ಸರ್ಕಾರಿ ಶಾಲೆ ಗುಣಮಟ್ಟ ಶಿಕ್ಷಣದ ಕೇಂದ್ರವಾಗಲಿ

KannadaprabhaNewsNetwork |  
Published : Nov 19, 2024, 12:51 AM IST
ಶಿರ್ಷಿಕೆ-೧೮ಕೆ.ಎಂ.ಎಲ್‌.ಅರ್.೨-ಮಾಲೂರಿನ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರು ೧.೫೮ ಕೋಟಿ ರು.ಗಳ ನಾಲ್ಕು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಮೂಲಭೂತ ಸೌಕರ್ಯ ಕಲ್ಪಿಸಿದ ಕಾರಣ ಮಹಿಳಾ ಪಪೂ ಕಾಲೇಜಿನಲ್ಲಿ ಹೆಚ್ಚು ದಾಖಾಲಾತಿ ಆಗುತ್ತಿದೆ. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕಾಲೇಜಿನ ಕಟ್ಟಡ ನೂರು ವರ್ಷದ ಹಿಂದಿನದಾಗಿದ್ದು, ಕಟ್ಟಡ ಕೆಡವದೆ ಹೊಸ ರೂಪ ನೀಡಲು ಎಲ್ಲ ಸಹಕಾರ ನೀಡಲಾಗುವುದು.

ಕನ್ನಡ ಪ್ರಭವಾರ್ತೆ ಮಾಲೂರು

ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರಗಳಾಗಿ ಖಾಸಗಿ ಶಾಲೆಕ್ಕಿಂತ ಮಿಗಿಲಾಗಿದೆ ಎಂಬ ವಾತಾವರಣ ಸೃಷ್ಟಿಯಾಗಬೇಕು ಎಂದು ಶಾಸಕ ಕೆ.ವೈ,ನಂಜೇಗೌಡ ಹೇಳಿದರು.

ಅವರು ಪಟ್ಟಣದ ಮಹಿಳಾ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಒಂದು ಕೋಟಿ ಐವತ್ತೆಂಟು ಲಕ್ಷ ರು.ಗಳಲ್ಲಿ ನಿರ್ಮಿಸಲಾಗಿರುವ ನಾಲ್ಕು ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಾಲೇಜಿಗೆ ಸೌಲಭ್ಯ ಲಭ್ಯ

ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಾಸ್ತಿ ಸರ್ಕಾರಿ ಕಾಲೇಜು ಜಿಲ್ಲೆಯಲ್ಲೇ ಅತಿ ಹೆಚ್ಚು ದಾಖಲಾತಿ ಹೊಂದಿದೆ. ಆದರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಕಳೆದ ಎರಡು ವರ್ಷದಿಂದ ಇಳಿಕೆಯಾಗುತ್ತಿರುವುದು ಬೇಸರ ತರಿಸಿದೆ. ಕಳೆದ ಬಾರಿ ಶಾಸಕನಾಗಿ ಬಂದಾಗ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯವೇ ಇರಲಿಲ್ಲ. ಆಗ ದಾನಿಗಳ ಸಹಕಾರ ಪಡೆದು ಕಾಲೇಜುವರೆಗೂ ರಸ್ತೆ ನಿರ್ಮಿಸಿಕೊಡುವ ಜತೆಯಲ್ಲಿ ರಸ್ತೆ ದೀಪ, ಸಾರಿಗೆ ವ್ಯವಸ್ಥೆ ಕಲ್ಪಿಸಲಾಯಿತು ಎಂದರು.

ಕಟ್ಟಡ ನವೀಕರಣಕ್ಕೆ ನೆರವು

ಮೂಲಭೂತ ಸೌಕರ್ಯ ಕಲ್ಪಿಸಿದ ಕಾರಣ ಪಪೂ ಕಾಲೇಜಿನಲ್ಲಿ ಹೆಚ್ಚು ದಾಖಾಲಾತಿ ಆಗುತ್ತಿದೆ. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕಾಲೇಜಿನ ಕಟ್ಟಡ ನೂರು ವರ್ಷದ ಹಿಂದಿನದಾಗಿದ್ದು, ಕಟ್ಟಡ ಕೆಡವದೆ ಹೊಸ ರೂಪ ನೀಡಲು ಎಲ್ಲ ಸಹಕಾರ ನೀಡಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ,ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್‌ ,ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷಿನಾರಾಯಣ್‌ ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂಧನ್‌,ವಿಜಯನಾರಸಿಂಹ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!