ಈಗ ಫ್ರಾನ್ಸಲ್ಲೂ ಜೆನ್‌ಝೀ ದಂಗೆ!

KannadaprabhaNewsNetwork |  
Published : Oct 04, 2026, 02:00 AM IST
ಫ್ರಾನ್ಸ್  | Kannada Prabha

ಸಾರಾಂಶ

ಬಾಂಗ್ಲಾದೇಶ, ನೇಪಾಳ, ಭಾರತದ ಬಳಿಕ ಇದೀಗ ಫ್ರಾನ್ಸ್‌ನ ಜೆನ್‌-ಝೀಗಳು ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ.

- ಶಿಕ್ಷಣ ವ್ಯವಸ್ಥೆ ವಿರುದ್ಧ ಭಾರತದ ಜಿರಳೆ ಪಕ್ಷ ರೀತಿ ವಿದ್ಯಾರ್ಥಿಗಳು ಬೀದಿಗೆ

- ಅಂಗಡಿ ಲೂಟಿ, ಬೆಂಕಿ । ದೇಶದಲ್ಲಿ 100 ಶಾಲೆ ಬಂದ್‌ । 200 ಜನರ ಸೆರೆ

---

ಜೆನ್‌ಝೀ ಕಿಚ್ಚಿಗೆ

ಕಾರಣ ಏನು?

- ಫ್ರಾನ್ಸ್‌ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹದಗೆಟ್ಟ ಸರ್ಕಾರಿ ಶಾಲೆಗಳು

- ಕ್ಲಾಸಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳ ತುರುಕುವುದಕ್ಕೆ ಆಕ್ರೋಶ

- ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲ. ಜತೆಗೆ ಶಿಕ್ಷಕರ ಭಾರಿ ಕೊರತೆ

- ವಿದ್ಯಾರ್ಥಿಗಳಲ್ಲಿ ಮಡುಗಟ್ಟಿದ್ದ ಆಕ್ರೋಶ ಇದೀಗ ಏಕಕಾಲಕ್ಕೆ ಭುಗಿಲು- ಶಿಕ್ಷಣದ ಮೇಲೆ ಹೂಡಿಕೆ ಮಾಡಿ, ಶಾಲೆಯ ಕಟ್ಟಡ ಅಭಿವೃದ್ಧಿಗೆ ಆಗ್ರಹ

==

ಪ್ಯಾರಿಸ್‌: ಬಾಂಗ್ಲಾದೇಶ, ನೇಪಾಳ, ಭಾರತದ ಬಳಿಕ ಇದೀಗ ಫ್ರಾನ್ಸ್‌ನ ಜೆನ್‌-ಝೀಗಳು ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳು, ಶಿಕ್ಷಕರ ಕೊರತೆಯಂತಹ ಸಮಸ್ಯೆ ಮುಂದಿಟ್ಟುಕೊಂಡು ಬೃಹತ್‌ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಪ್ರತಿಭಟನೆಯಲ್ಲಿ ನೆರೆ ದೇಶಗಳಿಂದ ವಲಸೆ ಬಂದಿರುವ ಸಾವಿರಾರು ಜನರು ಕೂಡಾ ಸೇರಿಕೊಂಡು ಶಾಲೆ, ಕಟ್ಟಡಗಳಿಗೆ ಬೆಂಕಿ ಹಚ್ಚುವ, ಮಾಲ್‌ಗಳನ್ನು ಲೂಟಿ ಮಾಡುವ ದುಷ್ಕೃತ್ಯ ಎಸಗುತ್ತಿದ್ದಾರೆ.

ಹೀಗಾಗಿ ದೇಶದಲ್ಲಿ ಪರಿಸ್ಥಿತಿ ಕೈಮೀರಿದ್ದು, ದೇಶಾದ್ಯಂತ 1000ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ 2000ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಕೆಲವರನ್ನು ಬಂಧಿಸಿದ್ದಾರೆ. ಅತ್ತ ಹೋರಾಟದ ಬಿಸಿ ತಟ್ಟುತ್ತಿದ್ದಂತೆ ಹಿಂಸೆಯನ್ನು ಖಂಡಿಸಿರುವ ಸರ್ಕಾರ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿದೆ.

