ಯುದ್ಧ ಮುಂದುವರಿಸಿದ್ದರೆ ಸ್ವಾಗತಿಸಬಹುದಿತ್ತು

KannadaprabhaNewsNetwork |  
Published : May 16, 2025, 02:08 AM IST
15ಎಚ್ಎಸ್ಎನ್20 :  | Kannada Prabha

ಸಾರಾಂಶ

ಇಡೀ ದೇಶದ ಜನ ಭಯೋತ್ಪಾದನೆ ವಿರುದ್ಧ ನಿಲ್ಲಬೇಕಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಾಗೂ ರಾಹುಲ್‌ ಗಾಂಧಿ ಅವರ ಸೂಚನೆಯಂತೆ ಬೆಂಬಲ ಕೊಟ್ಟಿದ್ದೇವೆ. ಅಮೆರಿಕಾ ಮಧ್ಯಸ್ಥಿಕೆ ವಹಿಸುವ ಬದಲು ಮೋದಿಯವರೇ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಕದನ ವಿರಾಮ ಆಗಿದೆ. ನಾವು ಭಯೋತ್ಪಾದನೆ ವಿರುದ್ಧ ಇರಬೇಕು. ಪಹಲ್ಗಾಮ್ ನರಮೇಧದಿಂದ ತಾಯಂದಿರು, ಮಕ್ಕಳು ಕಣ್ಣೀರಿಟ್ಟಿರುವುದನ್ನು ಯಾವತ್ತೂ ಮರೆಯಲು ಆಗುವುದಿಲ್ಲ. ಯುದ್ಧ ಮುಂದುವರಿಸಿದ್ದರೆ ಸ್ವಾಗತಿಸಬಹುದಿತ್ತು ಎಂದು ಸಂಸದ ಶ್ರೇಯಸ್‌ ಪಟೇಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ನಾವು ಭಯೋತ್ಪಾದನೆ ವಿರುದ್ಧ ಇರಬೇಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಯುದ್ಧ ನಡೆದಿದ್ದರೆ ಭಾರತವೇ ಗೆಲ್ಲುತ್ತಿತ್ತು. ಅವರಿಗೆ ಒಂದು ಪಾಠ ಕಲಿಸಬಹುದಿತ್ತು. ಅಮೆರಿಕಾ ಮಧ್ಯಸ್ಥಿಕೆ ವಹಿಸಿ ಅವರಿಗೆ ಹೆಸರು ಕೊಡುವ ಅಗತ್ಯವಿರಲಿಲ್ಲ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸೈನಿಕರ ಶೌರ್ಯದ ಸಂಕೇತವಾದ ಆಪರೇಷನ್ ಸಿಂದೂರದ ಸವಿನೆನಪಿಗಾಗಿ ವೀರಮರಣ ಹೊಂದಿದ ಯೋಧರಿಗೆ ನಮನ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ಮತ್ತು ಯೋಧನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮೂರ್ತಿ ದಂಪತಿಯನ್ನು ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಸನ್ಮಾನಿಸಿ, ಗೌರವಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಇಡೀ ದೇಶದ ಜನ ಭಯೋತ್ಪಾದನೆ ವಿರುದ್ಧ ನಿಲ್ಲಬೇಕಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಾಗೂ ರಾಹುಲ್‌ ಗಾಂಧಿ ಅವರ ಸೂಚನೆಯಂತೆ ಬೆಂಬಲ ಕೊಟ್ಟಿದ್ದೇವೆ. ಅಮೆರಿಕಾ ಮಧ್ಯಸ್ಥಿಕೆ ವಹಿಸುವ ಬದಲು ಮೋದಿಯವರೇ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಕದನ ವಿರಾಮ ಆಗಿದೆ. ನಾವು ಭಯೋತ್ಪಾದನೆ ವಿರುದ್ಧ ಇರಬೇಕು. ಪಹಲ್ಗಾಮ್ ನರಮೇಧದಿಂದ ತಾಯಂದಿರು, ಮಕ್ಕಳು ಕಣ್ಣೀರಿಟ್ಟಿರುವುದನ್ನು ಯಾವತ್ತೂ ಮರೆಯಲು ಆಗುವುದಿಲ್ಲ. ಯುದ್ಧ ಮುಂದುವರಿಸಿದ್ದರೆ ಸ್ವಾಗತಿಸಬಹುದಿತ್ತು. ದೇಶದ ಆರ್ಥಿಕತೆಗಾಗಿ ಕದನ ವಿರಾಮ ಎಂದು ಮಾಹಿತಿ ಕೊಟ್ಟಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಾಮೂಹಿಕವಾಗಿ ನಮ್ಮ ಬೆಂಬಲ ಇರುತ್ತದೆ. ರಾಹುಲ್‌ ಗಾಂಧಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಅಮೆರಿಕಾ ಶಹಬ್ಬಾಶ್ ಗಿರಿ ತೆಗೆದುಕೊಳ್ಳುವಂತಹದ್ದು ಏನು ಇತ್ತು. ಇದು ಪ್ರತಿಷ್ಠೆಯ ಪ್ರಶ್ನೆ, ಅಳಿವು- ಉಳಿವಿನ ಪ್ರಶ್ನೆ. ನಮ್ಮ ದೇಶಕ್ಕೆ ಆಗಿರಬಹುದು, ಪಾಕಿಸ್ತಾನಕ್ಕೆ ಆಗಿರಬಹುದು, ಅಮೆರಿಕಾ ಮಧ್ಯಸ್ಥಿಕೆ ವಹಿಸಿ ಅವರಿಗೆ ಹೆಸರು ಕೊಡುವ ಅಗತ್ಯವಿರಲಿಲ್ಲ. ಯುದ್ಧದಲ್ಲಿ ಎಷ್ಟೋ ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅವರು ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಅಂಥದ್ದರಲ್ಲಿ ಇವರು ಏಕಾಏಕಿ ಯುದ್ಧವನ್ನು ನಿಲ್ಲಿಸಿ ಅಮೆರಿಕಾದವರು ಹೆಸರು ತೆಗೆದುಕೊಳ್ಳುವುದು ಅನವಶ್ಯಕ. ಅವರು ಹೆಸರು ತೆಗೆದುಕೊಳ್ಳಬಾರದು ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ತಾರಚಂದನ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ, ಅಶ್ರು ಆಸೀಫ್‌, ಮೊಹಮ್ಮದ್ ಆರೀಫ್‌, ಹರೀಶ್, ಯುವ ಕಾಂಗ್ರೆಸ್‌ನ ಇಸ್ಮಾಯಿಲ್, ವಿವೇಕ್, ದರ್ಶನ್, ಮನು, ಅವಿನಾಶ್ ಇತರರು ಉಪಸ್ಥಿತರಿದ್ದರು.

----

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