ಗಜೇಂದ್ರಗಡ: ರೋಣ ಸಮೀಪದ ಜಿಗಳೂರು ಕ್ರಾಸ್ ಬಳಿ ಗುರುವಾರ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ನಿವಾಸಿಗಳ ಮನೆಗೆ ಶುಕ್ರವಾರ ಸಂಜೆ ಶಾಸಕ ಜಿ.ಎಸ್. ಪಾಟೀಲ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಅಪಘಾತದಲ್ಲಿ ಗಾಯಾಳುಗಳ ಕುಟುಬಸ್ಥರು ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಾಗ ಶಾಸಕರು ಜಿಮ್ಸ್ ಮುಖ್ಯಸ್ಥರಿಗೆ ದೂರವಾಣಿ ಮೂಲಕ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಗಾಯಾಳುಗಳ ಕುಟುಂಬಸ್ಥರು ದೂರುತ್ತಿದ್ದಾರೆ. ಹೀಗಾಗಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.ಈ ವೇಳೆ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಮುರ್ತುಜಾ ಡಾಲಾಯತ, ಎಸ್.ಆರ್. ರಾಮಜಿ, ಸಿದ್ದಪ್ಪ ಬಂಡಿ, ಎಚ್.ಎಸ್. ಸೋಂಪುರ, ಶ್ರೀಧರ ಬಿದರಳ್ಳಿ, ಪರಶುರಾಮ ಚಿಟಗಿ, ಎ.ಡಿ. ಕೋಲಕಾರ, ಅರ್ಜುನ ರಾಠೋಡ, ಹಸನ ತಟಗಾರ, ಶ್ರೀಧರ ಗಂಜಿಗೌಡರ, ಸಿದ್ದು ಗೊಂಗಡಶೆಟ್ಟಿಮಠ, ದಾವಲ ತಾಳಿಕೋಟಿ, ಸುರೇಶ ಚವಡಿ ಸೇರಿ ಇತರರು ಇದ್ದರು.