ಹೋರಾಟ ಏಕೆ?:

ಫ್ರಾನ್ಸ್‌ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಮಡುಗಟ್ಟಿದ್ದ ಆಕ್ರೋಶ ಇದೀಗ ಏಕಕಾಲಕ್ಕೆ ಭುಗಿಲೆದ್ದಿದೆ. ತರಗತಿಯಲ್ಲಿ ಹಿಡಿಸುವುದಕ್ಕಿಂತ ಹೆಚ್ಚು ಮಕ್ಕಳನ್ನು ತುರುಕುವುದು, ಶಿಥಿಲವಾಗಿರುವ ಕಟ್ಟಡ, ಶಿಕ್ಷಕರ ಕೊರತೆ ಹಾಗೂ ಅವರ ಅನುಪಸ್ಥಿತಿ, ಬೋಧಕರಿಗೆ ಕಡಿಮೆ ವೇತನ, ಹಿನ್ನೆಲೆ ಆಧರಿತ ತಾರತಮ್ಯ ಇತ್ಯಾದಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಜತೆಗೆ ಬಿರುಬೇಸಿಗೆಯೊಂದಿಗೆ ಸೆಣಸಲು ಅಗತ್ಯ ವ್ಯವಸ್ಥೆಗಳು ಇಲ್ಲದಿರುವುದೂ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಶಿಕ್ಷಣದ ಮೇಲೆ ಹೂಡಿಕೆ ಮಾಡಿ, ಶಾಲೆಯ ಕಟ್ಟಡಗಳನ್ನು ಅಭಿವೃದ್ಧಿಪಡಿಸಿ ಹಾಗೂ ಹೆಚ್ಚು ಶಿಕ್ಷಕರನ್ನು ನೇಮಿಸಿಕೊಳ್ಳಿ ಎಂಬುದು ಯುವಕರ ಆಗ್ರಹವಾಗಿದೆ.

ಹಿಂಸಾಚಾರ:

ಶಾಲೆಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಕೋರಿ ಕ್ರೆಟೈಲ್‌ನಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸೆ.17 ರಂದು ಶಾಲೆಗಳನ್ನು ಮುಚ್ಚಿ ಪ್ರತಿಭಟನೆ ಆರಂಭಿಸಿದ್ದರು. ಕ್ರಮೇಣ ಇದು ದೇಶಾದ್ಯಂತ ವ್ಯಾಪಿಸಿತು. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಅಧಿಕಾರಿಗಳು ಬಲಪ್ರಯೋಗಕ್ಕೆ ಆದೇಶಿಸಿದ್ದು ಹಿಂಸೆಗೆ ನಾಂದಿ ಹಾಡಿತು. ಜೊತೆಗೆ ಎಡಪಂಥೀಯ ನಾಯಕರು, ಹಿಂಸೆ ಕಾನೂನುಬದ್ಧವಾಗಿದೆ ಎಂದು ನೀಡಿದ ಹೇಳಿಕೆ ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿದೆ.

ಹೀಗಾಗಿ ವಿದ್ಯಾರ್ಥಿಗಳು ಮತ್ತು ಅವರೊಂದಿಗೆ ಸೇರಿಕೊಂಡು ವಲಸಿಗ ದುಷ್ಕರ್ಮಿಗಳು ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೇ ಪೊಲೀಸರರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಅಲ್ಲದೆ ಹಲವು ಕಡೆ ಕಟ್ಟಡ, ಶಾಲೆ, ಶಿಕ್ಷಕರ ಮೇಲೆ ದಾಳಿ ನಡೆಸುವ, ಪೊಲೀಸರ ಮೇಲೆ ಆ್ಯಸಿಡ್‌ ದಾಳಿ ನಡೆಸುವ ಹೀನ ಕೃತ್ಯವನ್ನೂ ನಡೆಸಿದ್ದಾರೆ. ಅಲ್ಲದೆ ಪ್ರತಿಭಟನೆ ವೇಳೆ ಹಲವರು ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದ್ದು, ಪ್ರತಿಭಟನೆಯನ್ನು ವಲಸಿಗರು ಹೈಜಾಕ್‌ ಮಾಡಿರುವುದು ಖಚಿತವಾಗುವಂತೆ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದಿಲ್ಲೀಲು ಮೊಳಗಿದ ಸಿಇಸಿ ವಿರುದ್ಧ ಘರ್ಜನೆ
ದಾಳಿಕೋರ ಸಹ-ಪೈಲಟ್‌ಗೆ ಅಲ್‌-ಖೈದಾ ಉಗ್ರರ ನಂಟು