ಎಂಫಿಲ್‌ಗೆ ಮಾನ್ಯತೆ ಇಲ್ಲ: ತಕ್ಷಣದಿಂದ ಪ್ರವೇಶ ರದ್ದು

KannadaprabhaNewsNetwork |  
Published : Dec 28, 2023, 01:46 AM IST
ಯುಜಿಸಿ | Kannada Prabha

ಸಾರಾಂಶ

ಮಾಸ್ಟರ್‌ ಆಫ್‌ ಫಿಲಾಸಫಿ (ಎಂಫಿಲ್‌) ಕೋರ್ಸ್‌ಗೆ ಮಾನ್ಯತೆ ಇಲ್ಲ. ಹಾಗಾಗಿ ಈ ಕೋರ್ಸ್‌ಗೆ ದಾಖಲಾಗುವುದನ್ನು ವಿದ್ಯಾರ್ಥಿಗಳು ತಕ್ಷಣದಿಂದಲೇ ಕೈಬಿಡಬೇಕು ಮತ್ತು ಇದನ್ನು ಒಂದು ಪದವಿಯಂತೆ ಆಫರ್‌ ಮಾಡುವುದನ್ನು ಶಿಕ್ಷಣ ಸಂಸ್ಥೆಗಳು ಬಿಡಬೇಕು ಎಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ.

ನವದೆಹಲಿ: ಮಾಸ್ಟರ್‌ ಆಫ್‌ ಫಿಲಾಸಫಿ (ಎಂಫಿಲ್‌) ಕೋರ್ಸ್‌ಗೆ ಮಾನ್ಯತೆ ಇಲ್ಲ. ಹಾಗಾಗಿ ಈ ಕೋರ್ಸ್‌ಗೆ ದಾಖಲಾಗುವುದನ್ನು ವಿದ್ಯಾರ್ಥಿಗಳು ತಕ್ಷಣದಿಂದಲೇ ಕೈಬಿಡಬೇಕು ಮತ್ತು ಇದನ್ನು ಒಂದು ಪದವಿಯಂತೆ ಆಫರ್‌ ಮಾಡುವುದನ್ನು ಶಿಕ್ಷಣ ಸಂಸ್ಥೆಗಳು ಬಿಡಬೇಕು ಎಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ.

‘ಕೆಲವು ವಿವಿಗಳು ಎಂಫಿಲ್‌ ಅಧ್ಯಯನಕ್ಕಾಗಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿರುವುದು ಯುಜಿಸಿಯ ಗಮನಕ್ಕೆ ಬಂದಿದೆ. ಅಲ್ಲದೇ ಇದು ಮಾನ್ಯತೆ ಹೊಂದಿಲ್ಲದ ಪದವಿ ಎಂಬುದನ್ನು ವಿದ್ಯಾರ್ಥಿಗಳ ಗಮನಕ್ಕೆ ತರಲಾಗುತ್ತಿಲ್ಲ. ಹೀಗಾಗಿ ಯುಜಿಸಿಯ ನಿಯಮದಂತೆ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗಳು ಎಂಫಿಲ್‌ ಅನ್ನು ಪದವಿಯಂತೆ ಆಫರ್‌ ಮಾಡಬಾರದು’ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್‌ ಜೋಶಿ ಹೇಳಿದ್ದಾರೆ.ಅಲ್ಲದೇ 2023-24ನೇ ಶೈಕ್ಷಣಿಕ ವರ್ಷದಿಂದ ಎಂಫಿಲ್‌ಗೆ ಪ್ರವೇಶಾತಿ ನೀಡುವುದನ್ನು ಶೈಕ್ಷಣಿಕ ಸಂಸ್ಥೆಗಳು ನಿಲ್ಲಿಸಬೇಕು. ಅಲ್ಲದೇ ವಿದ್ಯಾರ್ಥಿಗಳು ಇದಕ್ಕೆ ಸೇರುವುದನ್ನು ಬಿಡಬೇಕು ಎಂದು ಸಹ ಸೂಚಿಸಿದೆ. ಎಂಫಿಲ್‌ಗೆ ಪದವಿ ಮಾನ್ಯತೆ ನೀಡುವುದನ್ನು 2022ರ ನವೆಂಬರ್‌ನಲ್ಲಿ ಯುಜಿಸಿ ಅಂತ್ಯಗೊಳಿಸಿತ್ತು. ಆದರೆ ಪಿಎಚ್‌ಡಿ ನಿಯಮಾವಳಿಯ ಅಧಿಸೂಚನೆಗೂ ಮೊದಲು ಪ್ರಾರಂಭವಾದ ಎಂಫಿಲ್‌ ಕೋರ್ಸ್‌ಗಳಿಗೆ ಈ ಆದೇಶ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಸ್ತುತ ಅಧ್ಯಯನ ಆರಂಭಿಸಿರುವ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಅನುಮತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!