ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್‌-16 ರಷ್ಯಾದಿಂದ ಧ್ವಂಸ

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 05:41 AM IST
ದಾಳಿ | Kannada Prabha

ಸಾರಾಂಶ

ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್‌ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿದೆ. ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದೆ  

ಕೀವ್‌: ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್‌ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿದೆ. ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದೆ ಹಾಗೂ ಅದರಲ್ಲಿದ್ದ ಪೈಲಟ್‌ನನ್ನು ಹತ್ಯೆ ಮಾಡಿದೆ.

ಯುದ್ಧದಲ್ಲಿ ಇದು ಉಕ್ರೇನ್‌ನ ಎಫ್‌-16 ಯುದ್ಧ ವಿಮಾನ ಧ್ವಂಸ ಇದೇ ಮೊದಲು. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಶಾಂತಿ ಮಾತುಕತೆಯ ಪ್ರಸ್ತಾಪ ನಡೆಯುತ್ತಿರುವ ನಡುವೆಯೇ ದಾಳಿ ನಡೆದಿದೆ.

ಈ ಬಗ್ಗೆ ಉಕ್ರೇನ್ ವಾಯುಪಡೆಯ ಸಂವಹನ ವಿಭಾಗದ ಮುಖ್ಯಸ್ಥ ಯೂರಿ ಇಹ್ನಾತ್‌ ಪ್ರತಿಕ್ರಿಯಿಸಿದ್ದು, ‘ಇದುವರೆಗಿನ ಯುದ್ಧದಲ್ಲಿ ರಷ್ಯಾ ಅತಿದೊಡ್ಡ ದಾಳಿ ನಡೆಸಿದೆ. ರಾತ್ರೋರಾತ್ರಿ ಜನವಸತಿ, ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು 477 ಡ್ರೋನ್ , 60 ಕ್ಷಿಪಣಿ ಸೇರಿದಂತೆ 537 ವೈಮಾನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಈ ಪೈಕಿ 249 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. 226 ಡ್ರೋನ್‌ಗಳು ಎಲೆಕ್ಟ್ರಾನಿಕ್‌ ಜಾಮ್‌ನಿಂದಾಗಿ ನಾಪತ್ತೆಯಾಗಿದೆ. ದಾಳಿಯಲ್ಲಿ ನಮ್ಮ ಒಬ್ಬ ನಾಗರಿಕ ಮಾತ್ರ ಸಾವನ್ನಪ್ಪಿದ್ದಾನೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಡಿಜಿ ಅರೆಸ್ಟ್‌ : ವೃದ್ಧಗೆ ₹1.3 ಕೋಟಿ ಪರಿಹಾರ
ಇಂದು ಬಂಗಾಳ ಹಂತ-1, ತಮಿಳುನಾಡು ಚುನಾವಣೆ