ಮೊಸರು 14 ರು. ದುಬಾರಿ! - ಅರ್ಧಲೀಟರ್‌ ಮೊಸರು ದರ 6 ರು. ಏರಿಕೆ

Published : Oct 31, 2026, 07:59 AM IST
Nandini Milk and Curd Price Hike

ಸಾರಾಂಶ

ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರು. ಏರಿಕೆ ಮಾಡಿದ್ದು, ಪರಿಷ್ಕೃತ ದರವು ನವೆಂಬರ್ 1 ರಿಂದ ಜಾರಿಗೆ ಬರಲಿದೆ.ಹಾಲಿನ ದರವನ್ನು ಹಳೆಯ ದರಕ್ಕೆ ಹೋಲಿಕೆ ಮಾಡಿದರೆ ಪರಿಷ್ಕೃತ ದರದಲ್ಲಿ ಶುಭಂ ಹಾಲು, ಹೋಮೋಜಿನೈಸ್ಡ್‌ ಶುಭಂ ಹಾಲಿನ ದರದಲ್ಲಿ 12 ರು. ಹೆಚ್ಚಾಗಲಿದೆ

ಬೆಂಗಳೂರು : ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರು. ಏರಿಕೆ ಮಾಡಿದ್ದು, ಪರಿಷ್ಕೃತ ದರವು ನವೆಂಬರ್ 1 ರಿಂದ ಜಾರಿಗೆ ಬರಲಿದೆ.

ಹಾಲಿನ ದರವನ್ನು ಹಳೆಯ ದರಕ್ಕೆ ಹೋಲಿಕೆ ಮಾಡಿದರೆ ಪರಿಷ್ಕೃತ ದರದಲ್ಲಿ ಶುಭಂ ಹಾಲು, ಹೋಮೋಜಿನೈಸ್ಡ್‌ ಶುಭಂ ಹಾಲಿನ ದರದಲ್ಲಿ 12 ರು. ಹೆಚ್ಚಾಗಲಿದೆ. ಉಳಿದವು 8 ರು. ಹೆಚ್ಚಾಗಿದೆ. ಜತೆಗೆ, ಮೊಸರಿನ ದರವೂ ಕೂಡ ಹೆಚ್ಚಾಗಲಿದ್ದು, ಅರ್ಧ ಲೀಟರ್‌ ಮೊಸರಿಗೆ 6 ರು. ಮತ್ತು ಒಂದು ಕೆಜಿ ಪೊಟ್ಟಣಕ್ಕೆ 14 ರು. ಏರಿಕೆಯಾಗಲಿದೆ.

ಬರ ಪರಿಸ್ಥಿತಿ ಮತ್ತು ಹೈನುಗಾರಿಕೆ ನಿರ್ವಹಣೆ ವೆಚ್ಚ ದುಬಾರಿ

ಬರ ಪರಿಸ್ಥಿತಿ ಮತ್ತು ಹೈನುಗಾರಿಕೆ ನಿರ್ವಹಣೆ ವೆಚ್ಚ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸಿ, ಹೈನುಗಾರಿಕೆಯಿಂದ ಹಿಂದಕ್ಕೆ ಸರಿಯಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಹಾಲಿನ ದರ ಲೀಟರ್‌ಗೆ 8 ರು. ಹೆಚ್ಚಳವಾಗಿದ್ದು, ಇದರಲ್ಲಿ 1 ರು. ಹಾಲು ಒಕ್ಕೂಟಗಳಿಗೆ, ರೈತರಿಗೆ 7 ರು.ನಂತೆ ಸಂದಾಯವಾಗಲಿದೆ.

ಈ ನೂತನ ದರವು ಅ.31ರ ತಡರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್‌ ಮಾಹಿತಿ ನೀಡಿದೆ.

ಹಾಲಿನ ಮಾದರಿ ಹಳೆಯ ದರ(ರು.) ಪರಿಷ್ಕೃತ ದರ (ರು)

ಟೋನ್ಡ್‌ (ಬ್ಲೂ) ಹಾಲು 46 54

ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು 47 56

ಹೋಮೋಜಿನೈಸ್ಡ್‌ ಹಸುವಿನ ಹಾಲು 50 58

ಸ್ಪೆಷಲ್‌ ಟೋನ್ಡ್‌ ಹಾಲು 52 64

ಶುಭಂ ಹಾಲು 52 64

ಹೋಮೋಜಿನೈಸ್ಡ್‌ ಶುಭಂ ಹಾಲು 53 65

ಮೊಸರು 500 ಗ್ರಾಂ ಪೊಟ್ಟಣ 28 34

ಮೊಸರು 1 ಕೆಜಿ ಪೊಟ್ಟಣ 54 68

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಗನ್‌ ಹಟಕ್ಕೆ ಮಣಿದ ಶರ್ಮಿಳಾ - ಯಲಹಂಕ ಪ್ಯಾಲೇಸ್‌ನಲ್ಲಿ ಇಲ್ಲ ವೈಎಸ್ಸಾರ್‌ ಮೊಮ್ಮಗಳ ಮದುವೆ
ಭಾರತದಲ್ಲಿ ಬಡತನ ಇಳಿಕೆ ವಿಶ್ವದಲ್ಲೇ ಅತ್ಯಂತ ವೇಗದ್ದು