ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲ್ಗರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಜರುಗಿದ ವಿ.ವಿ.ಯ 42ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ದೇಶದಲ್ಲಿ ಪುರುಷರು ಶೇ.75ರಷ್ಟು ಸಾಕ್ಷರತೆ ಹೊಂದಿದ್ದರೆ, ಮಹಿಳೆಯರಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಇದೆ. ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯವಿದ್ದು, ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.ನಳಂದಾ, ತಕ್ಷಶಿಲಾದಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಇತಿಹಾಸ ನಾವು ಹೊಂದಿದ್ದೇವೆ. ಹಿಂದೆ ದೇಶವನ್ನು ಸೋನೆ ಕೀ ಚಿಡಿಯಾ ಎಂದು ಕರೆಯಲಾಗಿತ್ತು. ಇದೀಗ ಮತ್ತೆ ಭಾರತವನ್ನು ವಿಶ್ವಗುರು ಮಾಡಬೇಕಿದೆ. ಸಮಾನತೆ, ವಸುದೈವ ಕುಟುಂಬಕಂ ಪರಿಕಲ್ಪನೆ ನಮ್ಮದಾಗಿದ್ದು, ಸರ್ವಜನರು ಸುಖದಿಂದ ಬಾಳುವಂತೆ ಮತ್ತು ಜನರು ನಿರುದ್ಯೋಗಿಯಾಗಿ ಬದುಕುವ ನಮ್ಮ ಚಿಂತನೆ ಎಲ್ಲೆಡೆ ಪಸರಿಸಬೇಕಿದೆ ಎಂದರು.
ಏಕ್ ಪೇಡ್ ಮಾ ಕೇ ನಾಮ್ ಅಭಿಯಾನ ಆಯೋಜಿಸಿ: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಏಕ್ ಪೇಡ್ ಮಾ ಕೇ ನಾಮ್ ಹೆಸರಿನಡಿ ಗಿಡ ನೆಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿದ್ದು, ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿ.ವಿ. ಗಳು ಮುಂದಿನ ವಾರದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಗಿಡ ನೆಡಬೇಕು. ತಾಯಿ ಮಕ್ಕಳನ್ನು ರಕ್ಷಿಸುವ ರೀತಿಯಲ್ಲಿ ಗಿಡಗಳನ್ನು ಸಂರಕ್ಷಿಸಬೇಕು ಎಂದು ವಿ.ವಿ.ಗಳಿಗೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯು ಶೇ.10ರಷ್ಟು ಅನುದಾನ ಮೀಸಲಿರಿಸಬೇಕೆಂದು ಆದೇಶಿಸಿದ್ದು ಸ್ವಾಗತಾರ್ಹ ಎಂದಿರುವ ಅವರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸ್ಥಾಪನೆಗೆ 10 ಎಕರೆ ಮತ್ತು ಮಲ್ಟಿ ಡಿಸಿಪ್ಲನರಿ ಸೆಂಟರ್ ಸ್ಥಾಪನೆಗೆ 25 ಎಕರೆ ಜಮೀನು ಗುಲಬರ್ಗಾ ವಿ.ವಿ.ಯಿಂದ ನೀಡಲಾಗುತ್ತಿದೆ. ಇದರಿಂದ ವಿ.ವಿ. ವಿದ್ಯಾರ್ಥಿಗಳಿಗೆ ದೊಡ್ಡ ಪ್ರಯೋಜನವಾಗಲಿದೆ ಎಂದರು.ಇಷ್ಟದ ವೃತ್ತಿಯಲ್ಲಿ ಉತ್ಸಾಹದಿಂದ ಮುನ್ನುಗ್ಗಿ: ಪ್ರೊ.ಸುನೀಲಕುಮಾರ್ ಸಿಂಗ್
ಸಾಧನೆಗೆ ನಂಬಿಕೆಯೇ ಕೀಲಿಕೈ. ನಿಮ್ಮ ಮೇಲಿನ ನಂಬಿಕೆಯನ್ನು ನೀವು ಯಾವಾಗಲು ಕಳೆದುಕೊಳ್ಳಬಾರದು. ಅದನ್ನು ಉಳಿಸಿಕೊಂಡು ಮುಂದೆ ಸಾಗಬೇಕು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಅದು ಎಂದಿಗೂ ನಿಲ್ಲಬಾರದು. ಜ್ಞಾನವು ಎಂತಹ ಸಂಪತ್ತೆಂದರೆ ಅದನ್ನು ಕೌಶಲ್ಯಪೂರ್ಣ ಕಳ್ಳನು ಕದಿಯಲು ಸಾಧ್ಯವಿಲ್ಲ ಎಂದರು.
