ದೇಶಭ್ರಷ್ಟ ವ್ಯಾಪಾರಿ ನೀರವ್‌ ಮೋದಿ ಗಡೀಪಾರು ಸನ್ನಿಹಿತ

KannadaprabhaNewsNetwork |  
Published : Jul 07, 2026, 04:15 AM IST
Neerav Modi

ಸಾರಾಂಶ

ಯುರೋಪಿನ ಮಾನವ ಹಕ್ಕುಗಳ ಕೋರ್ಟ್‌ನಲ್ಲಿ ಗಡೀಪಾರು ವಿರುದ್ಧದ ಕಾನೂನು ಹೋರಾಟದಲ್ಲಿ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್‌ ಮೋದಿಗೆ ಹಿನ್ನಡೆ ಆಗಿದೆ. ಹೀಗಾಗಿ ಭಾರತಕ್ಕೆ ಆತನ ಅವರ ಗಡೀಪಾರು ಸನ್ನಿಹಿತವಾದಂತಾಗಿದೆ ಎನ್ನಲಾಗಿದೆ.

 ನವದೆಹಲಿ: ಯುರೋಪಿನ ಮಾನವ ಹಕ್ಕುಗಳ ಕೋರ್ಟ್‌ನಲ್ಲಿ ಗಡೀಪಾರು ವಿರುದ್ಧದ ಕಾನೂನು ಹೋರಾಟದಲ್ಲಿ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್‌ ಮೋದಿಗೆ ಹಿನ್ನಡೆ ಆಗಿದೆ. ಹೀಗಾಗಿ ಭಾರತಕ್ಕೆ ಆತನ ಅವರ ಗಡೀಪಾರು ಸನ್ನಿಹಿತವಾದಂತಾಗಿದೆ ಎನ್ನಲಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಬಹುಕೋಟಿ ವಂಚನೆ-ಅಕ್ರಮ ಹಣ ವರ್ಗಾವಣೆ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಬಹುಕೋಟಿ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉದ್ಯಮಿ ನೀರವ್‌ ಮೋದಿ, ದೇಶಬಿಟ್ಟು ಬ್ರಿಟನ್‌ಗೆ ಪರಾರಿಯಾಗಿದ್ದಾರೆ. ಅವರನ್ನು ಗಡೀಪಾರು ಮಾಡುವ ಪ್ರಯತ್ನಗಳು ಹಲವು ವರ್ಷಗಳಿಂದ ನಡೆಯುತ್ತಿದ್ದು, ಏಪ್ರಿಲ್‌, 2026ರಲ್ಲಿ ಇದನ್ನು ಪ್ರಶ್ನಿಸಿ ನೀರವ್‌ ಮೋದಿ ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯದ ಮುಂದೆ ಹೋಗಿದ್ದರು. ಆದರೆ, ಈ ಬಗ್ಗೆ ನ್ಯಾಯಾಲಯದಿಂದ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಅವರ ಮುಂದಿದ್ದ ಎಲ್ಲ ಕಾನೂನು ಆಯ್ಕೆಗಳೂ ಮುಗಿದಿವೆ ಎನ್ನಲಾಗಿದೆ.

ಟನ್‌ ಗಡೀಪಾರು ಮಾಡಲು ಮುಂದಾಗಿದೆ

ಹೀಗಾಗಿ ನೀರವ್‌ ಮೋದಿ ಅವರನ್ನು ಬ್ರಿಟನ್‌ ಗಡೀಪಾರು ಮಾಡಲು ಮುಂದಾಗಿದ್ದು, ಕೇವಲ ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೇ ಬಾಕಿ ಇದೆ. ರಾಜತಾಂತ್ರಿಕ ಮೂಲಗಳ ಪ್ರಕಾರ ನೀರವ್‌ ಮೋದಿ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಯಾವಾಗ ಬೇಕಿದ್ದರೂ ಅವರು ಗಡೀಪಾರು ಆಗಬಹುದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಮಚರಿತ ಮಾನಸ ಸೇರಿ ಅಮೂಲ್ಯ ಕಾಣಿಕೆ ಪ್ರದರ್ಶನ
ಇಂಡೋನೇಷ್ಯಾಗೆ ಮೋದಿ : ಇಂದು ಬ್ರಹ್ಮೋಸ್‌ ಡೀಲ್‌?