ಪಾಕ್‌ನಲ್ಲಿ ಮತ್ತೆ ಅನಾಮಿಕನ ಆಟಪುಲ್ವಾಮಾ ಮಾಸ್ಟರ್‌ಮೈಂಡ್‌, ಹಮ್ಜಾ ದುರಂಧರ್‌ಗೆ ಬಲಿ- ಪಿಒಕೆನಲ್ಲಿ ಅಪರಿಚಿತರ ಗುಂಡಿನ ದಾಳಿ- 40 ಯೋಧರ ಹತ್ಯೆಗೈದವ ಕಡೆಗೂ ಹತ

KannadaprabhaNewsNetwork |  
Published : May 22, 2026, 03:15 AM IST
ಹಜ್ಮಾ  | Kannada Prabha

ಸಾರಾಂಶ

: ಅನಾಮಧೇಯರ ಗುಂಡಿಗೆ ಪಾಕಿಸ್ತಾನದಲ್ಲಿ ಉಗ್ರರ ಹತ್ಯೆ ಸರಣಿ ಮುಂದುವರೆದಿದೆ. 2019ರಲ್ಲಿ 40 ಸಿಆರ್‌ಪಿಎಫ್ ಯೋಧರ ಬಲಿ ಪಡೆದಿದ್ದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌, ಅಲ್‌- ಬದ್ರ್‌ ಸಂಘಟನೆ ಕಮಾಂಡರ್‌ ಹಮ್ಜಾ ಬುರ್ಹಾನ್‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆಯಲ್ಲಿ) ಅಪರಿಚಿತರ ದಾಳಿಗೆ ಬಲಿಯಾಗಿದ್ದಾನೆ.

ಪುಲ್ವಾಮಾ ದಾಳಿ ಪುಲ್ವಾಮಾದಲ್ಲಿ 2019ರಲ್ಲಿ ಜೈಷ್‌ ನಡೆಸಿದ್ದ ದಾಳಿ ಹಿಂದೆ ಈತನ ಕೈವಾಡವಿತ್ತು. ಜೈಷ್‌ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಎಂಬಾತ ಸ್ಫೋಟಕ ತುಂಬಿದ್ದ ವಾಹನವನ್ನು ಸಿಆರ್‌ಪಿಎಫ್‌ ಯೋಧರ ವಾಹನಕ್ಕೆ ಡಿಕ್ಕಿ ಹೊಡೆಸಿ ಆತ್ಮಾಹುತಿ ದಾಳಿ ನಡೆಸಿದ್ದ. ಈ ಭೀಕರ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಹಮ್ಜಾ ಬುರ್ಹಾನ್ ಕೂಡ ಒಬ್ಬನಾಗಿದ್ದ. ಇದಾದ ನಂತರ ಭಾರತವು ಪಾಕ್‌ ಮೇಲೆ ಸರ್ಜಿಕಲ್ ದಾಳಿ ನಡೆಸಿತ್ತು.==

ಯಾರು ಈ ಹಮ್ಜಾ?

- ಹಮ್ಜಾ ಬುರ್ಹಾನ್ ಕಾಶ್ಮೀರದ ಪುಲ್ವಾಮಾ ಮೂಲದ ವ್ಯಕ್ತಿ

- ವಿದ್ಯಾಭ್ಯಾಸಕ್ಕೆ ಪಾಕ್‌ಗೆ ತೆರಳಿದ್ದ ವೇಳೆ ಉಗ್ರರ ನಂಟು

- ಅಲ್ಲಿಂದಲೇ ಕಾಶ್ಮೀರದಲ್ಲಿ ಉಗ್ರವಾದದ ಕೃತ್ಯಕ್ಕೆ ಬೆಂಬಲ

- ಪುಲ್ವಾಮಾ ದಾಳಿಗೆ ಅಗತ್ಯ ಗ್ರೆನೇಡ್‌, ಸ್ಫೋಟಕ ನೀಡಿದ್ದಶ್ರೀನಗರ: ಅನಾಮಧೇಯರ ಗುಂಡಿಗೆ ಪಾಕಿಸ್ತಾನದಲ್ಲಿ ಉಗ್ರರ ಹತ್ಯೆ ಸರಣಿ ಮುಂದುವರೆದಿದೆ. 2019ರಲ್ಲಿ 40 ಸಿಆರ್‌ಪಿಎಫ್ ಯೋಧರ ಬಲಿ ಪಡೆದಿದ್ದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌, ಅಲ್‌- ಬದ್ರ್‌ ಸಂಘಟನೆ ಕಮಾಂಡರ್‌ ಹಮ್ಜಾ ಬುರ್ಹಾನ್‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆಯಲ್ಲಿ) ಅಪರಿಚಿತರ ದಾಳಿಗೆ ಬಲಿಯಾಗಿದ್ದಾನೆ.

ಪಾಕಿಸ್ತಾನ ಮುಜಫ್ಫರಾಬಾದ್‌ನಲ್ಲಿ ಅನಾಮಿಕರು ಈತನ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ಹೇಳಿವೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದವನ್ನು ಬೆಂಬಲಿಸುತ್ತಿದ್ದವರಿಗೆ ಆದ ಅತಿದೊಡ್ಡ ಹಿನ್ನಡೆ.

