ಭುವನೇಶ್ವರ: ತನ್ನ ಸಾವಿನ ಬಳಿಕ ಅಂಗಾಂಗ ದಾನ ಮಾಡಿದ 2ನೇ ತರಗತಿ ಬಾಲಕನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಿದ ಮನಮಿಡಿಯುವ ಘಟನೆ ಒಡಿಶಾದಲ್ಲಿ ನಡೆದಿದೆ.
ಈ ಹಿನ್ನೆಲೆಯಲ್ಲಿ ಆತನ ಪೋಷಕರು ಸುಭಜಿತ್‌ನ ಯಕೃತ್ತು, ಶ್ವಾಸಕೋಶ, ಕಣ್ಣು, ಹೃದಯ, ಕರುಳು ಮುಂತಾದ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದರು.
ಒಡಿಶಾ ಸರ್ಕಾರವು ಅಂಗಾಂಗ ದಾನ ಮಾಡಿದ ವ್ಯಕ್ತಿಗಳನ್ನು ಸರ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಪ್ರಕಟಿಸಿತ್ತು.