ಇರಾನ್‌ ಕೈವಾಡ ಸಾಬೀತಾದ್ರೆ ತಕ್ಕ ಶಾಸ್ತಿ : ಟ್ರಂಪ್‌

KannadaprabhaNewsNetwork |  
Published : Oct 03, 2026, 03:15 AM IST
Donald Trump

ಸಾರಾಂಶ

ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಅಮೆರಿಕದ 9/11 ಮಾದರಿ ಪತನಕ್ಕೆತ್ನಿಸಿದ ಕೃತ್ಯದ ಹಿಂದೆ ಇರಾನ್‌ ಕೈವಾಡವಿರುವ ಶಂಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ ಹಾಗೂ ಇದು ನಿಜ ಎಂದು ಕಂಡು ಬಂದರೆ ಇರಾನ್ ಮೇಲೆ ಕಠಿಣ ದಾಳಿಯ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌: ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಅಮೆರಿಕದ 9/11 ಮಾದರಿಯಲ್ಲಿ ಪತನಕ್ಕೆತ್ನಿಸಿದ ಕೃತ್ಯದ ಹಿಂದೆ ಇರಾನ್‌ ಕೈವಾಡವಿರುವ ಶಂಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ ಹಾಗೂ ಇದು ನಿಜ ಎಂದು ಕಂಡು ಬಂದರೆ ಇರಾನ್ ಮೇಲೆ ಕಠಿಣ ದಾಳಿಯ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, ‘ನಮಗೆ ಕೇಳಿ ಬಂದಿರುವ ಮಾಹಿತಿ ಪ್ರಕಾರ ಇರಾನ್‌ ಕೈವಾಡ ನಿಜ, ಆದರೆ ಈ ಕುರಿತು ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಆ ಷಡ್ಯಂತ್ರದ ಹಿಂದೆ ಇರಾನ್‌ ಕೈವಾನ ಇರುವುದು ಸ್ಪಷ್ಟವಾದರೆ ಕಠಿಣ ದಾಳಿ ನಡೆಸುವ ಮೂಲಕ ಸೂಕ್ತ ಪ್ರತ್ಯುತ್ತರ ನೀಡಲಾಗುವುದು’ ಎಂದರು.

ಮಾಹಿತಿ ಕಲೆ ಹಾಕುತ್ತಿದ್ದೇವೆ

‘ನಾವು ಆ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಲಿಂಕ್‌ ಇದೆ ಎಂದು ಈಗಲೇ ಹೇಳುವುದು ಕಷ್ಟ

ಆದರೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ‘ದಾಳಿಕೋರ ಪೈಲಟ್‌ಗೂ ಇರಾನ್‌ಗೂ ಲಿಂಕ್‌ ಇದೆ ಎಂದು ಈಗಲೇ ಹೇಳುವುದು ಕಷ್ಟ. ವಾಸ್ತವ ತಿಳಿಯಲು ಕೆಲವು ದಿನ ಬೇಕು’ ಎಂದರು.

ಟ್ರಂಪ್‌ ಅವರು ಗುರುವಾರವಷ್ಟೇ ವಿಮಾನ ಪತನಗೊಳಿಸುವ ಸಹಪೈಲಟ್‌ನ ಪ್ರಯತ್ನವನ್ನು ಜೀವದ ಹಂಗು ತೊರೆದು ವಿಫಲಗೊಳಿಸಿದ್ದಕ್ಕಾಗಿ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚರ್‌ ಅವರನ್ನು ಹೀರೋ ಎಂದು ಕರೆದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

SIR ವೇಳೆ ಕೈಬಿಟ್ಟ ಮತದಾರರ ಹೆಸರು ಸೇರ್ಪಡೆಗೆ ಅಭಿಯಾನ
ದಾಳಿ ವೇಳೆ ಹನುಮಾನ್‌ ಚಾಲೀಸಾ ಪಠಿಸ್ತಿದ್ದೆ : ಹೀರೋ ಪೈಲಟ್‌