ಆನ್‌ಲೈನಲ್ಲಿ ಶಶಿ ತರೂರ್‌ ಹೆಸರು ದುರ್ಬಳಕೆಗೆ ದಿಲ್ಲಿ ಹೈ ಕೋರ್ಟ್‌ ಕಡಿವಾಣ

KannadaprabhaNewsNetwork |  
Published : May 11, 2026, 02:00 AM ISTUpdated : May 11, 2026, 04:19 AM IST
Shashi Tharoor

ಸಾರಾಂಶ

ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಹೆಸರು, ಫೋಟೋ, ವಿಡಿಯೋ ಇತ್ಯಾದಿಗಳ ದುರ್ಬಳಕೆಗೆ ಕಡಿವಾಣ ಹಾಕಿರುವ ದೆಹಲಿ ಹೈಕೋರ್ಟ್‌, ಅವರು ಪಾಕಿಸ್ತಾನವನ್ನು ಹೊಗಳುತ್ತಿರುವಂತೆ ಎಐ ಬಳಸಿ ಮಾಡಲಾದ ಡೀಪ್‌ ಫೇಕ್‌ ವಿಡಿಯೋವನ್ನು ತೆಗೆದುಹಾಕುವಂತೆ ಎಕ್ಸ್‌ಗೆ ಸೂಚಿಸಿದೆ.

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಹೆಸರು, ಫೋಟೋ, ವಿಡಿಯೋ ಇತ್ಯಾದಿಗಳ ದುರ್ಬಳಕೆಗೆ ಕಡಿವಾಣ ಹಾಕಿರುವ ದೆಹಲಿ ಹೈಕೋರ್ಟ್‌, ಅವರು ಪಾಕಿಸ್ತಾನವನ್ನು ಹೊಗಳುತ್ತಿರುವಂತೆ ಎಐ ಬಳಸಿ ಮಾಡಲಾದ ಡೀಪ್‌ ಫೇಕ್‌ ವಿಡಿಯೋವನ್ನು ತೆಗೆದುಹಾಕುವಂತೆ ಎಕ್ಸ್‌ಗೆ ಸೂಚಿಸಿದೆ.  

ಮೊಕದ್ದಮೆಗೆ ಸಂಬಂಧಿಸಿದಂತೆ ತೀರ್ಪು

ಶಶಿ ತರೂರ್‌ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾ। ಮಿನಿ ಪುಷ್ಕರ್ಣ, ‘ತರೂರ್‌ ಅವರ ಹೆಸರು, ಫೋಟೋ, ಸ್ವರ, ಮಾತನಾಡುವ ರೀತಿ, ಉತ್ಕೃಷ್ಟ ಪದವಳಕೆ ಸೇರಿದಂತೆ ಅವರ ವ್ಯಕ್ತಿತ್ವವನ್ನು ಬಳಸಿಕೊಂಡು ಡೀಪ್‌ಫೇಕ್‌ ವಿಡಿಯೋ, ಆಡಿಯೋ, ಇತ್ಯಾದಿಗಳನ್ನು ವಾಣಿಜ್ಯ, ರಾಜಕೀಯ ಅಥವಾ ಇನ್ನಿತರೆ ದುರುದ್ದೇಶಪೂರಿತ ಕೆಲಸಗಳಿಗೆ ಯಾವುದೇ ಮಾಧ್ಯಮದಲ್ಲಿ ಬಳಸಬಾರದು’ ಎಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ಜತೆಗೆ, ಅಂತಹ ರೀಲ್‌ಗಳನ್ನು ತೆಗೆದು ಹಾಕುವಂತೆ ಮೆಟಾಗೆ ನಿರ್ದೇಶಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

24 ಗಂಟೇಲಿ ವಿಡಿಯೋ ಗೇಮ್‌ ಜಿಟಿಎ 6 ₹ 35000 ಕೋಟಿ ಗಳಿಕೆ
ಬಿಜೆಪಿ, ಆರೆಸ್ಸೆಸ್‌ನದ್ದು ಅಸಭ್ಯ,ಪುರುಷವಾದಿ ಮನಃಸ್ಥಿತಿ: ರಾಗಾ