ತೈಲ ಅಗತ್ಯಗಳಿಗೆ ವಿದೇಶಗಳನ್ನೇ ಅವಲಂಬಿಸಿರುವ ಭಾರತ ಯುರೋಪ್‌ಗೆ ಅತಿದೊಡ್ಡ ತೈಲ ಪೂರೈಕೆ ದೇಶ!

KannadaprabhaNewsNetwork |  
Published : Nov 11, 2024, 01:00 AM ISTUpdated : Nov 11, 2024, 04:55 AM IST
ತೈಲ | Kannada Prabha

ಸಾರಾಂಶ

 ತನ್ನ ಬಹುತೇಕ ತೈಲ ಅಗತ್ಯಗಳಿಗೆ ವಿದೇಶಗಳನ್ನೇ ಅವಲಂಬಿಸಿರುವ ಭಾರತದ, ಇದೀಗ ಯುರೋಪ್‌ ದೇಶಗಳಿಗೆ ಅತಿದೊಡ್ಡ ತೈಲ ರಫ್ತು ದೇಶವಾಗಿ ಹೊರಹೊಮ್ಮಿದೆ.

ನವದೆಹಲಿ:ತನ್ನ ಬಹುತೇಕ ತೈಲ ಅಗತ್ಯಗಳಿಗೆ ವಿದೇಶಗಳನ್ನೇ ಅವಲಂಬಿಸಿರುವ ಭಾರತದ, ಇದೀಗ ಯುರೋಪ್‌ ದೇಶಗಳಿಗೆ ಅತಿದೊಡ್ಡ ತೈಲ ರಫ್ತು ದೇಶವಾಗಿ ಹೊರಹೊಮ್ಮಿದೆ. 2024ನೇ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಯುರೋಪ್‌ ದೇಶಗಳಿಗೆ ಭಾರತದ ತೈಲ ರಫ್ತಿನಲ್ಲಿ ಶೇ.58ರಷ್ಟು ಭಾರೀ ಏರಿಕೆ ಕಂಡುಬಂದಿದೆ.

ಇದಕ್ಕೆಲ್ಲಾ ಕಾರಣ ರಷ್ಯಾ- ಉಕ್ರೇನ್‌ ಯುದ್ಧ. ಹೌದು, ಉಕ್ರೇನ್‌ ಮೇಲಿನ ಯುದ್ಧದ ಬಳಿಕ ರಷ್ಯಾದ ಮೇಲ ನಿರ್ಬಂಧದ ಕ್ರಮವಾಗಿ ಆ ದೇಶದಿಂದ ತೈಲ ಆಮದನ್ನು ಯುರೋಪ್‌ ದೇಶಗಳು ನಿಷೇಧಿಸಿವೆ. ಹಾಗೆಂದು ಅವು ತೈಲ ಆಮದು ಮಾಡಿಕೊಳ್ಳದೇ ಇರಲು ಸಾಧ್ಯವಿಲ್ಲ.

ಇನ್ನೊಂದೆಡೆ ಭಾರತಕ್ಕೆ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಪೂರೈಕೆ ಮಾಡುತ್ತಿದೆ. ಹೀಗಾಗಿ ಭಾರತದ ಕಂಪನಿಗಳು ಹೀಗೆ ಆಮದು ಮಾಡಿಕೊಂಡ ಕಚ್ಚಾತೈಲವನ್ನು ಸಂಸ್ಕರಣೆ ಮಾಡಿ ಯುರೋಪ್‌ ದೇಶಗಳಿಗೆ ರಫ್ತು ಮಾಡಿವೆ. ಯುರೋಪ್‌ ದೇಶಗಳು ರಷ್ಯಾದಿಂದ ನೇರ ತೈಲ ಆಮದಿಗೆ ಮಾತ್ರ ನಿಷೇಧ ಹೇರಿವೆ. ರಷ್ಯಾದಿಂದ ಬೇರೆ ದೇಶಗಳು ಖರೀದಿ ಮಾಡಿ ಅದನ್ನು ಸಂಸ್ಕರಿಸಿ ಪೂರೈಕೆ ಮಾಡಿದರೆ ಅದರ ಖರೀದಿಗೆ ಯಾವುದೇ ನಿಷೇಧ ಹೇರಿಲ್ಲ. ಇದರ ಪರಿಣಾಮ ಭಾರತ ಇದೀಗ ಯುರೋಪ್‌ ದೇಶಗಳಿಗೆ ದೊಡ್ಡ ಮಟ್ಟದಲ್ಲಿ ತೈಲ ಪೂರೈಕೆ ಮಾಡುತ್ತಿದೆ.

‘ಐರೋಪ್ಯ ದೇಶಗಳಿಗೆ ಭಾರತ ಜಾಮ್‌ನಗರ, ವಡಿನಾರ್ (ಗುಜರಾತ್‌) ಮತ್ತು ಹೊಸ ಮಂಗಳೂರು ಸಂಸ್ಕರಣಾಗಾರದಿಂದ ತೈಲ ಉತ್ಪನ್ನಗಳು ರಫ್ತಾಗುತ್ತವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಪರೇಷನ್‌ ಸಿಂದೂರ 1ನೇ ದಿನವೇ ಭಾರತ ಸೋತಿತು: ಚವಾಣ್‌
ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