ಕೊಳ್ಳೇಗಾಲ ಪಿಎಸಿಸಿಗೆ 13ಲಕ್ಷ ಲಾಭ: ಅಧ್ಯಕ್ಷ ಮಹದೇವಪ್ಪ

KannadaprabhaNewsNetwork | Published : Sep 13, 2024 1:44 AM

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯನ್ನು ಅಧ್ಯಕ್ಷ ಎಚ್ಎಂ ಮಹದೇವಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಸಕ್ತ 2023-24 ನೇ ಸಾಲಿನಲ್ಲಿ ₹13ಲಕ್ಷಕ್ಕೂ ಅಧಿಕ ಲಾಭ ದೊರೆತಿದೆ ಎಂದು ಅಧ್ಯಕ್ಷ ಎಚ್.ಎಂ.ಮಹದೇವಪ್ಪ ಹೇಳಿದರು. ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ನಮ್ಮ ಸಹಕಾರ ಸಂಘ ಲಾಭದತ್ತ ಸಾಗಿದ್ದು ಒಟ್ಟಾರೆ 5 ವರ್ಷಗಳಲ್ಲಿ ₹8.67ಕೋಟಿ ಕೆಸಿಸಿ ಬೆಳೆ ಸಾಲ, 6 ಟ್ರ್ಯಾಕ್ಟರ್ ಸಾಲ, ಮಧುವನಹಳ್ಳಿಯಲ್ಲಿ ರೈತರು, ಗ್ರಾಹಕರ ಅನುಕೂಲಕ್ಕಾಗಿ ಪಡಿತರೆ ವಿತರಣೆ, ರಸಗೊಬ್ಬರ ಮಾರಾಟಕ್ಕಾಗಿ ₹25ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಸಂಘದ ಮುಂಭಾಗದಲ್ಲಿ ಮಳಿಗೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜು ಮಾತನಾಡಿ, ಸಂಘವು ₹14ಕೋಟಿಗೂ ಅಧಿಕ ಮೊತ್ತದ ಬೆಳೆ ಸಾಲವನ್ನು 1147ಮಂದಿಗೆ ವಿತರಿಸಲಾಗಿದೆ, ಚಿನ್ನಾಭರಣ ಸಾಲವನ್ನು 122 ಮಂದಿಗೆ ₹46 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ನೀಡಲಾಗಿದೆ. ವ್ಯಾಪಾರಾಭಿವೃದ್ಧಿ ಸಾಲಕ್ಕಾಗಿ 433ಮಂದಿಗೆ ₹2.99ಕೋಟಿ ನೀಡಲಾಗಿದೆ. ರೈತರು ಹಾಗೂ ಸದಸ್ಯರ ಏಳ್ಗೆಗಾಗಿ ಸಂಘ ಎಲ್ಲಾರ ಸಹಕಾರದೊಂದಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲೂ ಸಹ ಸರ್ವ ಸದಸ್ಯರು, ಆಡಳಿತ ಮಂಡಳಿ ಸಹಕಾರ ಅತ್ಯಗತ್ಯ ಎಂದರು.

ಈ ವೇಳೆ ಈ ಸಾಲಿನ ಎಸ್ಎಸ್ಎಲ್‌‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಸದಸ್ಯರ ಮಕ್ಕಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಎಂ.ಶೀಲಾ, ನಿರ್ದೇಶಕರಾದ ಪಿ.ಬಿ.ಚಿಕ್ಕಬಸವೇಗೌಡ, ಎಸ್.ಶಿವಮೂರ್ತಿ, ಪಿ.ಮಹಾದೇವಸ್ವಾಮಿ, ಕೆ.ಎಸ್.ಮಹೇಶ್, ಎಸ್.ರಮೇಶ್, ಪಿ.ಸೋಮಶೇಖರ್, ಮಹೇಶ್, ಪಿ.ಬಾಲಸುಬ್ರಮಣ್ಯಸ್ವಾಮಿ, ಶೈಲಜಾ, ಜಿಲ್ಲಾ ಸಹಕಾರ ಕೇಂದ್ರ ಮೇಲ್ವಿಚಾರಕರು ಆರ್.ಕುಮಾರ್, ಮುಖ್ಯ ಕಾರ್ಯನಿರ್ವಾಹ ಣಾಧಿಕಾರಿ ಬಿ.ನಾಗರಾಜು, ಸದಸ್ಯರುಗಳಾದ ಅಣಗಳ್ಳಿ ಬಸವರಾಜು, ಮಠದ ಬೀದಿ ಬಸವರಾಜು, ಇನ್ನಿತರರಿದ್ದರು.

Share this article