ವಿಪಕ್ಷಗಳ ವಾಟ್ಸಾಪ್‌ಗೆ ಕೇಂದ್ರದ ಮಸೂದೆ ಆಫ್!

KannadaprabhaNewsNetwork |  
Published : Apr 20, 2026, 01:45 AM ISTUpdated : Apr 20, 2026, 04:41 AM IST
Whatsapp

ಸಾರಾಂಶ

131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಪರೂಪದ ಒಗ್ಗಟ್ಟಿನಿಂದ ಸೋಲಿಸಿದ ವಿಪಕ್ಷಗಳು, ಇದನ್ನು ಸಾಧ್ಯವಾಗಿಸಲು ಮುಂಚಿನಿಂದಲೇ ರಣತಂತ್ರ ಹೆಣೆದಿದ್ದವು. ಮಸೂದೆಗೆ ಸೋಲುಣಿಸಲು ವಾಟ್ಸಾಪ್‌ ಗ್ರೂಪ್‌ ರಚಿಸಿ ಕಾರ್ಯತಂತ್ರ ರೂಪಿಸಲಾಗಿತ್ತು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

 ನವದೆಹಲಿ: ಶನಿವಾರ ಲೋಕಸಭೆಯಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು (ಮಹಿಳಾ ಮೀಸಲು ತಿದ್ದುಪಡಿ ಮಸೂದೆ) ಅಪರೂಪದ ಒಗ್ಗಟ್ಟಿನಿಂದ ಸೋಲಿಸಿದ ವಿಪಕ್ಷಗಳು, ಇದನ್ನು ಸಾಧ್ಯವಾಗಿಸಲು ಮುಂಚಿನಿಂದಲೇ ರಣತಂತ್ರ ಹೆಣೆದಿದ್ದವು. ಮಸೂದೆಗೆ ಸೋಲುಣಿಸಲು ವಾಟ್ಸಾಪ್‌ ಗ್ರೂಪ್‌ ರಚಿಸಿ ಕಾರ್ಯತಂತ್ರ ರೂಪಿಸಲಾಗಿತ್ತು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ಕೇಂದ್ರ ಸರ್ಕಾರ ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡನೆ ವಿಧೇಯಕ ಮಂಡನೆ ಮತ್ತು ಅದರ ಅಂಗೀಕಾರಕ್ಕೆ ಯತ್ನಿಸುತ್ತಿರುವ ವಿಷಯ ಗೊತ್ತಾಗುತ್ತಲೇ ವಿಪಕ್ಷಗಳು ಹಲವು ವಾಟ್ಸಾಪ್ ಗ್ರೂಪ್‌ ರಚಿಸಿದ್ದವು. ಅದರಲ್ಲಿ ಸಂಸದರ ಕಡ್ಡಾಯ ಹಾಜರಾತಿ, ಸರ್ಕಾರದ ಸಂಭಾವ್ಯ ಕ್ರಮಗಳಿಗೆ ಪ್ರತಿತಂತ್ರ ರೂಪಿಸುವುದು ಮತ್ತು ಕ್ಷೇತ್ರ ಮರುವಿಂಗಡಣೆ ಬಗ್ಗೆ ಪ್ರತಿ ನಿರೂಪಣೆಗಳನ್ನು (ಕೌಂಟರ್‌ ನರೇಟಿವ್‌) ಚರ್ಚಿಸಲಾಗುತ್ತಿತ್ತು. 

ಗೈರು ಹಾಜರಾಗುವ ಸಾಧ್ಯತೆ ಇದೆಯೇ ಎಂದು ನಿಗಾ

ಯಾವುದೇ ಸಂಸದ ಗೈರು ಹಾಜರಾಗುವ ಸಾಧ್ಯತೆ ಇದೆಯೇ ಎಂದು ನಿಗಾ ಇಡಲಾಗಿತ್ತು. ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲವಾಗದಂತೆ ಸಮಗ್ರ ಮಾಹಿತಿ ಹಂಚಿಕೊಂಡು, ಸಂಪೂರ್ಣ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿತ್ತು. 

