೇಗೆ? ಏಕಾಗಿ?

ಕೆಲವು ನಿರುದ್ಯೋಗಿಗಳು ಜಿರಳೆ ರೀತಿ ವರ್ತಿಸುತ್ತಿದ್ದಾರೆ ಎಂದು ಸಿಜೆಐ ಸೂರ್ಯಕಾಂತ್‌ ಹೇಳಿಕೆಪ್ರಕರಣದ ವಿಚಾರಣೆ ವೇಳೆ ಸಿಜೆಐ ನೀಡಿದ ಹೇಳಿಕೆ ಬಗ್ಗೆ ರಾಜಕೀಯ ಪಕ್ಷ, ನೆಟ್ಟಿಗರ ಆಕ್ರೋಶಸೂರ್ಯಕಾಂತ್‌ ಹೇಳಿಕೆಯನ್ನು ಟೀಕಿಸುವ ಸಲುವಾಗಿ ಕಾಕ್ರೋಚ್‌ ಜನತಾ ಪಾರ್ಟಿ ಅಭಿಯಾನಜೊತೆಗೆ ಕೇಂದ್ರ ಸರ್ಕಾರ ಟೀಕಿಸಲು ಕಾಕ್ರೋಚ್‌ ಜೊತೆಗೆ ಜನತಾ ಪಾರ್ಟಿ ಹೆಸರು ಸೇರ್ಪಡೆಇಂಥದ್ದೊಂದು ಅಭಿಯಾನ ಆರಂಭವಾದ ವಾರದೊಳಗೆ ಇದಕ್ಕೆ ಭಾರೀ ಜನಸ್ಪಂದನೆ ವ್ಯಕ್ತ==

ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಗಿಂತ ಹೆಚ್ಚು ಫಾಲೋವರ್ಸ್‌

ಬಿಜೆಪಿಗೆ 88 ಲಕ್ಷ । ಸಿಜೆಪಿಗೆ 1.5 ಕೋಟಿ ಫಾಲೋವರ್ಸ್‌

ವಿಶ್ವದ ಅತಿ ದೊಡ್ಡ ಪಕ್ಷವಾದ ಬಿಜೆಪಿಯ ಅಧಿಕೃತ ಖಾತೆಯಲ್ಲಿ 88 ಲಕ್ಷ ಫಾಲೋವರ್ಸ್‌ ಇದ್ದಾರೆ. ಆದರೆ ಸಿಜೆಪಿಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫಾಲೋವರ್ಸ್‌ ಸಂಖ್ಯೆ 1.5 ಕೋಟಿ ದಾಟಿದೆ. ಸ್ಥಾಪನೆಯಾದ ಒಂದೇ ವಾರದಲ್ಲಿ ಸಿಜೆಪಿ ಬಿಜೆಪಿಯನ್ನೂ ಮೀರಿಸಿರುವುದು ಗಮನ ಸೆಳೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ
ವಾಂಗ್ಚುಕ್‌ಗೆ 2 ದಿನದಲ್ಲಿ ಸಾವಿನ ಅಪಾಯ : ಹೈಕೋರ್ಟ್‌ಗೆ ಅರ್ಜಿ