ಯಾರೀತ?

ಈತ ಪುಲ್ವಾಮಾ ನಿವಾಸಿ ಅರ್ಜುಮಂದ್‌ ಗುಲ್ಜಾರ್‌ ದಾರ್‌ ಅಲಿಯಾಸ್‌ ಹಮ್ಜಾ ಬುರ್ಹಾನ್‌. ‘ಡಾಕ್ಟರ್‌’ ಎಂದೇ ತನ್ನ ಸ್ನೇಹಿತರಲ್ಲಿ ಜನಪ್ರಿಯ ಆಗಿದ್ದ. ಉನ್ನತ ಶಿಕ್ಷಣ ಪಡೆಯುವ ನೆಪದಲ್ಲಿ 2017ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ, ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದ್ರ್ ಸೇರಿಕೊಂಡು ಕಮಾಂಡರ್ ಹುದ್ದೆಗೇರಿದ್ದ. ಆ ಬಳಿಕ ಕಾಶ್ಮೀರಕ್ಕೆ ಮರಳಿ ಇಲ್ಲಿನ ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರೋತ್ಸಾಹಿಸುತ್ತಿದ್ದ.

2020ರ ಫೆ. 14ರಂದು ಪುಲ್ವಾಮಾ ದಾಳಿ ಸಂದರ್ಭದಲ್ಲಿ ಓವರ್‌ ಗ್ರೌಂಡ್‌ ವರ್ಕರ್‌ (ಸಹಾಯಕ) ಆಗಿ ಕೆಲಸ ಮಾಡಿದ್ದ. ಉಗ್ರರಿಗೆ ಗ್ರೆನೇಡ್‌ ಮತ್ತು ಸ್ಫೋಟಕಗಳನ್ನು ಒದಗಿಸಿದ್ದ. ಅದರ ಜತೆಗೆ 2020ರ ನ.18ರಂದು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ನಡೆದಿದ್ದ ಗ್ರೇನೆಡ್‌ ದಾಳಿಯಲ್ಲಿಯೂ ಈತನ ಕೈವಾಡವಿತ್ತು. 2022ರಲ್ಲಿ ಕೇಂದ್ರ ಸರ್ಕಾರ ಈತನನ್ನು ಉಗ್ರನೆಂದು ಘೋಷಿಸಿತ್ತು.

ನಿಗೂಢ ಹತ್ಯೆಗಳ ಸರಣಿ:

ಇತ್ತೀಚೆಗೆ ಪಾಕಿಸ್ತಾನದಲ್ಲಿ ‘ಧುರಂಧರ್‌’ ಗುಂಡಿಗೆ ಬಲಿಯಾಗುತ್ತಿರುವ ಉಗ್ರರ ಸಂಖ್ಯೆ ಮುಂದುವರೆದಿದೆ. ಕಳೆದ ತಿಂಗಳು ಲಷ್ಕರ್‌ ಸ್ಥಾಪಕ ಸದಸ್ಯ ಅಮೀರ್ ಹಮ್ಜಾ, ಮಾರ್ಚ್‌ನಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರ್‌ನ ಹಿರಿಯ ಸಹೋದರ ಮುಹಮ್ಮದ್ ತಾಹಿರ್ ಅನ್ವರ್ ಹತ್ಯೆಯಾಗಿತ್ತು. 7 ತಿಂಗಳಲ್ಲಿ ಈ ರೀತಿ ಕನಿಷ್ಠ 7 ಉಗ್ರರ ಹತ್ಯೆ ನಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜಾಲತಾಣದಲ್ಲಿ ನ್ಯಾಯಾಂಗ, ರಾಜಕೀಯ ವಿಡಂಬನೆ ಸುನಾಮಿಭಾರತದಲ್ಲಿ ದಿಢಿರ್‌ ಜಿರಳೆಜನತಾ ಪಾರ್ಟಿ ಸಂಚಲನ- ಸಿಜೆಐ ಸೂರ್ಯಕಾಂತ್‌ ಹೇಳಿಕೆ, ರಾಜಕೀಯ ವ್ಯವಸ್ಥೆ ವಿರೋಧಿಸಿ ಅಭಿಯಾನ- ಅಮೆರಿಕದಲ್ಲಿರುವ ಪುಣೆ ವಿದ್ಯಾರ್ಥಿ ಆರಂಭಿಸಿದ ಆಂದೋಲನ ಭಾರೀ ಸಕ್ಸಸ್‌- ಇನ್‌ಸ್ಟಾದಲ್ಲಿ 1.5 ಕೋಟಿ ಹಿಂಬಾಲಕರು । ಸಿಜೆಪಿಯ ಎಕ್ಸ್‌ ಖಾತೆಗೆ ನಿರ್ಬಂಧ
ಕೇರಳ ಶಾಸಕರ ಪ್ರಮಾಣ ವಚನ: ಕನ್ನಡದಲ್ಲಿ ಶಪಥ ಸ್ವೀಕರಿಸಿದ ಅಶ್ರಫ್‌