ಮಲ್ಲಿಕಾರ್ಜುನ ಖರ್ಗೆ ಸೂಚನೆ

ಸ್ವತಃ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಪಕ್ಷಗಳ ಸಂಸದರಿಗೆ, ‘ಯಾವುದೇ ಪ್ರಚೋದನೆಗೆ ಬಲಿಯಾಗಬೇಡಿ. ನಮ್ಮ ಪಕ್ಷ ಅಥವಾ ನಾಯಕರ ವಿರುದ್ಧ ಸರ್ಕಾರದವರು ಅವಹೇಳನಕಾರಿಯಾಗಿ ಮಾತನಾಡಿದರೂ ತಾಳ್ಮೆ ಕಳೆದುಕೊಳ್ಳಬೇಡಿ. ಸಭಾತ್ಯಾಗ ಮಾಡಬೇಡಿ. ಸರ್ಕಾರದಿಂದ ಎಂಥ ಹೇಳಿಕೆಗಳು ಬಂದರೂ ಶಾಂತವಾಗಿ ವರ್ತಿಸಿ’ ಎಂದು ಸೂಚನೆ ನೀಡಿದ್ದರು.  

ಹೀಗಾಗಿ ವಿಪಕ್ಷಗಳು ಅಂದುಕೊಂಡಂತೆಯೇ ಒಗ್ಗಟ್ಟಿನಿಂದ ವರ್ತಿಸಿ, ಮಸೂದೆಯನ್ನು ಸೋಲಿಸುವಲ್ಲಿ ಸಫಲವಾದವು ಎಂದು ತಿಳಿದುಬಂದಿದೆ.

ರಣನೀತಿ- ಮಹಿಳಾ ಮೀಸಲು ತಿದ್ದುಪಡಿಬಿಲ್‌ ಸಂದೇಹಗಳಿಗೆ ಕೇಂದ್ರಸರ್ಕಾರದ ಸವಿಸ್ತಾರ ಉತ್ತರ- ವಿವರ ಪುಟ 7--ವಾಟ್ಸಾಪ್‌ ರಣನೀತಿ ಹೇಗೆ?- ಕೇಂದ್ರವು ಮಸೂದೆ ಮಂಡಿಸುವ ನಿರ್ಧಾರ ಮಾಡಿದ ಬೆನ್ನಲ್ಲೇ ವಿಪಕ್ಷಗಳು ಒಗ್ಗಟ್ಟು- ವಾಟ್ಸಾಪ್ ಗ್ರೂಪ್ ರಚಿಸಿ ಎಲ್ಲ ವಿಪಕ್ಷಗಳ ಸಂಸದರ ಸೇರ್ಪಡೆ, ಅದರಲ್ಲಿ ಸಂವಹನ- ಸಂಸದರ ಕಡ್ಡಾಯ ಹಾಜರಾತಿ ಮೇಲೆ ನಿಗಾ , ಸರ್ಕಾರದ ಕ್ರಮಗಳಿಗೆ ಪ್ರತಿತಂತ್ರ

- ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲವಾಗದಂತೆ ಸಮಗ್ರ ಮಾಹಿತಿ ವಿನಿಮಯ

- ಗ್ರೂಪ್‌ನಲ್ಲಿ ಖುದ್ದು ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಪ್ರತಿಪಕ್ಷ ನಾಯಕ ಖರ್ಗೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಿಮಾಚಲ ನೌಕರರ ವೇತನಕ್ಕೂ ದುಡ್ಡಿಲ್ಲ!
ಲೋಕಸಭೆಯಲ್ಲಿ ಮಸೂದೆ ಸೋಲಿಸಿ ಕಾಂಗ್ರೆಸ್ಸಿಂದ ಭ್ರೂಣಹತ್ಯೆಯಂಥ ಪಾಪ ಕೃತ್ಯ : ಮೋದಿ