ಮೂವರು ಸಾಧಕರಿಗೆ ಗೌಡಾ ಪ್ರದಾನ: ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ನ್ಯಾಯವಾದಿ ಅರ್ಚನಾ ಪ್ರದೀಪ ತಿವಾರಿ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಕೃಷಿ ತಜ್ಞ ಮತ್ತು ಶಿಕ್ಷಣ ಉದ್ಯಮಿ ಲಿಂಗರಾಜ ಬಸವರಾಜಪ್ಪ ಅಪ್ಪ ಅವರಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಮ ಕುಲಾಧಿಪತಿಗಳಾಗಿರುವ ಡಾ.ಎಂ.ಸಿ.ಸುಧಾಕರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
113 ಅಭ್ಯರ್ಥಿಗಳಿಗೆ ಪಿ.ಎಚ್.ಡಿ ಪದವಿ: ಕಲಾ ನಿಕಾಯದ 38, ಸಮಾಜ ವಿಜ್ಞಾನ ನಿಕಾಯದ 29, ವಿಜ್ಞಾನ ಮತ್ತು ತಮತ್ರಜ್ಞಾನ ನಿಕಾಯದ 26, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ 11 ಹಾಗೂ ಶಿಕ್ಷಣ ನಿಕಾಯದ 9 ಜನ ಸೇರಿದಂತೆ 113 ಅಭ್ಯರ್ಥಿಗಳಿಗೆ ಗಣ್ಯರು ಪಿ.ಎಚ್.ಡಿ.ಪದವಿ ಪ್ರದಾನ ಮಾಡಿದರು. ಇದರಲ್ಲಿ 67 ಪುರುಷ ಮತ್ತು 46 ಮಹಿಳಾ ಸಂಶೋಧನಾ ಅಭ್ಯರ್ಥಿಗಳಿದ್ದಾರೆ. ಘಟಿಕೋತ್ಸವ ಅಂಗವಾಗಿ ಒಟ್ಟಾರೆ 29,307 ಅಭ್ಯರ್ಥಿಗಳು ಪದವಿ ಹಾಗೂ ಸ್ನಾತಕ್ಕೋತ್ತರ ಪದವಿ ಪಡೆದರು.
ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜನಾಳ್ಕರ ಲಕ್ಷ್ಮಣ, ವಿತ್ತಾಧಿಕಾರಿ ಗಾಯತ್ರಿ ಸೇರಿದಂತೆ ವಿದ್ಯಾ ವಿಷಯಕ್, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯದ ಡೀನ್‌ಗಳು, ಬೋಧಕ-ಬೋಧಕೇತರ ವೃಂದ ಹಾಜರಾಗಿದ್ದರು.
ಮೂವರಿಗೆ ಗೌಡಾ ಪದವಿ ಪ್ರಧಾನ: ಗುವಿವಿ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ನ್ಯಾಯವಾದಿ ಅರ್ಚನಾ ಪ್ರದೀಪ ತಿವಾರಿ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಕೃಷಿ ತಜ್ಞ ಮತ್ತು ಶಿಕ್ಷಣ ಉದ್ಯಮಿ ಲಿಂಗರಾಜ ಬಸವರಾಜಪ್ಪ ಅಪ್ಪ ಅವರಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಮ ಕುಲಾಧಿಪತಿಗಳಾಗಿರುವ ಡಾ.ಎಂ.ಸಿ.ಸುಧಾಕರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.